For Quick Alerts
ALLOW NOTIFICATIONS  
For Daily Alerts

2001 ರಿಂದ 2021ರವರೆಗೆ ಪೆಟ್ರೋಲ್ ದರ ಎಷ್ಟು ಏರಿಕೆಯಾಗಿದೆ: ವ್ಯತ್ಯಾಸ ತಿಳಿಯಿರಿ

|

ಭಾರತದಲ್ಲಿ ದಿನೇ ದಿನೇ ಪೆಟ್ರೋಲ್, ಡೀಸೆಲ್ ದರಗಳು ಏರುತ್ತಲೇ ಸಾಗಿದೆ. ದೇಶದಲ್ಲಿ ಅಷ್ಟೇ ಅಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಪೆಟ್ರೋಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದು, ಬೇಡಿಕೆ ಮತ್ತು ಪೂರೈಕೆ ಕೊರತೆಯು ಜಾಗತಿಕ ತೈಲ ಬೆಲೆಯನ್ನು ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಕೊಂಡೊಯ್ದಿದೆ.

 

ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ಇಂದು 25 ಪೈಸೆ ಏರಿಕೆಗೊಂಡು 101.89 ರೂಪಾಯಿನಷ್ಟಿದ್ದು, ಡೀಸೆಲ್ ದರ ಲೀಟರ್‌ಗೆ 30 ಪೈಸೆ ಹೆಚ್ಚಾಗಿ 90.17 ರೂಪಾಯಿಗೆ ತಲುಪಿದೆ.

2001ರಲ್ಲಿ ಜಾಗತಿಕವಾಗಿ ಸರಾಸರಿ ಪೆಟ್ರೋಲ್ ದರವು ಪ್ರತಿ ಲೀಟರ್‌ಗೆ 0.60 ಡಾಲರ್‌ನಷ್ಟಿತ್ತು. ಆದರೆ ಇಂದು ಅದೇ ಪೆಟ್ರೋಲ್ ದರವು 1.20 ಡಾಲರ್‌ನಷ್ಟು ತಲುಪಿದೆ.

2001ರಲ್ಲಿ ಬ್ಯಾರೆಲ್‌ಗೆ 25 ಡಾಲರ್‌ನಷ್ಟಿತ್ತು

2001ರಲ್ಲಿ ಬ್ಯಾರೆಲ್‌ಗೆ 25 ಡಾಲರ್‌ನಷ್ಟಿತ್ತು

2001 ರಲ್ಲಿ, ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಸುಮಾರು 25 ಡಾಲರ್‌ನಂತೆ ವ್ಯಾಪಾರ ಮಾಡುತ್ತಿತ್ತು. ಒಂದು ಬ್ಯಾರೆಲ್ 42 ಗ್ಯಾಲನ್ ಅಥವಾ ಸರಿಸುಮಾರು 159 ಲೀಟರ್ ಗೆ ಸಮವಾಗಿದೆ. 2008 ರಲ್ಲಿ ಉತ್ತುಂಗದಲ್ಲಿದ್ದಾಗ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಬ್ರೆಂಟ್ ಬ್ಯಾರೆಲ್‌ಗೆ 140 ಡಾಲರ್‌ನಷ್ಟಿದ್ದ ದರವು 45 ಅಮೆರಿಕನ್ ಡಾಲರ್‌ಗೆ ಇಳಿಕೆಗೊಂಡಿತು. ಆನಂತರದಲ್ಲಿ ದೊಡ್ಡ ಮಟ್ಟಿಗೆ ಬೇಡಿಕೆ ನಾಶಗೊಂಡಿತು.

2020ರಲ್ಲಿ ಬೇಡಿಕೆ ಭಾರೀ ಕುಸಿತ

2020ರಲ್ಲಿ ಬೇಡಿಕೆ ಭಾರೀ ಕುಸಿತ

ಏಪ್ರಿಲ್ 2020 ರಲ್ಲಿ, ಕೋವಿಡ್ ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಆವರಿಸಿದ್ದರಿಂದ ತೈಲದ ಬೆಲೆ ಮತ್ತೊಮ್ಮೆ ದಾಖಲೆ ಮಟ್ಟಕ್ಕೆ ಕುಸಿಯಿತು. ದೇಶವ್ಯಾಪಿ ಲಾಕ್‌ಡೌನ್‌ಗಳನ್ನು ಮತ್ತು ಅತ್ಯಂತ ದುರ್ಬಲ ಬೇಡಿಕೆಯ ಪರಿಣಾಮ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಯಿತು.

ಇಂಧನ ಪೂರೈಕೆ ಕೊರತೆ
 

ಇಂಧನ ಪೂರೈಕೆ ಕೊರತೆ

ಜಾಗತಿಕ ಮಟ್ಟದಲ್ಲಿ ಕೋವಿಡ್‌ ಅವಧಿಯಲ್ಲಿ ದೊಡ್ಡ ಮಟ್ಟಿಗೆ ಇಂಧನ ಕುಸಿತದ ಪರಿಣಾಮವು ಇಂದು ಬೆಲೆ ಹೆಚ್ಚಳಕ್ಕೆ ಖಾರಣವಾಗಿದೆ. ಇದು ಚೀನಾ, ಅಮೆರಿಕಾ, ಇಂಗ್ಲೆಂಡ್ ಮತ್ತು ಯೂರೋಪ್‌ನಾದ್ಯಂತ ದೊಡ್ಡ ಅಡೆತಡೆಯಾಗಿ ಪರಿಣಮಿಸಿದೆ. ಇನ್ನು ತೈಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾದಂತ ಹಲವು ರಾಷ್ಟ್ರಗಳಲ್ಲಿ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಗೆ ಕಾರಣವಾಗಿದೆ.

ಸೆಪ್ಟೆಂಬರ್ 2021 ರ ಹೊತ್ತಿಗೆ, ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಪೂರೈಕೆ ಕೊರತೆಯೊಂದಿಗೆ ಕಚ್ಚಾ ತೈಲ ಬೆಲೆಗಳನ್ನು ಸುಮಾರು ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಪ್ರತಿ ಬ್ಯಾರೆಲ್‌ಗೆ 80 ಡಾಲರ್‌ಗೆ ತಲುಪುವಂತೆ ಮಾಡಿದೆ. ಗೋಲ್ಡ್‌ಮನ್ ಸ್ಯಾಚ್ಸ್‌ನ ವಿಶ್ಲೇಷಕರ ಪ್ರಕಾರ ಬ್ರೆಂಟ್ ಕಚ್ಚಾ ತೈಲವು ವರ್ಷದ ಅಂತ್ಯದ ವೇಳೆಗೆ ಬ್ಯಾರೆಲ್‌ಗೆ 90 ಡಾಲರ್‌ಗಳನ್ನು ತಲುಪುತ್ತದೆ ಎಂದು ನಿರೀಕ್ಷಿಸಿದ್ದಾರೆ.

 

ದೇಶಗಳ ನಡುವೆ ಪೆಟ್ರೋಲ್ ಬೆಲೆ ವ್ಯತ್ಯಾಸವೇಕೆ?

ದೇಶಗಳ ನಡುವೆ ಪೆಟ್ರೋಲ್ ಬೆಲೆ ವ್ಯತ್ಯಾಸವೇಕೆ?

ಆಯಾ ದೇಶಗಳ ಪೆಟ್ರೋಲ್, ಡೀಸೆಲ್ ಬೆಲೆಯು ಕಚ್ಚಾ ತೈಲದ ಬೆಲೆ, ಸಾರಿಗೆ ವೆಚ್ಚಗಳು, ರಾಜ್ಯ ತೆರಿಗೆಗಳು ಮತ್ತು ವಿತರಣಾ ವೆಚ್ಚಗಳು ಸೇರಿದಂತೆ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಒಂದೊಂದು ರಾಷ್ಟ್ರದಲ್ಲಿ ಒಂದು ರೀತಿಯ ದರಗಳು ನಿಗದಿಯಾಗಿರುತ್ತವೆ ಮತ್ತು ವ್ಯತ್ಯಾಸಗೊಳ್ಳುತ್ತವೆ.

2001ರಿಂದ 2021ರವರೆಗೆ ತೈಲ ಬೆಲೆ ಹೇಗೆ ಬದಲಾಗಿದೆ?

2001ರಿಂದ 2021ರವರೆಗೆ ತೈಲ ಬೆಲೆ ಹೇಗೆ ಬದಲಾಗಿದೆ?

ಕಳೆದ ಎರಡು ದಶಕಗಳಲ್ಲಿ ವಿವಿಧ ರಾಷ್ಟ್ರಗಳಲ್ಲಿ ತೈಲ ಬೆಲೆ ಬಹುತೇಕ ದ್ವಿಗುಣಗೊಂಡಿದೆ. 2001ರಿಂದ 2021ರವರೆಗೆ ಪೆಟ್ರೋಲ್ ಬೆಲೆ ಲೀಟರ್‌ಗೆ ಎಷ್ಟು ಬೆಲೆ ಬದಲಾಯಿತು ಎಂಬುದನ್ನು ಈ ಕೆಳಗೆ ನೋಡಬಹುದು. ಒಂದು ಲೀಟರ್‌ಗೆ ಸರಾಸರಿ ಡಾಲರ್ ಎಷ್ಟು ಎಂಬುದನ್ನು ನೀವು ಕಾಣಬಹುದು.

ರಾಷ್ಟ್ರಗಳು200120112021
ಆಸ್ಟ್ರೇಲಿಯಾ$0.57$1.23$1.13
ಬ್ರೆಜಿಲ್$0.90$1.60$1.13
ಚೀನಾ$0.40$1.10$1.17
ಭಾರತ$0.60$1.16$1.38
ಇರಾನ್$0.22$0.22$0.06
ಮಲೇಷಿಯಾ$0.28$0.58$0.48
ನೈಜೀರಿಯಾ$0.28$0.41$0.40
ರಷ್ಯಾ$0.35$0.82$0.68
ಸೌದಿ ಅರೇಬಿಯಾ$0.22$0.18$0.62
ದಕ್ಷಿಣ ಆಫ್ರಿಕಾ$0.50$1.19$1.20
ಇಂಗ್ಲೆಂಡ್$1.10$1.90$1.87
ಅಮೆರಿಕಾ$0.38$0.82$0.93

English summary

How the price of petrol has changed from 2001 to 2021

Here the details of how petrol has been changed from 2001 to 2021, Explained in kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X