For Quick Alerts
ALLOW NOTIFICATIONS  
For Daily Alerts

ಸಮುದ್ರಕ್ಕೆ ಎಸೆಯಲಾದ ಪ್ಲಾಸ್ಟಿಕ್‌ಗಳಿಂದ ಮಾಡಲಾದ ಪಿಸಿಗಳು: ಏನಿದರ ವಿಶೇಷತೆ?

|

ಜನರು ಬಳಸಿ ಸಮುದ್ರಕ್ಕೆ ಎಸೆದ ಪ್ಲಾಸ್ಟಿಕ್‌ಗಳ ಮೂಲಕ ಪಿಸಿಗಳನ್ನು ತಯಾರಿಸಿರುವ ಎಚ್‌ಪಿ ಸಂಸ್ಥೆಯು, ಸುಸ್ಥಿರತೆಯ ಕುರಿತಾಗಿ ಕಂಪನಿಗಿರುವ ಬದ್ಧತೆಯನ್ನು ಪ್ರದರ್ಶಿಸಿದೆ. ಹೆಚ್‌ಪಿ ಪೆವಿಲಿಯನ್‌ 13, ಹೆಚ್‌ಪಿ ಪೆವಿಲಿಯನ್ 14 ಹಾಗೂ 15 ಲ್ಯಾಪ್‌ಟಾಪ್‌ಗಳು ಅತ್ಯಾಕರ್ಷಕವಾಗಿದೆ.

ಹೆಚ್‌ಪಿ ಕಂಪನಿಯ ಈ ಅಪ್‌ಡೇಟ್‌ ಲ್ಯಾಪ್‌ಟಾಪ್ ಸರಣಿಯು ವಿಶಿಷ್ಟ ಬಣ್ಣಗಳಲ್ಲಿ ಲಭ್ಯವಿದ್ದು 11th Gen Intel® CoreTM ಪ್ರೋಸೆಸರ್ ಹಾಗೂ Intel® Iris® Xe ಗ್ರಾಫಿಕ್ಸ್ ಒಳಗೊಂಡಿದೆ.

92,000 ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಾಣ

92,000 ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಾಣ

ಈ ಹೊಸ ಪೆವಿಲಿಯನ್ ನೋಟ್‌ಬುಕ್‌ಗಳು ಸಮುದ್ರ ಹಾಗೂ ತ್ಯಾಜ್ಯ ಗುಂಡಿಗಳಿಂದ ಸಂಗ್ರಹಿಸಿದ ಸುಮಾರು 92,000 ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ನಿರ್ಮಿಸಲಾದ ಸ್ಪೀಕರ್ ಹೌಸಿಂಗ್ ಒಳಗೊಂಡಿದ್ದು, ಹೊಸ ಸಾಧನದ ಪ್ಯಾಕೇಜಿಂಗ್‌ಗೆ ಬಳಸಲಾದ ಹೊರ ಆವರಣದ ಬಾಕ್ಸ್ ಮತ್ತು ಫೈಬರ್ ಕುಷನ್ ಕೂಡ ಶೇ. 100ರಷ್ಟು ಸುಸ್ಥಿರವಾಗಿವೆ ಹಾಗೂ ಮರುಬಳಕೆ ಮಾಡುವಂಥವಾಗಿವೆ. ಈ ಲ್ಯಾಪ್‌ಟಾಪ್‌ಗಳು EPEAT Silver ನೋಂದಣೀಯಾಗಿವೆ ಹಾಗೂ Energy Star ಪ್ರಮಾಣಿತವಾಗಿವೆ.

ಈಗ ಪಿಸಿಗಳು ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಹೊಸ ತಲೆಮಾರು ಸ್ಮಾರ್ಟ್ ಫೋನಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಪಿಸಿಗಳನ್ನು ಬಳಸುತ್ತಿದೆ. ತಮ್ಮ ಗೆಳೆಯರು ಹಾಗೂ ಕುಟುಂಬದ ಜತೆಗೆ ಸಂಪರ್ಕ ಹೊಂದಲು, ಮನೋರಂಜನೆ ಪಡೆಯಲು, ಡಿಜಿಟಲ್ ಕ್ಲಾಸ್‌ರೂಮ್‌ಗಳಲ್ಲಿ ಕಲಿಯಲು ಬಳಕೆಯಾಗುತ್ತಿವೆ. ಈ ಎಲ್ಲ ಅಗತ್ಯಗಳನ್ನು ಗಮನದಲ್ಲಿ ಇರಿಸಿಕೊಂಡು, ಬಳಕೆದಾರರಿಗೆ ಅನುಕೂಲವಾಗುವಂತೆ ಉತ್ಕೃಷ್ಟ ದರ್ಜೆಯ ಪಿಸಿಗಳನ್ನು ರೂಪಿಸಲಾಗಿದೆ.

 

ಉತ್ತಮ ಕಾರ್ಯಕ್ಷಮತೆ, ವೇಗದ ಸಂಪರ್ಕ

ಉತ್ತಮ ಕಾರ್ಯಕ್ಷಮತೆ, ವೇಗದ ಸಂಪರ್ಕ

ಈಗಿನ ಆನ್-ಲೈನ್ ಕೆಲಸದ ಟ್ರೆಂಡ್‌ಗೆ ಸೂಕ್ತವಾಗುವಂತೆ ಈ ಪೆವಿಲಿಯನ್ ಪಿಸಿಗಳು ಈ ದರ್ಜೆಯಲ್ಲೇ ಉತ್ಕೃಷ್ಟವಾದ 11th Gen Intel® CoreTM ಪ್ರೋಸೆಸರ್ಗಳು ಹಾಗೂ Intel® Iris® Xe ಗ್ರಾಫಿಕ್ಸ್ ಒಳಗೊಂಡಿವೆ. Pavilion 14 ಹಾಗೂ Pavilion 15 NVIDIA® GeForce® MX450 ವರೆಗಿನ ಆಯ್ಕೆಗಳನ್ನು ಒದಗಿಸುತ್ತದೆ.

ಇತರ ವೈಶಿಷ್ಟ್ಯಗಳು

ಇತರ ವೈಶಿಷ್ಟ್ಯಗಳು

· ಡ್ಯುಯಲ್ ಚಾನೆಲ್ ಮೆಮೊರೆ ತಂತ್ರಜ್ಞಾನ, Intel® OptaneTM ಮೆಮೊರಿ ಹಾಗೂ 1 ಟಿಬಿ ವರೆಗಿನ ಸಂಗ್ರಹ ಸಾಮರ್ಥ್ಯವಿರುವ ಎಲ್ಲ ಮೂರು ಸಾಧನಗಳಲ್ಲೂ ಫೈಲ್‌ಗಳನ್ನು ತ್ವರಿತವಾಗಿ ತೆರೆಯಬಹುದು, ಸಂಗ್ರಹಿಸಬಹುದು.


· ಬ್ಯಾಟರಿ ಬಾಳಿಕೆ: ಎಚ್‌ಪಿ ಲ್ಯಾಪ್‌ಟಾಪ್‌ಗಳು ಒಂದು ದಿನದ ಕೆಲಸಕ್ಕೆ ಸಾಕಾಗುವಷ್ಟು ಬ್ಯಾಟರಿ ಬಾಳಿಕೆ ಹೊಂದಿವೆ. Pavilion 13 ಸುಮಾರು 8.5 ಗಂಟೆ, Pavilion 14 ಹಾಗೂ Pavilion 15 ಸುಮಾರು 8.75 ಗಂಟೆಗಳಷ್ಟು ಬಾಳಿಕೆ ಬರುತ್ತದೆ.


· ಬ್ಯಾಟರಿ ಜೀವಿತಾವಧಿಯನ್ನು ಹಾಗೂ ಕ್ಷಮತೆಯನ್ನು ಹೆಚ್ಚಿಸಲು ಅಡಾಪ್ಟೆಟಿವ್ ಬ್ಯಾಟರಿ ಆಪ್ಟಿಮೈಜರ್ ಲಭ್ಯವಿದೆ.


· ಉತ್ಪಾದಕ ಪೋರ್ಟ್‌ಗಳು: HDMI 2.0 ಪೋರ್ಟ್ ಬಾಹ್ಯ 5K ಮಾನಿಟರ್ ಜತೆ ಸುಲಭವಾಗಿ ಸಂಪರ್ಕ ಸಾಧಿಸುತ್ತದೆ. ಹಾಗೂ SuperSpeed USB-C® ಪೋರ್ಟ್ ಡಾಟಾ, ಡಿಸ್‌ಪ್ಲೇಗಳನ್ನು ಬೆಂಬಲಿಸುತ್ತದೆ.


· ಹೆಚ್ಚು ವೇಗದೊಂದಿಗೆ ಸದಾ ಸಂಪರ್ಕ: Wi-Fi 6 ಜತೆಗೆ, ಪೆವಿಲಿಯನ್ ಪಿಸಿಗಳು ಶೇ. 75ರಷ್ಟು ಕಡಿಮೆ ಸುಪ್ತತೆಯೊಂದಿಗೆ ನಾಲ್ಕು ಪಟ್ಟು ವೇಗದ ವೈ-ಫೈ ಸಂಪರ್ಕವನ್ನು ಒದಗಿಸುತ್ತವೆ.


· ಸುಲಭ ಬಳಕೆ : ಎಚ್‌ಪಿಯ ಮಾಡರ್ನ್ ಸ್ಟ್ಯಾಂಡ್ ಬೈ ವ್ಯವಸ್ಥೆ ಇರುವ ಕಾರಣ ಲ್ಯಾಪ್‌ಟಾಪ್ ತೆರೆದೊಡನೆಯೇ ಸ್ಲೀಪ್ ಮೋಡ್‌ನಿಂದ ಹೊರಬಂದು ಪವರ್ ಸ್ಲೀಪ್ ಸ್ಥಿತಿಯಲ್ಲೂ ಸ್ವೀಕರಿಸಿದ ಇ-ಮೇಲ್ ಹಾಗೂ ಪ್ರಕಟಣೆಗಳನ್ನು ನೋಡಲು, ಸಂಗೀತ ಕೇಳಲು ಸಹಾಯ ಮಾಡುತ್ತದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

HP Pavilion Laptop 13-bb0075TU : 71,999 ರೂಪಾಯಿ ಆರಂಭಿಕ ಬೆಲೆಯೊಂದಿಗೆ ಲಭ್ಯ. ಸ್ಕ್ರೀನ್ ಗಾತ್ರ 13 ಇಂಚು, i5 ಮತ್ತು i7 ಮಾದರಿಗಳಲ್ಲಿ ಲಭ್ಯ, 1 ಟಿಬಿ ಸ್ಟೋರೇಜ್ ಸಾಮರ್ಥ್ಯ. ಬಣ್ಣಗಳು: ಸಿಲ್ವರ್ / ಸೆರಾಮಿಕ್ ವೈಟ್
· HP Pavilion Laptop 14-dv0053TU : 62,999 ರೂಪಾಯಿ ಆರಂಭಿಕ ಬೆಲೆಯೊಂದಿಗೆ ಲಭ್ಯ. ಸ್ಕ್ರೀನ್ ಗಾತ್ರ 14 ಇಂಚು. i5 ಮತ್ತು i7 ಮಾದರಿಗಳಲ್ಲಿ ಲಭ್ಯ, 1 ಟಿಬಿ ಸಂಗ್ರಹ ಸಾಮರ್ಥ್ಯ. ಬಣ್ಣಗಳು: ಸಿಲ್ವರ್ / ಸೆರಾಮಿಕ್ ವೈಟ್ ಹಾಗೂ ಟ್ರಾಂಕ್ವಿಲ್ ಪಿಂಕ್
· HP Pavilion Laptop 14-dv0084TX: 67,999 ರೂಪಾಯಿ ಆರಂಭಿಕ ಬೆಲೆಯೊಂದಿಗೆ ಲಭ್ಯ. ಸ್ಕ್ರೀನ್ ಗಾತ್ರ 14 ಇಂಚು. i5 GFX ಹಾಗೂ Iris Plus GFX. ಬಣ್ಣ: ಸಿಲ್ವರ್
· HP Pavilion Laptop 15-eg0103TX 69,999 ರೂಪಾಯಿ ಆರಂಭಿಕ ಬೆಲೆಯೊಂದಿಗೆ ಲಭ್ಯ. ಸ್ಕ್ರೀನ್ ಗಾತ್ರ 15 ಇಂಚು. i5 GFX ಹಾಗೂ Iris Plus GFX ಹೊಂದಿದೆ. ಬಣ್ಣ: ಸಿಲ್ವರ್ / ಸೆರಾಮಿಕ್ ವೈಟ್ / ಫಾಗ್ ಬ್ಲೂ.

ಈ ಪಿಸಿಗಳು ಎಲ್ಲ HP World ಸ್ಟೋರ್ ಗಳಲ್ಲಿ ಹಾಗೂ ಆನ್ ಲೈನಲ್ಲಿ store.hp.com/in ಲಭ್ಯ.

 

Read more about: hp laptop
English summary

HP First Consumer PCs Made with Ocean-Bound Plastics

HP Announced updates To Its Pavillion Line Up Which Showcase The company's commitment towards a more sustainable future for the planet.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X