For Quick Alerts
ALLOW NOTIFICATIONS  
For Daily Alerts

ಗೂಗಲ್ ಪೇನಲ್ಲಿ 1 ಲಕ್ಷ ರುಪಾಯಿ ಗೆಲ್ಲಲು ಇಂದು ಕೊನೆಯ ಅವಕಾಶ

|

ಹೆಚ್ಚು ಬಳಕೆದಾರರನ್ನು ಒಳಗೊಂಡಿರುವ ಡಿಜಿಟಲ್ ಪಾವತಿ ಆ್ಯಪ್ ಗೂಗಲ್ ಪೇ ಅತ್ಯಾಕರ್ಷಕ ಆಫರ್ ವೊಂದನ್ನು ನೀಡಿದೆ. ಆ್ಯಪ್ ಮೂಲಕ ರಂಗೋಲಿ ಸ್ಟ್ಯಾಂಪ್ ಗಳನ್ನು ಸಂಗ್ರಹಿಸಿದ್ರೆ, 1 ಲಕ್ಷ ರುಪಾಯಿ ಗೆಲ್ಲುವ ಅವಕಾಶ ನೀಡಿದೆ. ಇದೇ ನವೆಂಬರ್ 11ರಂದು ಕೊನೆಯ ದಿನಾಂಕವಾಗಿದ್ದು ಅದರೊಳಗೆ 1 ಲಕ್ಷ ರುಪಾಯಿ ಗೆಲ್ಲುವ ಆಫರ್ ನೀಡಿದೆ.

ಭಾರತದಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಜನರು ಡಿಜಿಟಲ್ ಪಾವತಿಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಪೇಟಿಎಂ, ಗೂಗಲ್ ಪೇ, ಫೋನ್ ಪೇ ಸೇರಿದಂತೆ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರ ಪ್ರಮಾಣ ಹೆಚ್ಚಾಗಿದೆ. ಇದೀಗ ಈ ಡಿಜಿಟಲ್ ಪಾವತಿಯ ಆ್ಯಪ್ ಗಳಲ್ಲೂ ಸಾಕಷ್ಟು ಸ್ಪರ್ಧೆ ಹೆಚ್ಚಿದೆ. ಗ್ರಾಹಕರನ್ನು ಆಕರ್ಷಿಸಲು ನಾನಾ ರೀತಿಯ ಆಫರ್ ಗಳನ್ನು ನೀಡುತ್ತಿವೆ. ಯಾವುದೇ ಬಿಲ್‌ಗಳನ್ನು ಪಾವತಿಸಿದ್ದಲ್ಲಿ, ಮೂವಿ ಟಿಕೆಟ್ಸ್ ಬುಕ್ ಮಾಡಿದ್ದಲ್ಲಿ ಕ್ಯಾಶ್‌ಬ್ಯಾಕ್‌ ಆಫರ್ ಮಾಡುತ್ತಿವೆ.

 

ಈಗ ಬ್ಯಾಂಕಿಂಗ್ ಗೂ ಬಂತು ವಾಟ್ಸಾಪ್; ಏನಿದು ವಾಟ್ಸಾಪ್ ಬ್ಯಾಂಕಿಂಗ್?

ಗೂಗಲ್ ಪೇ ಕೂಡ ಬಳಕೆದಾರರನ್ನು ಹೆಚ್ಚು ಆಕರ್ಷಿಸಲು ರಂಗೋಲಿ ಸ್ಟ್ಯಾಂಪ್ ಗಳನ್ನು ಸಂಗ್ರಹಿಸುವ ಆಫರ್ ನೀಡಿತು. ಇದು ಮೊದಲು ದೀಪಾವಳಿವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ ಜನರಿಂದ ಹೆಚ್ಚು ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ಬಂದ ಕಾರಣ ಈ ಆಫರ್ ನವೆಂಬರ್ 11ರ ವರೆಗೆ ವಿಸ್ತರಿಸಲಾಯಿತು.

ಹಾಗಿದ್ದರೆ ಗೂಗಲ್‌ ಪೇನಲ್ಲಿ ಅದೃಷ್ಟದ ಸ್ಟ್ಯಾಂಪ್ ಗಳನ್ನ ಸಂಗ್ರಹಿಸುವುದು ಹೇಗೆ? 1 ಲಕ್ಷ ರುಪಾಯಿ ಗೆಲ್ಲಲು ಏನು ಮಾಡಬೇಕೆಂದು ಇಲ್ಲಿದೆ ವಿವರಣೆ

ಪೇಟಿಎಂ ಮೂಲಕ ಸ್ಟ್ಯಾಂಪ್ ಪಡೆಯಿರಿ

ಪೇಟಿಎಂ ಮೂಲಕ ಸ್ಟ್ಯಾಂಪ್ ಪಡೆಯಿರಿ

ಪೇಟಿಎಂ ಆ್ಯಪ್ ಡೌನ್‌ಲೋಡ್ ಮಾಡಿ ನಿಮ್ಮ ಖಾತೆಗೆ ಸ್ವಲ್ಪ ಹಣವನ್ನ ಹಾಕಬೇಕು. ನಿಮ್ಮ ಖಾತೆಗೆ ಹಣವನ್ನು ಹಾಕುವಾಗ ಗೂಗಲ್ ಪೇ UPI ಆಯ್ಕೆಯನ್ನ ಮಾಡಿಕೊಳ್ಳಬೇಕು. ಬಳಿಕ 50 ರಿಂದ 100 ರುಪಾಯಿ ಅಥವಾ ಎಷ್ಟಾದರೂ ಹಣವನ್ನು ನಿಮ್ಮ ಖಾತೆಗೆ ಹಾಕಿ.

ಫ್ಲಿಪ್ ಕಾರ್ಟ್, ಅಮೆಜಾನ್‌ನಲ್ಲಿ ಶಾಪಿಂಗ್‌ ಮಾಡಿ

ಫ್ಲಿಪ್ ಕಾರ್ಟ್, ಅಮೆಜಾನ್‌ನಲ್ಲಿ ಶಾಪಿಂಗ್‌ ಮಾಡಿ

ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಆನ್‌ಲೈನ್ ಶಾಪಿಂಗ್‌ ಆ್ಯಪ್ ಮೂಲಕ ಏನನ್ನಾದರೂ ಖರೀದಿಸಿರಿ. ಖರೀದಿಸುವಾಗ BHIM UPI ವಿಭಾಗದಿಂದಲೇ ಹಣ ಪಾವತಿ ಮಾಡಬೇಕು. BHIM UPI ನಲ್ಲಿರುವ ಅಡ್ರೆಸ್ ಬಾರ್‌ನಲ್ಲಿ ಗೂಗಲ್ ಪೇ ಮಾಹಿತಿ ಸೇರಿಸಬೇಕು ಮತ್ತು ನೀವು ಶಾಪಿಂಗ್ ಮಾಡಿದ ಮೊತ್ತವನ್ನು ಗೂಗಲ್ ಪೇ ಮೂಲಕವೇ ಪಾವತಿಸಬೇಕು.

ನಿಮ್ಮ ಬಿಲ್‌ಗಳನ್ನು ಪಾವತಿಸಿ ಸ್ಟ್ಯಾಂಪ್ ಪಡೆಯಿರಿ
 

ನಿಮ್ಮ ಬಿಲ್‌ಗಳನ್ನು ಪಾವತಿಸಿ ಸ್ಟ್ಯಾಂಪ್ ಪಡೆಯಿರಿ

ನೀವು ಬಿಲ್‌ಗಳನ್ನು ಪಾವತಿಸುವ ಮೂಲಕ ಸ್ಟ್ಯಾಂಪ್ ಪಡೆಯಬಹುದು. ಉದಾಹರಣೆ ಗೂಗಲ್ ಪೇ ಮೂಲಕ ವಿದ್ಯುತ್ ಬಿಲ್ ಅಥವಾ ಮೊಬೈಲ್ ಫೋನ್ ,ಡಿಟಿಹೆಚ್ ರಿಚಾರ್ಜ್ ಮಾಡುವುದರಿಂದ ಸ್ಟ್ಯಾಂಪ್ ಪಡೆಬಹುದು.

CRED ಆ್ಯಪ್ ಮೂಲಕ ಸ್ಟ್ಯಾಂಪ್  ಗೆಲ್ಲಿ

CRED ಆ್ಯಪ್ ಮೂಲಕ ಸ್ಟ್ಯಾಂಪ್ ಗೆಲ್ಲಿ

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕ್ರೆಡಿಟ್ ಕಾರ್ಡ್‌ ಬಿಲ್‌ಗಳನ್ನು ಪಾವತಿಸುವ CRED ಆ್ಯಪ್ ಡೌನ್ ಮಾಡಿಕೊಳ್ಳಿ. ಮುಂದೆ ಅಪ್ಲಿಕೇಶನ್‌ನಲ್ಲಿ ಸೈನ್ ಆಪ್ ಮಾಡಿ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿ. ಆದರೆ ಗೂಗಲ್ ಪೇ ಮೂಲಕವೇ ಹಣ ಪಾವತಿಸುವ ಕುರಿತು ಪರೀಕ್ಷಿಸಿಕೊಳ್ಳಿ.ಬಳಿಕ ನಿಮಗೆ ಬೇಕಾಗಿರುವ ಸ್ಟ್ಯಾಂಪ್ ಗೆಲ್ಲಿ.

QR ಕೋಡ್ ಸ್ಯ್ಯಾನ್ ಮೂಲಕ ಸ್ಟ್ಯಾಂಪ್ ಪಡೆಯಿರಿ

QR ಕೋಡ್ ಸ್ಯ್ಯಾನ್ ಮೂಲಕ ಸ್ಟ್ಯಾಂಪ್ ಪಡೆಯಿರಿ

ಈ ಮೂಲಕ ನೀವು ಸ್ಟ್ಯಾಂಪ್ ಪಡೆಯಲು ಬಿಜಿನೆಸ್ QR ಕೋಡ್ ಅಥವಾ ಫೋನ್ ಪೇ ಅಥವಾ ಗೂಗಲ್ ಪೇ, ಪೇಟಿಎಂ ಅವಶ್ಯಕತೆಯಿದೆ. ಮೊದಲು ನಿಮ್ಮ ಮೊಬೈಲ್‌ನಲ್ಲಿ QR ಕೋಡ್ ಸೇವ್ ಮಾಡಿಕೊಳ್ಳಬೇಕು. ಬಳಿಕ ಗೂಗಲ್ ಪೇ ಆ್ಯಪ್ ತೆರೆದು ಗೂಗಲ್ ಪೇ ಸ್ಯ್ಯಾನರ್ ಮೂಲಕ QR ಕೋಡ್ ಸ್ಯ್ಯಾನ್ ಮಾಡಬೇಕು. ನಂತರ 50 ರುಪಾಯಿ ಮೇಲ್ಪಟ್ಟು ಹಣವನ್ನು ಟ್ರಾನ್ಸ್ಫರ್ ಮಾಡಿದರೆ ಸ್ಟ್ಯಾಂಪ್ ಗೆಲ್ಲುವ ಅರ್ಹತೆ ಪಡೆಯಬಹುದು. ಆದರೆ ಮರೆಯದಿರಿ ಈ ಅವಕಾಶ ನವೆಂಬರ್ 11ರವರೆಗೆ ಮಾತ್ರ.

English summary

How To Get Diwali Stamps on Google Pay

Google pay launched an innovative scheme to attract nation. collect of diwali stamps can chance to win 1 lakh rupees.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more