For Quick Alerts
ALLOW NOTIFICATIONS  
For Daily Alerts

ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿದ ಹೀರೋ ಮೊಟೊಕಾರ್ಪ್

|

ನವದೆಹಲಿ: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಆಟೋ ಉದ್ಯಮದ ಪ್ರತಿಷ್ಠಿತ ಹೀರೋ ಮೊಟೊಕಾರ್ಪ್ ತನ್ನ 2019-20 ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಲಾಭದಲ್ಲಿ 15% ಕುಸಿತವನ್ನು ಕಂಡಿದೆ.

ಕೊರೊನಾವೈರಸ್ ಲಾಕ್‌ಡೌನ್: ಮುಜರಾಯಿ ಇಲಾಖೆಯ ಆದಾಯಕ್ಕೆ ದೊಡ್ಡ ಹೊಡೆತಕೊರೊನಾವೈರಸ್ ಲಾಕ್‌ಡೌನ್: ಮುಜರಾಯಿ ಇಲಾಖೆಯ ಆದಾಯಕ್ಕೆ ದೊಡ್ಡ ಹೊಡೆತ

ಮಾರ್ಚ್ 31 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಹೀರೋ ಮೊಟೊಕಾರ್ಪ್‌ನ ನಿವ್ವಳ ಲಾಭ ₹ 620.71 ಕೋಟಿಗೆ ಇಳಿದಿದೆ ಎಂದು ಕಂಪನಿ ತಿಳಿಸಿದೆ.

ಮಾರ್ಚ್‌ನಲ್ಲಿ ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಕಂಪೆನಿಯ ರಿಟೇಲ್ ಮಾರಾಟದಲ್ಲಿ ಗಮನಾರ್ಹ ಕುಸಿತ ಕಂಡಿದೆ. ಚೀನಾದದಿಂದ ಸರಬರಾಜು ಆಗುತ್ತಿದ್ದ ಬಿಡಿ ಭಾಗಗಳು ಸರಬರಾಜು ಆಗದೇ ಇದ್ದಿದ್ದರಿಂದ ಏಪ್ರಿಲ್-ಮೇ ಅವಧಿಯಲ್ಲಿ ಹೀರೋ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

21% ನಿವ್ವಳ ಮಾರಾಟ ಕುಸಿತ

21% ನಿವ್ವಳ ಮಾರಾಟ ಕುಸಿತ

2019-20 ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿಯ ನಿವ್ವಳ ಮಾರಾಟವು 21% ರಷ್ಟು ಕುಸಿದು, 6,238.39 ಕೋಟಿ ರುಪಾಯಿಗೆ ಇಳಿದಿದೆ. ಇದರ ಪರಿಣಾಮವಾಗಿ ನಾಲ್ಕನೇ ತ್ರೈಮಾಸಿಕದ ವಾಹನ ಮಾರಾಟದಲ್ಲಿ 25.7% ರಷ್ಟು ಇಳಿಕೆಯಾಗಿ 132,300 ಯುನಿಟ್‌ಗಳಿಗೆ ತಲುಪಿದೆ.

ಮಾರಾಟವಾಗದ ಬಿಎಸ್-6 ವಾಹನಗಳು

ಮಾರಾಟವಾಗದ ಬಿಎಸ್-6 ವಾಹನಗಳು

ಲಾಕ್ ಡೌನ್ ಸಮಯದಲ್ಲಿ ಬಿಎಸ್-6 ವಾಹನಗಳು ಮಾರಾಟವಾಗದ ಕಾರಣ ಹೀರೋ ಕಂಪೆನಿಯು ಗಮನಾರ್ಹ ನಷ್ಟವನ್ನು ಅನುಭವಿಸಿದೆ. ಹೀರೋ, ಗಮನಾರ್ಹವಾದ ಷೇರುಗಳನ್ನು ಹೊಂದಿರುವ ಷೇರುದಾರರಿಗೆ, ದಾಸ್ತಾನುಗಳನ್ನು ಖರೀದಿಸಿರುವ ತನ್ನ ಎಲ್ಲ ವಿತರಕರಿಗೆ ಪರಿಹಾರವನ್ನು ನೀಡಲು ನಿರ್ಧರಿಸಿದೆ.

ಉದ್ಯಮದ ಎಲ್ಲ ಘಟಕಗಳಿಂದ ಬೆಂಬಲ ಪಡೆಯುತ್ತೇವೆ

ಉದ್ಯಮದ ಎಲ್ಲ ಘಟಕಗಳಿಂದ ಬೆಂಬಲ ಪಡೆಯುತ್ತೇವೆ

''ಕೋವಿಡ್ -19 ಸಾಂಕ್ರಾಮಿಕ ರೋಗವು ಆಟೋ ಉದ್ಯಮವನ್ನು ಹಿಂದಕ್ಕೆ ತಳ್ಳಿದೆ. ಹೀರೋ ಮೋಟಾರ್ಸ್‌ ಕೂಡ ಗಮನಾರ್ಹ ನಷ್ಟ ಅನುಭವಿಸಿದೆ. ಆದರೆ, ಇದರಿಂದ ವೇಗವಾಗಿ ಎದ್ದು ಬರಲು ಪ್ರಯತ್ನಿಸುತ್ತದೆ. ಉದ್ಯಮದ ಎಲ್ಲಾ ಭಾಗಗಳಿಂದ ಬೆಂಬಲವನ್ನು ಪಡೆಯಲು ನಾವು ಉತ್ಸುಕರಾಗಿದ್ದೇವೆ ಎನ್ನುತ್ತಾರೆ ಹೀರೋ ಮೊಟೊಕಾರ್ಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪವನ್ ಮುಂಜಾಲ್.

ಚಿಗುರಲು ಸಕಾರಾತ್ಮಕ ಅಂಶಗಳನ್ನು ಹೊಂದಿದ್ದೇವೆ

ಚಿಗುರಲು ಸಕಾರಾತ್ಮಕ ಅಂಶಗಳನ್ನು ಹೊಂದಿದ್ದೇವೆ

"2020 ನೇ ವರ್ಷ ಜಾಗತಿಕವಾಗಿ ಆಟೋ ಉದ್ಯಮಕ್ಕೆ ಸವಾಲಿನ ವರ್ಷವಾಗಿತ್ತು. ಹೀರೋ ಮೊಟೊಕಾರ್ಪ್‌ನಲ್ಲಿ ನಾವು ಕೆಲವು ಸಕಾರಾತ್ಮಕ ಅಂಶಗಳನ್ನು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಂದಿದ್ದೇವೆ. ನಾವು ನಿಧಾನಗತಿಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಅನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವ" ಎಂದು ಮುಂಜಾಲ್ ಹೇಳುತ್ತಾರೆ. (ಕೃಪೆ; ಲೈವ್ ಮಿಂಟ್).

Read more about: hero profit ಹೀರೋ ಲಾಭ
English summary

Hero MotoCorp sees 15% drop in Q4 profit

Hero MotoCorp Q4 Report: Company 15% Drop In Profit ahead of coronavirus lockdown.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X