For Quick Alerts
ALLOW NOTIFICATIONS  
For Daily Alerts

ಒಡೆದುಹೋಗುತ್ತಿದೆ ಹಿಂದೂಜಾ ಸಾಮ್ರಾಜ್ಯ; ಈ ತಿಂಗಳೊಳಗೆ ಆಗಬೇಕು ಆಸ್ತಿ ಹಂಚಿಕೆ

|

ನವದೆಹಲಿ, ನ. 17: ವಿಶ್ವದ ಪ್ರಮುಖ ಬ್ಯುಸಿನೆಸ್ ಫ್ಯಾಮಿಲಿಗಳಲ್ಲಿ ಒಂದೆನಿಸಿದ ಹಿಂದೂಜಾದ ವಾಣಿಜ್ಯ ಸಾಮ್ರಾಜ್ಯದ ಆಸ್ತಿ ಸದ್ಯದಲ್ಲೇ ಹಂಚಿಹೋಗಲಿದೆ. ವರದಿಗಳ ಪ್ರಕಾರ 14 ಬಿಲಿಯನ್ ಡಾಲರ್ (ಸುಮಾರು 1.14 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಹಿಂದೂಜಾ ಗ್ರೂಪ್‌ನ ಆಸ್ತಿ ಹಂಚಿಕೆ ಪ್ರಕ್ರಿಯೆ ಈ ತಿಂಗಳು ಮುಗಿಯುವ ನಿರೀಕ್ಷೆ ಇದೆ. ಬ್ರಿಟನ್‌ನ ಪ್ರಜೆಗಳಾಗಿರುವ ಹಿಂದೂಜಾ ಕುಟುಂಬದ ಸಹೋದರರು ಆರು ತಿಂಗಳ ಹಿಂದೆ ಆಸ್ತಿ ಹಂಚಿಕೆ ಪ್ರಕ್ರಿಯೆಗೆ ಅಂಕಿತ ಹಾಕಿದ್ದರು.

 

ಹಿಂದೂಜಾ ಗ್ರೂಪ್‌ನ ಆಸ್ತಿ ಹಂಚಿಕೆ ವಿಚಾರದಲ್ಲಿ ಈ ಹಿಂದೆ ಸಾಕಷ್ಟು ತಕರಾರುಗಳು ಇದ್ದವು. ಸಹೋದರರು ಮತ್ತು ಸಂಬಂಧಿಕರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು. ವಿವಿಧ ಕೋರ್ಟ್‌ಗಳಲ್ಲಿ ವ್ಯಾಜ್ಯಗಳು ದಾಖಲಾಗಿದ್ದವು. 2019ರಲ್ಲಿ ಲಂಡನ್ ಹೈಕೋರ್ಟ್‌ನಲ್ಲಿ ಒಂದು ಪ್ರಕರಣದ ವಿಚಾರಣೆಯೂ ಆರಂಭವಾಗಿತ್ತು. ಆದರೆ, ಈ ವರ್ಷದ ಜೂನ್ ತಿಂಗಳಲ್ಲಿ ಹಿಂದೂಜಾ ಕುಟುಂಬ ಸದಸ್ಯರೆಲ್ಲರೂ ಸೇರಿ ತಮ್ಮ ನಡುವಿನ ಎಲ್ಲಾ ವ್ಯಾಜ್ಯಗಳನ್ನು ನಿಲ್ಲಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದು ತಿಳಿದುಬಂದಿದೆ.

ಬ್ರಿಟನ್‌ನಲ್ಲಿ 41 ವರ್ಷದ ಗರಿಷ್ಠ ಮಟ್ಟ ಮುಟ್ಟಿದ ಹಣದುಬ್ಬರಬ್ರಿಟನ್‌ನಲ್ಲಿ 41 ವರ್ಷದ ಗರಿಷ್ಠ ಮಟ್ಟ ಮುಟ್ಟಿದ ಹಣದುಬ್ಬರ

ಈಗ ನವೆಂಬರ್ ಅಂತ್ಯದೊಳಗೆ ಹಿಂದೂಜಾ ಕುಟುಂಬದವರು ಸ್ವಯಂ ಆಗಿ ವಿವಾದರಹಿತವಾಗಿ ಆಸ್ತಿ ಹಂಚಿಕೆ ಮಾಡಿಕೊಳ್ಳಬೇಕಿದೆ. ಒಂದು ವೇಳೆ ಈ ಕಾರ್ಯದಲ್ಲಿ ವಿಫಲವಾದರೆ ಲಂಡನ್ ಕೋರ್ಟ್‌ನಲ್ಲಿ ವ್ಯಾಜ್ಯ ಮುಂದುವರಿಯಲಿದೆ.

8 ವರ್ಷದ ಹಿಂದೆ ಒಪ್ಪಂದ

8 ವರ್ಷದ ಹಿಂದೆ ಒಪ್ಪಂದ

ಹಿಂದೂಜಾ ಕುಟುಂಬದಲ್ಲಿ ನಾಲ್ವರು ಸಹೋದರರಿದ್ದಾರೆ. ಶ್ರೀಚಂದ್ ಪಿ ಹಿಂದೂಜಾ (ಎಸ್‌ಪಿ), ಗೋಪಿಚಂದ್ ಪಿ ಹಿಂದೂಜಾ (ಜಿಪಿ), ಪ್ರಕಾಶ್ ಪಿ ಹಿಂದೂಜಾ (ಪಿಪಿ), ಅಶೋಕ್ ಪಿ ಹಿಂದೂಜಾ (ಎಪಿ) ಅವರು ಹಿಂದೂಜಾ ಗ್ರೂಪ್‌ನ ಅಣ್ಣತಮ್ಮಂದಿರು ಮತ್ತು ಆಧಾರಸ್ತಂಭಗಳು.

ಹಿಂದೂಜಾ ಗ್ರೂಪ್‌ನ ಪ್ರತಿಯೊಂದು ಆಸ್ತಿಯೂ ಎಲ್ಲರಿಗೂ ಸೇರಿದ್ದು. ಅದೇ ವೇಳೆ ಯಾವುದೂ ಕೂಡ ಯಾರಿಗೂ ಸೇರಿದ್ದಲ್ಲ ಎಂಬಂತಹ ವಿಶೇಷ ಒಪ್ಪಂದಕ್ಕೆ ಎಲ್ಲಾ ನಾಲ್ವರು ಸಹೋದರರು ಸಹಿ ಹಾಕಿದ್ದರು. ಆದರೆ, ಇದನ್ನು ಹಿರಿಯ ಸಹೋದರ ಎಸ್‌ಪಿ ಹಿಂದೂಜಾ ಅವರ ಹೆಣ್ಮಕ್ಕಳಾದ ಶಾನು ಮತ್ತು ವೀಣು 2019ರಲ್ಲಿ ಕೋರ್ಟ್‌ನಲ್ಲಿ ಆಕ್ಷೇಪ ಸಲ್ಲಿಸುತ್ತಾರೆ. ಕುಟುಂಬದ ಆಸ್ತಿ ಸಿಗದ ರೀತಿಯಲ್ಲಿ ತಮ್ಮ ಚಿಕ್ಕಪ್ಪಂದಿರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಸದ್ಯ ಶ್ರೀಚಂದ್ ಪಿ ಹಿಂದೂಜಾ ಅವರು ಅನಾರೋಗ್ಯ ಸ್ಥಿತಿಯಲ್ಲಿರುವುದು ತಿಳಿದುಬಂದಿದೆ.

ಶಾನು ಅವರ ಮಗ ಒಂದು ಕಂಪನಿಯ ಸಿಇಒ ಕೂಡ ಆಗಿದ್ದಾರೆ. ಎಸ್‌ಪಿ ಹಿಂದೂಜಾ ಬಾಂಕ್ವೆ ಪ್ರೈವೀ ಎಂಬ ಖಾಸಗಿ ಬ್ಯಾಂಕ್ ಕಂಪನಿಗೆ ಶಾನು ಪುತ್ರ ಸಿಇಒ. 2013ರಲ್ಲಿ ಶ್ರೀಚಂದ್ ಹಿಂದೂಜಾ ಅವರು ಬಾಂಕಾ ಕಾಮರ್ಷಿಯಲೆ ಲುಗಾನೋ ಎಂಬ ಕಂಪನಿಯನ್ನು ಖರೀದಿಸಿ ಹಿಂದೂಜಾ ಬ್ಯಾಂಕ್ ಜೊತೆ ವಿಲೀನ ಮಾಡಿದ್ದರು. ಅದನ್ನು ಎಸ್‌ಪಿ ಹಿಂದೂಜಾ ಬ್ಯಾಂಕ್ವೆ ಪ್ರೈವೀ ಎಸ್‌ಎ ಎಂದು ಹೆಸರು ಬದಲಿಸಲಾಯಿತು. ಶ್ರೀಚಂದ್ ಹಿಂದೂಜಾ ಈ ಬ್ಯಾಂಕ್‌ನ ಛೇರ್ಮನ್ ಆದರು.

 

ಕಿರಿಯ ಸಹೋದರರ ವಾದವೇನು?
 

ಕಿರಿಯ ಸಹೋದರರ ವಾದವೇನು?

ಶ್ರೀಚಂದ್ ಪಿ ಹಿಂದೂಜಾ ಅವರ ಮಕ್ಕಳು ತಮ್ಮ ಚಿಕ್ಕಪ್ಪಂದಿರಿಂದ ಅನ್ಯಾಯ ಆಗುತ್ತಿದೆ ಎಂದು ವಾದಿಸಿದರೆ, ಅತ್ತ ಶಾನು ಮತ್ತು ವೀನು ವಿರುದ್ಧ ಚಿಕ್ಕಪ್ಪಂದಿರು ಪ್ರತ್ಯಾರೋಪ ಮಾಡಿದ್ದಾರೆ. ಶಾನು ಮತ್ತು ವೀನು ಅವರಿಂದ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ ಆಗುತ್ತಿದೆ ಎಂದಿದ್ದಾರೆ. ಅಲ್ಲದೇ, ತಮ್ಮ ಅಣ್ಣ ಎಸ್‌ಪಿ ಅವರ ಅನಾರೋಗ್ಯ ಸ್ಥಿತಿಯನ್ನು ಬಳಸಿಕೊಂಡು ಅಣ್ಣನ ಇಚ್ಛೆಗೆ ವಿರುದ್ಧವಾಗಿ ಶಾನು ಮತ್ತು ವೀನು ಕೋರ್ಟ್‌ನಲ್ಲಿ ವ್ಯಾಜ್ಯ ತಂದಿದ್ದಾರೆ ಎಂದು ಕಿರಿಯ ಹಿಂದೂಜಾ ಸಹೋದರರು ಕೋರ್ಟ್‌ನಲ್ಲಿ ವಾದಿಸಿದ್ದರು.

ಇದೀಗ ಆರು ತಿಂಗಳ ಹಿಂದೆ ಕುಟುಂಬ ಸದಸ್ಯರು ಒಂದು ಒಮ್ಮತಕ್ಕೆ ಬಂದಿದ್ದು, ಕೋರ್ಟ್ ಬದಲು ತಮ್ಮತಮ್ಮಲ್ಲೇ ಆಸ್ತಿ ಹಂಚಿಕೆ ವಿವಾದ ಬಗೆಹರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಇದಕ್ಕೆ ಒಪ್ಪಿರುವ ಲಂಡನ್ ಕೋರ್ಟ್ ನವೆಂಬರ್ 30ರವರೆಗೂ ಕಾಲಾವಕಾಶ ಕೊಟ್ಟಿದೆ.

 

ಹಿಂದೂಜಾ ಗ್ರೂಪ್ ಇತಿಹಾಸ

ಹಿಂದೂಜಾ ಗ್ರೂಪ್ ಇತಿಹಾಸ

1914ರಲ್ಲಿ ಆರಂಭವಾದ ಹಿಂದೂಜಾ ಗ್ರೂಪ್‌ನ ಅಡಿಯಲ್ಲಿ 38 ಕಂಪನಿಗಳಿವೆ. ಹಲವು ದೇಶಗಳಲ್ಲಿ ಇದರ ವ್ಯವಹಾರ ಇದೆ. ವಿಶ್ವದ ಅತಿದೊಡ್ಡ ಸಮೂಹ ಸಂಸ್ಥೆಗಳಲ್ಲಿ ಹಿಂದೂಜಾ ಗ್ರೂಪ್ ಕೂಡ ಒಂದು. ಬ್ರಿಟನ್‌ನಲ್ಲಿ ಹಿಂದೂಜಾ ಗ್ರೂಪ್‌ನ ಮುಖ್ಯ ಕಚೇರಿ ಇರುವುದು. ಹಿರಿಯ ಸಹೋದರರಾದ ಶ್ರೀಚಂದ್ ಪಿ ಹಿಂದೂಜಾ ಮತ್ತು ಗೋಪಿಚಂದ್ ಹಿಂದೂಜಾ ಅವರಿಬ್ಬರು ಬ್ರಿಟನ್‌ನ ಅತ್ಯಂತ ಶ್ರೀಮಂತರೆಂದು ಪರಿಗಣಿಸಲಾಗಿದೆ.

ಹಿಂದೂಜಾ ಸಾಮ್ರಾಜ್ಯದ ಸಂಸ್ಥಾಪಕರು ಪರಮಾನಂದ್ ದೀಪ್‌ಚಂದ್ ಹಿಂದೂಜಾ. ಇವರು ಸಿಂಧಿ ಮನೆತನದವರು. 1914ರಲ್ಲಿ ಹಿಂದೂಜಾ ಕಂಪನಿ ಸ್ಥಾಪನೆಯಾದರೆ 1919ರಲ್ಲಿ ಇರಾನ್‌ನಲ್ಲಿ ಇವರ ಮೊದಲ ಅಂತಾರಾಷ್ಟ್ರೀಯ ವಿಸ್ತಾರ ನಡೆಯಿತು. ಇರಾನ್‌ನಲ್ಲೇ 1979ರವರೆಗೂ ಇವರ ಗ್ರೂಪ್‌ನ ಮುಖ್ಯಕಚೇರಿ ಇತ್ತು. ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ಆದ ಬಳಿಕ ಯೂರೋಪ್‌ಗೆ ಇವರ ಸಂಸ್ಥೆ ವರ್ಗವಾಯಿತು. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಹಿಂದೂಜಾ ಗ್ರೂಪ್‌ನ ಕಚೇರಿಗಳು ಇವೆ.

ಅಶೋಕ್ ಲೀಲ್ಯಾಂಡ್, ಗಲ್ಫ್ ಆಯಿಲ್ ಇಂಟರ್ನ್ಯಾಷನಲ್ ಲಿ, ಬ್ರಿಟಿಷ್ ಮೆಟಲ್ ಕಾರ್ಪೊರೇಷನ್ ಸೇರಿದಂತೆ 38 ಕಂಪನಿಗಳು ಹಿಂದೂಜಾ ಗ್ರೂಪ್‌ನಲ್ಲಿವೆ. ವಿವಿಧ 14 ಕ್ಷೇತ್ರಗಳಲ್ಲಿ ಇವರ ವ್ಯವಹಾರ ಇದೆ. ಕೆಲ ವಿಶ್ವದರ್ಜೆಯ ಆಸ್ಪತ್ರೆಗಳಿವೆ. ಇಂಡಸ್‌ಇಂಡ್ ಬ್ಯಾಂಕ್ ಕೂಡ ಹಿಂದೂಜಾ ಗ್ರೂಪ್‌ಗೆ ಸೇರಿದ್ದಾಗಿದೆ. ಒಟ್ಟಾರೆ ಇವರ ವಿವಿಧ ಕಂಪನಿಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ.

ಹಿಂದೂಜಾ ಕುಟುಂಬದ ಕಿರಿಯ ಸಹೋದರ ಅಶೋಕ್ ಅವರು ಹಿಂದೂ ಗ್ರೂಪ್ ಆಫ್ ಕಂಪನಿಯ ಭಾರತ ವಿಭಾಗದ ಛೇರ್ಮನ್ ಆಗಿದ್ದಾರೆ. ಎಲ್ಲಾ ನಾಲ್ವರು ಸಹೋದರರ ಮಕ್ಕಳು, ಮೊಮ್ಮಕ್ಕಳು ಗ್ರೂಪ್ ಕಂಪನಿಗಳ ಆಯಕಟ್ಟಿನ ಜಾಗದಲ್ಲಿದ್ದು ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.

 

ಆಸ್ತಿ ಮೌಲ್ಯ

ಆಸ್ತಿ ಮೌಲ್ಯ

ಈಗ ಆಸ್ತಿ ಹಂಚಿಕೆ ಯಾವ ರೀತಿ ಆಗುತ್ತದೆ ಎಂಬುದು ಕುತೂಹಲ ಮೂಡಿಸುವ ಸಂಗತಿ. ವಿಶ್ವಾದ್ಯಂತ ಹಿಂದೂಜಾ ಗ್ರೂಪ್‌ನ ವ್ಯವಹಾರಗಳು ಇರುವುದರಿಂದ ಹಂಚಿಕೆ ಕಾರ್ಯ ಸುಗಮವಾಗಿಯಂತೂ ನಡೆಯುವುದು ಕಷ್ಟ. ವಿಕಿಪೀಡಿಯಾದಲ್ಲಿರುವ ಮಾಹಿತಿ ಪ್ರಕಾರ, ಹಿಂದೂಜಾ ಸಹೋದರರಿಗೆ ಅಮೆರಿಕವೊಂದರಲ್ಲೇ 50 ಬಿಲಿಯನ್ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ) ಆಸ್ತಿ ಇದೆ. ವಿಶ್ವಾದ್ಯಂತ 100 ಬಿಲಿಯನ್ ಡಾಲರ್ (8.16 ಲಕ್ಷ ಕೋಟಿ ರೂ) ಆಸ್ತಿ ಇರಬಹುದು. ಈ ಕುಟುಂಬದವರ ಬಳಿ ನಿವ್ವಳ ಆಸ್ತಿ ಮೌಲ್ಯ 32 ಬಿಲಿಯನ್ ಡಾಲರ್ ಅಥವಾ 2.6 ಲಕ್ಷ ಕೋಟಿ ರೂ ಇರಬಹುದು ಎನ್ನಲಾಗಿದೆ.

English summary

Hinduja Group's Assets To Be Split In 2 Weeks, Know How Much Wealth This Business Family Has

The splitting of assets between the family members of the $14-billion Hinduja Group could be complete by this month’s end.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X