For Quick Alerts
ALLOW NOTIFICATIONS  
For Daily Alerts

ಹಿಂದೂಸ್ತಾನ್ ಯುನಿಲಿವರ್ ಗೆ 2009 ಕೋಟಿ ರು. ಲಾಭ; 14 ರು. ಡಿವಿಡೆಂಡ್ ಘೋಷಣೆ

|

FMCG ಪ್ರಮುಖ ಕಂಪೆನಿ ಹಿಂದೂಸ್ತಾನ್ ಯುನಿಲಿವರ್ ಮಂಗಳವಾರ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದೆ. ನಿವ್ವಳ ಲಾಭದಲ್ಲಿ ಕಳೆದ ವರ್ಷದ ಇದೇ ಸಾಲಿಗಿಂತ 9% ಹೆಚ್ಚಳ ಆಗಿದ್ದು, 2009 ಕೋಟಿ ಗಳಿಸಿದೆ. ಈ ಹಿಂದಿನ ವರ್ಷದ ಅವಧಿಯಲ್ಲಿ 1848 ಕೋಟಿ ಲಾಭ ಗಳಿಸಿತ್ತು.

SBIನಿಂದ ಹಿಂದೂಸ್ತಾನ್ ಯುನಿಲಿವರ್ ಜತೆ ಸಹಭಾಗಿತ್ವ: ರೀಟೇಲರ್ ಗಳಿಗೆ ಆನ್ ಲೈನ್ ಸಾಲ

ಒಟ್ಟಾರೆ ಆದಾಯದಲ್ಲಿ 16% ಹೆಚ್ಚಳವಾಗಿದ್ದು, 11,593 ಕೋಟಿ ರುಪಾಯಿ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 10,032 ಕೋಟಿ ಆದಾಯ ಬಂದಿತ್ತು. ಕಂಪೆನಿಯ ಮಂಡಳಿಯು ಮಧ್ಯಂತರ ಲಾಬಾಂಶವಾಗಿ ಪ್ರತಿ ಷೇರಿಗೆ 14 ರುಪಾಯಿ ವಿತರಿಸುವುದಕ್ಕೆ ಅನುಮತಿ ನೀಡಲಾಗಿದೆ.

HUL ಗೆ  2009 ಕೋಟಿ ರು. ಲಾಭ; 14 ರು. ಡಿವಿಡೆಂಡ್ ಘೋಷಣೆ

 

ಕಂಪೆನಿಯ ತಕ್ಷಣ ಭವಿಷ್ಯದ ಬಾಹ್ಯ ನೋಟ ಆಶಾದಾಯಕವಾಗಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಬೆಳವಣಿಗೆ ಉತ್ತಮವಾಗಿದೆ. ಆದರೆ ನಗರ ಭಾಗದಲ್ಲಿ ಬೇಡಿಕೆ ಅನಿಶ್ಚಿತವಾಗಿದೆ ಎಂದು ಹಿಂದೂಸ್ತಾನ್ ಯುನಿಲಿವರ್ ಹೇಳಿದೆ. ಭಾರತದಲ್ಲಿ ಎಫ್ ಎಂಸಿಜಿ ವಲಯದಲ್ಲಿ ಬಹಳ ದೊಡ್ಡ ಮಟ್ಟದ ಮಾರ್ಕೆಟ್ ಪಾಲನ್ನು ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಹೊಂದಿದೆ.

English summary

HUL Q2 net profit rises 9% to Rs 2,009 cr; declares interim dividend of Rs 14 per share

FMCG major HUL net profit for FY21 September quarter announced on Tuesday. Net profit 2009 crore and 14 rupees per share interim dividend approved by board.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X