ಫ್ಲಿಪ್ ಕಾರ್ಟ್ ನಿಂದ ಪುಕ್ಕಟೆ ಸ್ಮಾರ್ಟ್ ಫೋನ್ ಪಡೆಯಬಹುದು, ಹೇಗೆ ಗೊತ್ತಾ?
ಫ್ಲಿಪ್ ಕಾರ್ಟ್ ನಿಂದ ತೀರಾ ಅಚ್ಚರಿ ಪಡುವ ರೀತಿಯ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಫೋನ್ ನೀಡಲಾಗುತ್ತಿದೆ. ಗ್ರಾಹಕರನ್ನು ಸೆಳೆಯಬೇಕು ಎಂಬ ಕಾರಣಕ್ಕೆ ಇ- ಕಾಮರ್ಸ್ ಪ್ರತಿಸ್ಪರ್ಧಿ ಕಂಪೆನಿ ಅಮೆಜಾನ್ ಇಂಡಿಯಾ ಜತೆಗೆ ಪ್ರಬಲ ಪೈಪೋಟಿ ಒಡ್ಡುತ್ತಿದೆ. ಇಷ್ಟು ಸಮಯ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಮಾರಾಟಕ್ಕೆ ಹೆಸರಾಗಿತ್ತು.
ಬೆಂಗಳೂರಿನ ಲ್ಯಾವೆಲ್ಲೆ ರಸ್ತೆ ವಿಳಾಸದಲ್ಲಿ ಟೆಸ್ಲಾ ಕಂಪೆನಿ ನೋಂದಣಿ
ಇದೀಗ ಹೊಸ ಅಭಿಯಾನದೊಂದಿಗೆ ಉಚಿತ ಸ್ಮಾರ್ಟ್ ಫೋನ್ ಒದಗಿಸುವ ಯೋಜನೆ ಜತೆ ಬಂದಿದೆ. ಫ್ಲಿಪ್ ಕಾರ್ಟ್ ನಲ್ಲಿ ಉಚಿತವಾಗಿ ಸ್ಮಾರ್ಟ್ ಫೋನ್ ಖರೀದಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ:

12 ಅಥವಾ 18 ತಿಂಗಳ ನಂತರ 100% ಹಣ ವಾಪಸ್
ಜನವರಿ 17ನೇ ತಾರೀಕಿನಿಂದ ಫ್ಲಿಪ್ ಕಾರ್ಟ್ ಬಳಕೆದಾರರು ಸ್ಮಾರ್ಟ್ ಫೋನ್ ಉಚಿತವಾಗಿ ಖರೀದಿ ಮಾಡುವುದಕ್ಕೆ ಅರ್ಹರು. ಫ್ಲಿಪ್ ಕಾರ್ಟ್ ಸ್ಮಾರ್ಟ್ ಪ್ಯಾಕ್ ಪ್ರೋಗ್ರಾಂ ಅಡಿಯಲ್ಲಿ ಉಚಿತವಾಗಿ ಫೋನ್ ಖರೀದಿಸಲು ಕಂಪೆನಿಯು ಅವಕಾಶ ನೀಡುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಗ್ರಾಹಕರು ತಮಗೆ ಬೇಕಾದ ಸ್ಮಾರ್ಟ್ ಫೋನ್ ಖರೀದಿಸಬಹುದು ಮತ್ತು 12 ಅಥವಾ 18 ತಿಂಗಳ ನಂತರ 100% ಹಣ ವಾಪಸ್ ಪಡೆಯಬಹುದು. ಫ್ಲಿಪ್ ಕಾರ್ಟ್ ಸ್ಮಾರ್ಟ್ ಪ್ಯಾಕ್ ಎಂಬುದು ಸಬ್ ಸ್ಕ್ರಿಪ್ಷನ್ ಆಧಾರಿತ ಸೇವೆ. ಇದರ ಅಡಿಯಲ್ಲಿ ಹೊಸ ಸ್ಮಾರ್ಟ್ ಫೋನ್ ಖರೀದಿ ಮೇಲೆ ಖಚಿತವಾದ ಪೇಬ್ಯಾಕ್ ಆಫರ್ ಇದೆ. ಗ್ರಾಹಕರು 12 ಅಥವಾ 18 ತಿಂಗಳ ಚಂದಾದಾರಿಕೆಯನ್ನು ಜನವರಿ 17ರಿಂದ ಆರಿಸಿಕೊಳ್ಳಬಹುದು. ಖರೀದಿ ಮಾಡುವ ವೇಳೆ ಅವರು ಪಾವತಿ ಮಾಡಿದ್ದ ಹಣದ ಶೇಕಡಾ 100ರಷ್ಟನ್ನು ವಾಪಸ್ ಪಡೆಯಲು ಅರ್ಹರಿರುತ್ತಾರೆ.

ಫ್ಲಿಪ್ ಕಾರ್ಟ್ ನಲ್ಲಿ ಉಚಿತವಾಗಿ ಸ್ಮಾರ್ಟ್ ಫೋನ್ ಖರೀದಿಸುವುದು ಹೇಗೆ?
* ಫ್ಲಿಪ್ ಕಾರ್ಟ್ ಖಾತೆಗೆ ಲಾಗ್ ಇನ್ ಆಗಬೇಕು.
* ಯಾವ ಸ್ಮಾರ್ಟ್ ಫೋನ್ ಅನ್ನು ಖರೀದಿಸಬೇಕು ಅಂತಿದ್ದೀರೋ ಅದನ್ನು ಆರಿಸಿಕೊಳ್ಳಬೇಕು.
* ನಿಮ್ಮ ಆಯ್ಕೆಗೆ ತಕ್ಕಂತೆ ಫ್ಲಿಪ್ ಕಾರ್ಟ್ ಸ್ಮಾರ್ಟ್ ಪ್ಯಾಕ್ ಆರಿಸಿಕೊಳ್ಳಬೇಕು (ಗೋಲ್ಡ್, ಸಿಲ್ವರ್, ಬ್ರೋಂಜ್).
* ಚಂದಾದಾರಿಕೆ ಅವಧಿ ಆರಿಸಿಕೊಳ್ಳಬೇಕು (12 ತಿಂಗಳು ಅಥವಾ 18 ತಿಂಗಳು).

ಯಾವ ಪ್ಲ್ಯಾನ್ ಗೆ ಎಷ್ಟು ಹಣ ವಾಪಸ್?
ಬಳಕೆದಾರರು ಸ್ಮಾರ್ಟ್ ಫೋನ್ ಮೊತ್ತವನ್ನು ಮೊದಲಿಗೇ ಪಾವತಿಸಬೇಕು. ಆ ನಂತರ ತಿಂಗಳ ಶುಲ್ಕ ಎಂದು ಸ್ಮಾರ್ಟ್ ಪ್ಯಾಕ್ ಆರಂಭಿಕ ಶುಲ್ಕ ರು. 399ರಿಂದ ಸಬ್ ಸ್ಕ್ರಿಪ್ಷನ್ ಶುರುವಾಗುತ್ತದೆ. ಅದರಲ್ಲಿ ಸೋನಿLIV, Zee5 ಪ್ರೀಮಿಯಂ, ವೂಟ್ ಸೆಲೆಕ್ಟ್, ಝೊಮ್ಯಾಟೋ ಪ್ರೋ ಇನ್ನಷ್ಟು ಸೇವೆಗಳು ದೊರೆಯುತ್ತದೆ. ಒಂದು ಸಲ ಚಂದಾದಾರಿಕೆ ಮುಗಿದ ಮೇಲೆ ವರ್ಕಿಂಗ್ ಕಂಡೀಷನ್ ನಲ್ಲಿ ಇರುವ ಫೋನ್ ಹಿಂತಿರುಗಿಸಿ, ಪೂರ್ತಿ ಹಣ ವಾಪಸ್ ಪಡೆಯಬಹುದು. ನೆನಪಿಡಿ, ಫೋನ್ ಕಡ್ಡಾಯವಾಗಿ ವರ್ಕಿಂಗ್ ಕಂಡೀಷನ್ ನಲ್ಲಿ ಮತ್ತು ಫೋನ್ ಸ್ಕ್ರೀನ್ ಮೇಲೆ IMEI ನಂಬರ್ ಇರಬೇಕು. ಯಾವ ಸ್ಮಾರ್ಟ್ ಪ್ಯಾಕ್ ಪ್ಲಾನ್ ಎಂಬ ಆಧಾರದಲ್ಲಿ ಫೋನ್ ನ ಹಣ ವಾಪಸ್ ದೊರೆಯುತ್ತದೆ. ಗೋಲ್ಡ್ ಪ್ಲಾನ್ ಗೆ ಶೇಕಡಾ 100ರಷ್ಟು, ಸಿಲ್ವರ್ ಪ್ಲಾನ್ ಗೆ ಶೇಕಡಾ 80, ಬ್ರೋಂಜ್ ಪ್ಯಾಕ್ ಗೆ ಶೇಕಡಾ 60ರಷ್ಟು ಹಣ ವಾಪಸ್ ದೊರೆಯುತ್ತದೆ.