For Quick Alerts
ALLOW NOTIFICATIONS  
For Daily Alerts

ಈ ವಾರ ಮತ್ತೊಮ್ಮೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ

|

ನವದೆಹಲಿ, ಮಾರ್ಚ್ 21: ಈ ವಾರ ಮತ್ತೊಮ್ಮೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಾರ್ಚ್ 27ರಿಂದ ಸಾಲು ಸಾಲು ರಜೆಗಳಿವೆ. ಹೀಗಾಗಿ ಮಾರ್ಚ್ 27 ಏಪ್ರಿಲ್ 4 ರ ಅವಧಿಯಲ್ಲಿ ಬ್ಯಾಂಕ್ ವ್ಯವಹಾರ ಕಷ್ಟ. ಈ ಅವಧಿಯಲ್ಲಿ ಕೇವಲ 2 ದಿನಗಳು ಮಾತ್ರ ಬ್ಯಾಂಕ್ ಕಾರ್ಯ ನಿರ್ವಹಿಸಲಿದೆ.

ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ. ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟವು ಮಾರ್ಚ್ 15ರಿಂದ ಎರಡು ದಿನ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಈಗಾಗಲೇ ಆ ವಾರದಲ್ಲಿ ನಾಲ್ಕು ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಿದೆ.

ಈ ವಾರ ಮತ್ತೊಮ್ಮೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ

ಮಾರ್ಚ್ ಕೊನೆವಾರದಲ್ಲಿಸಾಲು ಸಾಲು ರಜೆ:
ಬಿಹಾರದಲ್ಲಿ ಬಿಹಾರ ರಾಜ್ಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಾರ್ಚ್ 30ರಂದು ಬ್ಯಾಂಕುಗಳಿಗೆ ರಜೆ ಇರಲಿದೆ. ಮಾರ್ಚ್ 27 ನಾಲ್ಕನೇ ಶನಿವಾರ ಎಂದು ರಜೆ ಇರಲಿದೆ. ಮಾರ್ಚ್ 28 ಭಾನುವಾರದ ರಜೆ, ಮಾರ್ಚ್ 29, 30 ರಂದು ಹೋಳಿ ಹಬ್ಬದ ಅಂಗವಾಗಿ ದೇಶದೆಲ್ಲೆಡೆ ರಜೆ ಸಿಗಲಿದೆ. ಮಾರ್ಚ್ 31 ಆರ್ಥಿಕ ವರ್ಷದ ಕೊನೆ ದಿನದಂದು ಬ್ಯಾಂಕ್ ಜೊತೆಗೆ ಗ್ರಾಹಕರು ವ್ಯವಹರಿಸಲು ಆಸ್ಪದವಿರುವುದಿಲ್ಲ. ಏಪ್ರಿಲ್ 1 ರಂದು ಬ್ಯಾಂಕ್ ಅಕೌಂಟಿಂಗ್ ಕಾರ್ಯ ನಡೆಯಲಿದೆ, ಏಪ್ರಿಲ್ 2ರಂದು ಗುಡ್ ಫ್ರೈಡೇ ಅಂಗವಾಗಿ ರಜೆ ಘೋಷಿಸಲಾಗಿದೆ. ಏಪ್ರಿಲ್ 3ರಂದು ಬ್ಯಾಂಕ್ ಓಪನ್ ಇರಲಿದೆ. ಏಪ್ರಿಲ್ 4 ರಂದು ಭಾನುವಾರದ ರಜೆ ಸಿಗಲಿದೆ.

ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

English summary

Holiday Alert: Banks Will Remain Closed on These Days From March 27 to April 4

Holiday Alert: Banks Will Remain Closed on These Days From March 27 to April 4.
Story first published: Sunday, March 21, 2021, 14:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X