ಹೋಮ್ ಫಸ್ಟ್ ಫೈನಾನ್ಸ್ ಕಂಪೆನಿ ಐಪಿಒ ಜ. 21ರಿಂದ 25
ಈ ವರ್ಷದ ಮೂರನೇ ಐಪಿಒ ಹೌಸಿಂಗ್ ಫೈನಾನ್ಸ್ ಕಂಪೆನಿಯಾದ ಹೋಮ್ ಫಸ್ಟ್ ಫೈನಾನ್ಸ್ ಕಂಪೆನಿ (HFFC)ಯಿಂದ ಬರಲಿದೆ. ಜನವರಿ 21ನೇ ತಾರೀಕಿನಂದು ಸಬ್ ಸ್ಕ್ರಿಪ್ಷನ್ ಶುರುವಾಗಲಿದೆ. ಇದಕ್ಕಾಗಿ ದರವನ್ನು ಪ್ರತಿ ಷೇರಿಗೆ ರು. 517ರಿಂದ 518 ಎಂದು ದರ ನಿಗದಿ ಮಾಡಲಾಗಿದೆ. ಜನವರಿ 25ನೇ ತಾರೀಕಿನಂದು ಸಬ್ ಸ್ಕ್ರಿಪ್ಷನ್ ಕೊನೆಯಾಗಲಿದೆ.
ಮುಂಬೈ ಮೂಲದ HFFCಯಿಂದ 1153.72 ಕೋಟಿ ರುಪಾಯಿ ಸಂಗ್ರಹಕ್ಕೆ ಮುಂದಾಗಿದ್ದು, ಇದರಲ್ಲಿ ರು. 265 ಕೋಟಿ ರುಪಾಯಿಗೆ ಹೊಸದಾಗಿ ಹಾಗೂ ಪ್ರವರ್ತಕರು ಮತ್ತು ಈಗಾಗಲೇ ಇರುವ ಷೇರುದಾರರು ರು. 888.72 ಕೋಟಿಗೆ ಆಫರ್ ಫಾರ್ ಸೇಲ್ ಮೂಲಕ ಷೇರು ಮಾರಾಟ ಮಾಡಲಾಗುತ್ತದೆ.
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
ಒಎಫ್ ಎಸ್ ನಲ್ಲಿ ಪ್ರವರ್ತಕರಾದ ಟ್ರೂ ನಾರ್ಥ್ ಫಂಡ್ V LLPಗೆ ಸೇರಿದ 435.61 ಕೋಟಿ ರುಪಾಯಿಯ ಷೇರು, ಏಥರ್ (ಮಾರಿಷಿಯಸ್) ಗೆ ಸೇರಿದ ರು. 291.28 ಕೋಟಿಯ ಷೇರು, ಬೆಸ್ಸೆಮೆರ್ ಇಂಡಿಯಾ ಕ್ಯಾಪಿಟಲ್ ಹೋಲ್ಡಿಂಗ್ಸ್ IIಗೆ ಸೇರಿದ ರು. 120.46 ಕೋಟಿಯ ಷೇರು, ಪಿ.ಎಸ್. ಜಯಕುಮಾರ್ ರು. 28.43 ಕೋಟಿಯ ಷೇರು ಮತ್ತು ಮನೋಜ್ ವಿಶ್ವನಾಥನ್ ರು. 12.92 ಕೋಟಿಯ ಷೇರು ಮಾರಾಟ ಮಾಡಲಿದ್ದಾರೆ.
ಆಸಕ್ತ ಹೂಡಿಕೆದಾರರು ಕನಿಷ್ಠ 28 ಷೇರುಗಳಿಗೆ ಅರ್ಜಿ ಹಾಕಬೇಕು. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೇಕಿದ್ದಲ್ಲಿ 28ರ ಗುಣಕದಲ್ಲಿ ಹೆಚ್ಚಿಸುತ್ತಾ ಬೇಡಿಕೆ ಸಲ್ಲಿಸಬಹುದು. ಫೆಬ್ರವರಿ 3ನೇ ತಾರೀಕಿನಂದು ಷೇರು ಲಿಸ್ಟಿಂಗ್ ಆಗಲಿದೆ.