For Quick Alerts
ALLOW NOTIFICATIONS  
For Daily Alerts

ಎಲೆಕ್ಟ್ರಿಕ್ ಕಾರುಗಳಿಗೆ ಸಬ್ಸಿಡಿ ಹೇಗೆ ಸಿಗುತ್ತದೆ? ಯಾವ ದೇಶದಲ್ಲಿ ಹೆಚ್ಚಿನ ಪ್ರೋತ್ಸಾಹ?

|

ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯ ನಡುವೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಮಹತ್ವ ಹೆಚ್ಚಾಗುತ್ತಿದೆ. ಹೀಗೆ ತೈಲ ಬೆಲೆ ಏರುತ್ತಾ ಸಾಗಿದರೆ ಏನು ಗತಿ ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿಯೇ ಕೇಂದ್ರ ಸರ್ಕಾರ ತೈಲದ ಮೇಲಿನ ಅವಲಂಬನೆಯನ್ನ ತಗ್ಗಿಸಲು ಪೆಟ್ರೋಲ್, ಡೀಸೆಲ್ ಆಮದು ಕಡಿಮೆ ಮಾಡಲು ನಾನಾ ಯೋಜನೆಗಳನ್ನು ಹಾಕಿಕೊಂಡಿದೆ.

ತೈಲಕ್ಕೆ ಎಥೆನಾಲ್ ಮಿಶ್ರಣವನ್ನ ಹೆಚ್ಚಿಸಲು ಕೇಂದ್ರ ಕಾರ್ಯ ಯೋಜನೆಯನ್ನ ರೂಪಿಸಿದೆ. ಇದರ ನಡುವೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದ ಪ್ರೋತ್ಸಾಹವನ್ನು ಹೆಚ್ಚಿಸಿದೆ.
ಆದರೆ ಈಗಾಗಲೇ ಅನೇಕ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಪ್ರೋತ್ಸಾಹ ಜೊತೆಗೆ ಹೆಚ್ಚಿನ ಸಬ್ಸಿಡಿ ನೀಡುತ್ತಿವೆ.

ಯಾವ ರಾಷ್ಟ್ರದಲ್ಲಿ ಹೇಗೆ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬುದನ್ನ ಮುಂದೆ ತಿಳಿಯಿರಿ

ನಾರ್ವೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ

ನಾರ್ವೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ


ಹೌದು ನಾರ್ವೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಸಬ್ಸಿಡಿ ನೀಡಲಾಗುತ್ತಿದ್ದು, ತೆರಿಗೆ ಮುಕ್ತವಾಗಿದೆ. ಹೀಗಾಗಿ ನಾರ್ವೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟ ಮತ್ತು ಬೇಡಿಕೆ ಹೆಚ್ಚಾಗಿದೆ.
ಇದರ ಜೊತೆಗೆ ಎಲೆಕ್ಟ್ರಿಕ್ ಕಾರುಗಳು ಬಸ್‌ನ ಲೇನ್‌ನಲ್ಲಿ ಚಲಿಸಲು ಅವಕಾಶವಿದೆ. ಪಾರ್ಕಿಂಗ್ ಕೂಡ ಉಚಿತವಾಗಿದೆ ಹಾಗೂ ಪ್ರವಾಸಿ ತಾಣಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳು ಲಭ್ಯವಿದೆ.

ನಾರ್ವೆಯಲ್ಲಿ ಒಟ್ಟು ಮಾರಾಟವಾಗುವ ಕಾರುಗಳಲ್ಲಿ ಶೇಕಡಾ 25ರಷ್ಟು ಕಾರುಗಳು ಎಲೆಕ್ಟ್ರಿಕ್ ವಾಹನಗಳಾಗಿವೆ. ಬಹುತೇಕ ಕಾರುಗಳು ಐಷಾರಾಮಿ ಕಾರುಗಳಾಗಿವೆ.

 

ಎಲೆಕ್ಟ್ರಿಕ್ ಕಾರುಗಳಿಗೆ ಬಹುದೊಡ್ಡ ಮಾರುಕಟ್ಟೆಯಾಗಿದೆ ಚೀನಾ

ಎಲೆಕ್ಟ್ರಿಕ್ ಕಾರುಗಳಿಗೆ ಬಹುದೊಡ್ಡ ಮಾರುಕಟ್ಟೆಯಾಗಿದೆ ಚೀನಾ

ವೇಗವಾಗಿ ಮುನ್ನುಗ್ಗುತ್ತಿರುವ ಆರ್ಥಿಕತೆಯಾಗಿರುವ ಚೀನಾ ಎಲೆಕ್ಟ್ರಿಕ್ ವಾಹನಗಳಿಗೆ ಬಹುದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸಿದೆ. 2015ರಲ್ಲಿ ಚೀನಾವು 1,88,000 ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಸಾಕ್ಷಿಯಾಗಿದೆ.

ಚೀನಾ ಸರ್ಕಾರವು 6,000 ಯೂರೋ ಪ್ರೀಮಿಯಂ ಅನ್ನು ಸಹ ನೀಡುತ್ತದೆ. ಜೊತೆಗೆ ಶಾಂಘೈನಂತಹ ನಗರಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಖರೀದಿ ಮತ್ತು ಬಳಕೆಗೆ ಯಾವುದೇ ಹೆಚ್ಚಿನ ನಿರ್ಬಂಧಗಳಿಲ್ಲ. ಇನ್ನು ಬೀಜಿಂಗ್‌ನಲ್ಲಿ ಹೊಸ ಟ್ಯಾಕ್ಸಿಗಳಿಗೆ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ.

 ಸ್ವಯಂ ಉದ್ಯೋಗಿಗಳಿಗೆ ಕಾರು ಖರೀದಿ ತುಂಬಾ ಸುಲಭ: ಟಾಟಾ ಮೋಟಾರ್ಸ್ ಆಫರ್ ಸ್ವಯಂ ಉದ್ಯೋಗಿಗಳಿಗೆ ಕಾರು ಖರೀದಿ ತುಂಬಾ ಸುಲಭ: ಟಾಟಾ ಮೋಟಾರ್ಸ್ ಆಫರ್

ಜರ್ಮನಿಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ $4000 ಕಡಿತ
 

ಜರ್ಮನಿಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ $4000 ಕಡಿತ

ಜರ್ಮನಿಯಲ್ಲಿ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಹೆಚ್ಚಿನ ಸಹಾಯಧನ ನೀಡಲಾಗುತ್ತಿದ್ದು, ಪ್ರತಿ ಇ-ಕಾರ್ ಖರೀದಿಗೆ $4000 ಕಡಿತಗೊಳಿಸಲಾಗುತ್ತಿದೆ. ಈ ಹಣದಲ್ಲಿ ಶೇಕಡಾ 50ರಷ್ಟು ಹಣವನ್ನು ಸರ್ಕಾರ ಭರಿಸಲಿದ್ದು, ಇನ್ನುಳಿದ ಶೇ. 50ರಷ್ಟು ಕಾರು ಉತ್ಪಾದನೆ ಮಾಡುವ ಕಂಪನಿಯು ಭರಿಸಲಿದೆ. 2019ರಲ್ಲಿ ಈ ಉದ್ದೇಶಕ್ಕಾಗಿಯೇ 1.2 ಬಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ.

ಟಾಟಾ ಕಾರುಗಳ ಮೇಲೆ ಭಾರೀ ರಿಯಾಯಿತಿ: ಜೂನ್ 30ರವರೆಗೆ ಮಾತ್ರ ಅವಕಾಶಟಾಟಾ ಕಾರುಗಳ ಮೇಲೆ ಭಾರೀ ರಿಯಾಯಿತಿ: ಜೂನ್ 30ರವರೆಗೆ ಮಾತ್ರ ಅವಕಾಶ

5000 ವೇಗದ ಚಾರ್ಜಿಂಗ್ ಪಾಯಿಂಟ್ಸ್ ಮಾಡುವ ಗುರಿ

5000 ವೇಗದ ಚಾರ್ಜಿಂಗ್ ಪಾಯಿಂಟ್ಸ್ ಮಾಡುವ ಗುರಿ

ಜರ್ಮನಿಯು 5000 ವೇಗದ ಚಾರ್ಜಿಂಗ್ ಪಾಯಿಂಟ್ಸ್‌ ಮಾಡುವ ಗುರಿಯನ್ನ ಹೊಂದಿದ್ದು, ನಗರಗಳಲ್ಲಿ 10,000 ಸ್ಟ್ಯಾಂಡರ್ಡ್‌ ಚಾರ್ಜಿಂಗ್ ಪಾಯಿಂಟ್ಸ್‌ ಸ್ಥಾಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇಷ್ಟು ಸಬ್ಸಿಡಿಯನ್ನ ನೀಡಿದರೂ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಮುಂದಾಗುವವರ ಸಂಖ್ಯೆ ಇನ್ನೂ ಕಡಿಮೆಯಿದೆ.

English summary

How Are Electric cars Subsidized: Which Country Gives More Subsidy

Here the details of how electric cars subsidized and which are the countries gives more subsidy
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X