For Quick Alerts
ALLOW NOTIFICATIONS  
For Daily Alerts

ಸಾಮಾನ್ಯ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳು ಹೇಗೆ ಭಿನ್ನವಾಗಿದೆ? ಇವುಗಳ ನಿರ್ವಹಣೆ ಸುಲಭವೇ?

|

ಎಲೆಕ್ಟ್ರಿಕ್‌ ಕಾರುಗಳು ಬ್ಯಾಟರಿಯಿಂದ ಚಾಲಿತ ವಾಹನಗಳಾಗಿವೆ. ಕೆಲವೊಂದು ಸೂರ್ಯನ ಶಕ್ತಿಯಿಂದ ಚಾಲಿತ ವಾಹನಗಳು ಇವೆ. ಆದರೆ ಸದ್ಯ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಲೀಥಿಯಂ ಐಯಾನ್ ಬ್ಯಾಟರಿ ಆಧಾರಿತವಾದವುಗಳಾಗಿವೆ. ವಿದ್ಯುತ್ ಶಕ್ತಿ ಮೂಲಕ ರೀಚಾರ್ಜ್ ಆಗುವ ಬ್ಯಾಟರಿಗಳಾಗಿವೆ.

 

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಪ್ರತಿವರ್ಷ ಕೋಟಿ ಕೋಟಿ ಡಾಲರ್ ಹೂಡಿಕೆ ಮಾಡಲಾಗುತ್ತದೆ. ಏಷ್ಯಾ, ಯೂರೋಪ್ ಮತ್ತು ಅಮೆರಿಕಾದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಈಗಾಗಲೇ ಬಳಕೆಗೆ ತರಲಾಗಿದೆ. ಇದಕ್ಕಾಗಿ ಅಗತ್ಯವಿರುವಂತಹ ಮೂಲಸೌಕರ್ಯಗಳನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಸಾಮಾನ್ಯ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೆಲೆಯಿದ್ದು, ಹೆಚ್ಚಿನ ವೆಚ್ಚ ತಗುಲುತ್ತಿದೆ. ಹೀಗಾಗಿಯೇ ಇನ್ನೂ ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಬೇಡಿಕೆ ಹೆಚ್ಚಿದೆ.

ಎಲೆಕ್ಟ್ರಿಕ್ ಕಾರುಗಳು ಮೋಟಾರ್ ಒಳಗೆ ಎರಡು ರೀತಿಯ ಆಯಸ್ಕಾಂತಗಳಿದ್ದು, ವಿರುದ್ಧವಾಗಿ ಚಲಿಸುವುದರಿಂದ ಮೋಟಾರು ಚಲಿಸುತ್ತದೆ. ಮೋಟಾರು ಶಕ್ತಿಯ ಮೋಷನ್ ಸಮರ್ಪಕ ಬಳಕೆಯಿಂದಾಗಿ ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯ ಕಾರುಗಳಿಗಿಂತ ಹೆಚ್ಚು ಶಕ್ತಿಶಾಲಿಯುತ ಪ್ರದರ್ಶನ ಹೊಂದಿವೆ. ಮೋಟಾರ್‌ನ ಶೇ. 95ರಷ್ಟು ಶಕ್ತಿಯನ್ನು ಬಳಸಿದರೆ, ಇತರೆ ವಾಹನಗಳು ಬಳಸುವುದು ಕೇವಲ ಶೇಕಡಾ 30ರಷ್ಟು.

ಸಾಮಾನ್ಯ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳು ಹೇಗೆ ಭಿನ್ನವಾಗಿದೆ?

ಎಲೆಕ್ಟ್ರಿಕ್ ಕಾರುಗಳ ಪ್ಲಸ್‌ ಪಾಯಿಂಟ್ ಎಂದರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಬಹುದಾಗಿದೆ. ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಹೋಲಿಸದರೆ ರಿಪೇರಿ ಖರ್ಚು ತುಂಬಾನೆ ಕಡಿಮೆಯಿದೆ. ಆದರೆ ಈ ಕಾರುಗಳು ಸದ್ಯ ತುಂಬಾ ದೂರದ ಪ್ರಯಾಣಕ್ಕೆ ಸೂಕ್ತವಾಗಿಲ್ಲ. ಪದೇ ಪದೇ ಚಾರ್ಜ್ ಮಾಡಬೇಕಾಗುತ್ತದೆ. ಇದರ ಜೊತೆಗೆ ಚಾರ್ಜಿಂಗ್ ಪಾಯಿಂಟ್‌ಗಳ ಕೊರತೆಯು ಇದೆ. 200 ಕಿ.ಮೀ ವರೆಗೆ ಚಲಿಸುವ ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯವಾಗಿವೆ. ಇದರ ಜೊತೆಗೆ ಕಾರಿನ ಬ್ಯಾಟರಿ ಚಾರ್ಜ್ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ.

ಆದರೆ ವಿಜ್ಞಾನಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿ ಕೇವಲ ಕಾರು ನಿಲ್ಲಿಸಿದರೆ, ಅದರ ಪಾಡಿಗೆ ಕಾರಿನ ಬ್ಯಾಟರಿ ಚಾರ್ಜ್ ಆಗುವ ತಂತ್ರಜ್ಞಾನ ಬರಬಹುದು ಎನ್ನಲಾಗಿದೆ.

English summary

How Do All Electric Cars Work: Know More

Here the details of how do all electric cars will work and how it will be charged
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X