For Quick Alerts
ALLOW NOTIFICATIONS  
For Daily Alerts

ಟಾಟಾ ಸನ್ಸ್ ಪಾಲಿಗೆ ಟಿಸಿಎಸ್ ಆಪದ್ಬಾಂಧವ ಹೇಗೆ?

|

ಕೋರ್ಟ್ ನಿಗಾದಲ್ಲೇ ಟಾಟಾ ಗ್ರೂಪ್ ನಿಂದ ಪ್ರತ್ಯೇಕ ಆಗುವುದಕ್ಕೆ ಶಾಫೂರ್ ಜೀ ಪಲ್ಲೋಂಜೀ (SP) ಗ್ರೂಪ್ ನಿರ್ಧರಿಸಿದೆ. ಇದೀಗ ಟಾಟಾ ಸಮೂಹದಲ್ಲಿ ಇರುವ ಎಸ್ ಪಿ ಗ್ರೂಪ್ ನ ಶೇಕಡಾ 18.4% ಷೇರನ್ನು ಭಾಗಶಃ ಖರೀದಿ ಮಾಡಲು ಟಾಟಾ ಸಿದ್ಧವಾಗಿದೆ. ಟಾಟಾ ಸನ್ಸ್ ಲಿಮಿಟೆಡ್ ನಿಂದ 3 ಬಿಲಿಯನ್ ಅಮೆರಿಕನ್ ಡಾಲರ್ ಅಥವಾ 21 ಸಾವಿರ ಕೋಟಿ ರುಪಾಯಿಯನ್ನು ಸ್ವಲ್ಪ ಭಾಗದ ಷೇರು ಖರೀದಿಗಾಗಿ ಆಫರ್ ಮಾಡಬಹುದು.

 

ಟಾಟಾ ಕಂಪೆನಿ 'ಸೂಪರ್ ಆಪ್'ನಲ್ಲಿ ವಾಲ್ ಮಾರ್ಟ್ 20 ಬಿಲಿಯನ್ ಹೂಡಿಕೆ ಮಾತುಕತೆಟಾಟಾ ಕಂಪೆನಿ 'ಸೂಪರ್ ಆಪ್'ನಲ್ಲಿ ವಾಲ್ ಮಾರ್ಟ್ 20 ಬಿಲಿಯನ್ ಹೂಡಿಕೆ ಮಾತುಕತೆ

ಸುಪ್ರೀಂ ಕೋರ್ಟ್ ನಲ್ಲಿ ಅಕ್ಟೋಬರ್ 28ನೇ ತಾರೀಕಿನಂದು ಈ ಆಫರ್ ಬಗ್ಗೆ ಹೇಳಲಿದೆ. ಸದ್ಯಕ್ಕೆ ಎಸ್ ಪಿ ಗ್ರೂಪ್ ಮತ್ತು ಟಾಟಾ ಸಮೂಹದ ಮಧ್ಯೆ ಕಾನೂನು ವ್ಯಾಜ್ಯ ನಡೆಯುತ್ತಿದೆ. ಟಾಟಾ ಸಮೂಹಕ್ಕೆ ಕಿರೀಟದಂತೆ ಇರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮತ್ತೆ ನೆರವಿಗೆ ಬಂದಿದೆ.

ಟಿಸಿಎಸ್ ಆಪದ್ಬಾಂಧವ

ಟಿಸಿಎಸ್ ಆಪದ್ಬಾಂಧವ

ಈಗ ಎಸ್ ಪಿ ಗ್ರೂಪ್ ಗೆ ಹಣ ಪಾವತಿಸಲು ಟಿಸಿಎಸ್ ಆಪದ್ಬಾಂಧವನಂತೆ ಬಂದಿದ್ದು, ಅದರ ಬೈಬ್ಯಾಕ್ ಮೂಲಕ 16,000 ಕೋಟಿ ರುಪಾಯಿ ಬರಲಿದೆ. ಕಳೆದ ಬುಧವಾರದಂದು ಈ ಬಗ್ಗೆ ಘೋಷಣೆ ಮಾಡಲಾಗಿದೆ. ಒಟ್ಟು 21,000 ಕೋಟಿ ರುಪಾಯಿಯಲ್ಲಿ 11,528 ರುಪಾಯಿ ಟಿಸಿಎಸ್ ಬೈಬ್ಯಾಕ್ ಮೂಲಕ ಬರುತ್ತದೆ. ಈಗಾಗಲೇ ಎಸ್ ಪಿ ಗ್ರೂಪ್ ಹೊಂದಿರುವ ಷೇರಿನ ಪಾಲನ್ನು ಖರೀದಿ ಮಾಡುವುದಕ್ಕೆ ಅನುಕೂಲ ಆಗುತ್ತದೆ.

ಎರಡು ವಾರದಲ್ಲಿ ಅಂತಿಮ ನಿರ್ಧಾರ

ಎರಡು ವಾರದಲ್ಲಿ ಅಂತಿಮ ನಿರ್ಧಾರ

ವರದಿಗಳು ಹೇಳುವ ಪ್ರಕಾರ, ಟಾಟಾ ಸನ್ಸ್ ನಿಂದ ಸವರನ್ ಹಾಗೂ ಪೆನ್ಷನ್ ಫಂಡ್ಸ್ ಗಳ ಜತೆ ಮಾತುಕತೆ ನಡೆಯುತ್ತಿದೆ. ಆ ಹಣವನ್ನು ಪಡೆದು, ಮಿಸ್ತ್ರಿ ಷೇರಿನ ಪಾಲನ್ನು ಖರೀದಿ ಮಾಡಬೇಕು ಎಂಬುದು ಉದ್ದೇಶ. ಏನೇ ತೀರ್ಮಾನ ಅಂತಿಮವಾಗಲು ಎರಡು ವಾರಗಳು ಬೇಕಾಗಬಹುದು. ತಜ್ಞರು, ವಿಶ್ಲೇಷಕರು ಖಾತ್ರಿ ಮಾಡುವಂತೆ, ಬೈಬ್ಯಾಕ್ ನಿಂದ ಬರುವ ಹಣವನ್ನು ಟಿಸಿಎಸ್ ನಿಂದ ಟಾಟಾ ಸನ್ಸ್ ಗೆ ವರ್ಗಾವಣೆ ಮಾಡಲಾಗುವುದು.

ಶೇಕಡಾ 70ಕ್ಕಿಂತ ಹೆಚ್ಚು ಪಾಲನ್ನು ಮಾರಬೇಕಾಗುತ್ತದೆ
 

ಶೇಕಡಾ 70ಕ್ಕಿಂತ ಹೆಚ್ಚು ಪಾಲನ್ನು ಮಾರಬೇಕಾಗುತ್ತದೆ

ಈ ಸಂದರ್ಭದಲ್ಲಿ ತೆರಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಹಾರ ಮಾಡಲಾಗುವುದು ಎನ್ನುತ್ತಾರೆ. ಇನ್ನೂ ಕೆಲವು ತಜ್ಞರು ಹೇಳುವಂತೆ, ಟಾಟಾ ಸನ್ಸ್ ನಿಂದ ಟಿಸಿಎಸ್ ನ ಶೇಕಡಾ 70ಕ್ಕಿಂತ ಹೆಚ್ಚು ಪಾಲನ್ನು ಮಾರಬೇಕಾಗುತ್ತದೆ. ಹೀಗೆ ಮಾಡುವುದರಿಂದ ಸಮೂಹದ ಮೇಲಿನ ಹಿಡಿತ ದುರ್ಬಲವಾಗುತ್ತದೆ. ಜೂನ್ 30ರ ಕೊನೆಗೆ ಟಿಸಿಎಸ್ ಬಳಿ ನಗದು ಮೊತ್ತ 51 ಸಾವಿರ ಕೋಟಿ ರುಪಾಯಿ ಇದೆ.

ಉದ್ಯೋಗಿಗಳಿಗೆ ವೇತನ ಹೆಚ್ಚಳ

ಉದ್ಯೋಗಿಗಳಿಗೆ ವೇತನ ಹೆಚ್ಚಳ

ಕಳೆದ ಬುಧವಾರದಂದು ಘೋಷಣೆ ಮಾಡಿದ ಪ್ರಕಾರ, ಟಿಸಿಎಸ್ ನ 5.33 ಕೋಟಿ ಷೇರನ್ನು 16,000 ಕೋಟಿ ರುಪಾಯಿ ಮೀರದಂತೆ ಮರು ಖರೀದಿ ಮಾಡಲು ಒಪ್ಪಿಕೊಳ್ಳಲಾಗಿದೆ. 1.42% ನಷ್ಟು ಷೇರನ್ನು ತಲಾ 3000 ರುಪಾಯಿಯಂತೆ ಬೈಬ್ಯಾಕ್ ಮಾಡಲಾಗುವುದು. ಇನ್ನು ಟಿಸಿಎಸ್ ನಿಂದ ಮಧ್ಯಂತರ ಡಿವಿಡೆಂಡ್ 12 ರುಪಾಯಿ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 1, 2020ರಿಂದ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡುವ ಬಗ್ಗೆ ಘೋಷಣೆ ಂಆಡಲಾಗಿದೆ.

English summary

How TCS As Rescue To Tata Sons During Court Case With Shapoorji Pallonji Group?

TCS acts as rescue to Tata sons while it is fighting case against Shapoorji Pallonji (SP) group to purchase minority stake of Tata Group, which held by SP group.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X