For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: ಹಾಂಕಾಂಗ್ ಸರ್ಕಾರದಿಂದ ಕಾರ್ಮಿಕರಿಗೆ 6 ತಿಂಗಳು 50 ಪರ್ಸೆಂಟ್ ವೇತನ

By Sagar Ap
|

ಕೊರೊನಾಯಿಂದಾಗಿ ವಿಶ್ವದ ಇತರೇ ರಾಷ್ಟ್ರಗಳಂತೆ ಹಾಂಕಾಂಗ್ ಸರ್ಕಾರವು ಭಾರೀ ಸವಾಲುಗಳನ್ನು ಎದುರಿಸುತ್ತಿದ್ದು, ಸಾಂಕ್ರಾಮಿಕ ರೋಗದ ಪರಿಣಾಮ ತಗ್ಗಿಸಲು ನಾನಾ ಪ್ರಯತ್ನ ನಡೆಸುತ್ತಿದೆ. ಏಕಾಏಕಿ ಜನರ ಆದಾಯ ತಗ್ಗಿರುವುದರಿಂದ ಜನತೆಗೆ ಸಹಾಯ ಮಾಡಲು 17.7 ಬಿಲಿಯನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 1 ಲಕ್ಷದ 47 ಸಾವಿರ ಕೋಟಿ) ಮೌಲ್ಯದ ಪ್ಯಾಕೇಜ್ ಘೋಷಿಸಿದೆ.

ಹಾಂಕಾಂಗ್ ಸರ್ಕಾರವೇ ತನ್ನ ದೇಶದ ಎಲ್ಲಾ ಕಾರ್ಮಿಕರಿಗೆ ಮುಂದಿನ ಆರು ತಿಂಗಳಿಗೆ 50 ಪರ್ಸೆಂಟ್ ವೇತನವನ್ನು ನೀಡುವುದಾಗಿ ಹೇಳಿದೆ. ಪ್ರತಿ ಕಾರ್ಮಿಕರಿಗೆ ತಿಂಗಳಿಗೆ ಸಬ್ಸಿಡಿಯಾಗಿ 9,000 ಹಾಂಕಾಂಗ್ ಡಾಲರ್ ನೀಡಲು ತಿಳಿಸಿದೆ. ಹಾಂಕಾಂಗ್ ಮುಖ್ಯ ಕಾರ್ಯ ನಿರ್ವಾಹಕರಾದ ಕ್ಯಾರಿ ಲ್ಯಾಮ್ ಕೂಡ ತಮ್ಮ 10 ಪರ್ಸೆಂಟ್ ವೇತನವನ್ನು ಒಂದು ವರ್ಷದ ಮಟ್ಟಿಗೆ ಕಡಿತಗೊಳಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ.

ಹಾಂಕಾಂಗ್ ಸರ್ಕಾರದಿಂದ ಕಾರ್ಮಿಕರಿಗೆ 6 ತಿಂಗಳು 50 ಪರ್ಸೆಂಟ್ ವೇತನ

 

80 ಬಿಲಿಯನ್ ಹಾಂಕಾಂಗ್ ಡಾಲರ್ ವೇತನ ಯೋಜನೆಯನ್ನು ಪ್ರಕಟಿಸಿದ ಲ್ಯಾಮ್, ಕೊರೊನಾವೈರಸ್ ಪ್ರಭಾವದಿಂದ ಕಾರ್ಮಿಕರನ್ನು ವಜಾಗೊಳಿಸದಂತೆ ಕಂಪನಿಗಳಿಗೆ ಒತ್ತಾಯಿಸಿದೆ.

"ಈಗ ಈ ಪತ್ರಿಕಾಗೋಷ್ಠಿಯನ್ನು ವೀಕ್ಷಿಸುತ್ತಿರುವ ಉದ್ಯೋಗದಾತರು ಅಥವಾ ನಾಳೆ ಪತ್ರಿಕೆ ಓದುವವರು ಹಣ ಬರುತ್ತಿದೆ ಎಂದು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಿಮ್ಮ ಸಿಬ್ಬಂದಿಯನ್ನು ವಜಾಗೊಳಿಸಲು ಮುಂದಾಗಬೇಡಿ ಮತ್ತು ಸಾಧ್ಯವಾದಷ್ಟು ಕಾಲ ಸ್ಥಗಿತಗೊಳ್ಳಿ ಏಕೆಂದರೆ ಹಣ ಬರಲಿದೆ, "ಎಂದು ಪತ್ರಿಕಾಗೋಷ್ಠಿಯಲ್ಲಿ ಲ್ಯಾಮ್ ಹೇಳಿದರು.

ಹಾಂಕಾಂಗ್‌ನ ಈ ಹಣಕಾಸಿನ ಪರಿಹಾರ ಕ್ರಮಗಳು ಈ ವರ್ಷದ ಬಜೆಟ್ ಕೊರತೆಯು 139.1 ಹಾಂಕಾಂಗ್ ಬಿಲಿಯನ್‌ ಡಾಲರ್‌ನಿಂದ 276.6 ಹಾಂಕಾಂಗ್ ಬಿಲಿಯನ್‌ಗೆ ಏರಿದೆ, ಇದು ಒಟ್ಟು ದೇಶೀಯ ಉತ್ಪನ್ನದ 9.5 ಪರ್ಸೆಂಟ್‌ಗೆ ಸಮನಾಗಿರುತ್ತದೆ.

English summary

Honk kong Govt Would Pay 50 Percent of Workers’ Salaries

Honk kong government would pay 50% of workers’ salaries for six months with the monthly subsidy for each worker capped at 9000 HK Dollar
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more