For Quick Alerts
ALLOW NOTIFICATIONS  
For Daily Alerts

ಜಾಗತಿಕ ಬೆಳವಣಿಗೆ ದರ ತಗ್ಗಿಸಿ ಹಿಂಜರಿತದ ಎಚ್ಚರಿಕೆ ನೀಡಿದ ಐಎಂಎಫ್

|

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜುಲೈ 26ರಂದು ಮತ್ತೆ ಜಾಗತಿಕ ಬೆಳವಣಿಗೆ ದರವನ್ನು ತಗ್ಗಿಸಿದೆ. ಹೆಚ್ಚು ಹಣದುಬ್ಬರ ಇರುವ ಕಾರಣದಿಂದಾಗಿ ಹಾಗೂ ಉಕ್ರೇನ್ ಯುದ್ಧದ ಮುಂದುವರಿದಿರುವ ಕಾರಣದಿಂದಾಗಿ ಜಾಗತಿಕ ಬೆಳವಣಿಗೆ ದರವನ್ನು ತಗ್ಗಿಸಲಾಗಿದೆ ಎಂದು ಐಎಂಎಫ್ ಹೇಳಿದೆ.

ಜಾಗತಿಕ ನೈಜ ಜಿಡಿಪಿ ಬೆಳವಣಿಗೆಯು ಏಪ್ರಿಲ್‌ನಲ್ಲಿ ನೀಡಲಾದ ಶೇಕಡ 3.6ರ ಮುನ್ಸೂಚನೆಯಿಂದ 2022ರಲ್ಲಿ ಶೇಕಡ 3.2ಕ್ಕೆ ತಗ್ಗಿದೆ ಎಂದು ಐಎಂಎಫ್ ವಿಶ್ವ ಆರ್ಥಿಕ ದೃಷ್ಟಿಕೋನದ ಅಪ್‌ಡೇಟ್ ಸಂದರ್ಭದಲ್ಲಿ ತಿಳಿಸಿದೆ. ಚೀನಾ ಮತ್ತು ರಷ್ಯಾದಲ್ಲಿನ ಆರ್ಥಿಕ ಕುಸಿತದ ಕಾರಣದಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿದಿದೆ ಎಂದು ಸೇರ್ಪಡೆ ಮಾಡಿದೆ.

ಭಾರತದ ಆರ್ಥಿಕ ಬೆಳವಣಿಗೆಯನ್ನು ತಗ್ಗಿಸಿದ ಐಎಂಎಫ್ಭಾರತದ ಆರ್ಥಿಕ ಬೆಳವಣಿಗೆಯನ್ನು ತಗ್ಗಿಸಿದ ಐಎಂಎಫ್

ಇನ್ನು ವಿತ್ತೀಯ ನೀತಿಯ ಪರಿಣಾಮವನ್ನು ಕೂಡಾ ಐಎಂಎಫ್ ಉಲ್ಲೇಖ ಮಾಡಿದೆ. 2023 ರ ಬೆಳವಣಿಗೆಯ ಮುನ್ಸೂಚನೆಯನ್ನು ಏಪ್ರಿಲ್ ಅಂದಾಜು ಶೇಕಡ 3.6ರಿಂದ ಶೇಕಡ 2.9ಕ್ಕೆ ಕಡಿತಗೊಳಿಸಿದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ 2020 ರಲ್ಲಿ ಶೇಕಡ 3.1ಕ್ಕೆ ಇಳಿದಿದ್ದ ಜಾಗತಿಕ ಉತ್ಪಾದನಾ ದರವು ಬಳಿಕ 2021 ರಲ್ಲಿ ಶೇಕಡ 6.1ಕ್ಕೆ ಏರಿತ್ತು.

ಜಾಗತಿಕ ಬೆಳವಣಿಗೆ ದರ ತಗ್ಗಿಸಿ ಹಿಂಜರಿತದ ಎಚ್ಚರಿಕೆ ನೀಡಿದ ಐಎಂಎಫ್

"ಏಪ್ರಿಲ್‌ನಿಂದ ಬೆಳವಣಿಗೆಯು ಕತ್ತಲೆಯಲ್ಲಿ ಆವರಿಸಿದೆ. ಕಳೆದ ಎರಡು ವರ್ಷಗಳ ನಂತರ ಜಗತ್ತು ಶೀಘ್ರದಲ್ಲೇ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ತುತ್ತಾಗುವ ಸಾಧ್ಯತೆ ಇದೆ," ಎಂದು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾದ ಪಿಯರೆ-ಒಲಿವಿಯರ್ ಗೌರಿಂಚಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತಕ್ಕೆ 9.5 ಪ್ರತಿಶತ ಜಿಡಿಪಿ ಬೆಳವಣಿಗೆಯನ್ನು ಯೋಜಿಸಿದ್ದ ವಾಷಿಂಗ್ಟನ್ ಮೂಲದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು ಮುಂದಿನ ಹಣಕಾಸು ವರ್ಷ 2023 (ಏಪ್ರಿಲ್ 2022 ರಿಂದ ಮಾರ್ಚ್ 2023) ಕ್ಕೆ ಈ ಹಿಂದೆ ಮುನ್ಸೂಚನೆ ನೀಡಿದೆ. ಮುಂದಿನ ಹಣಕಾಸು ವರ್ಷ 2023ರಲ್ಲಿ ಶೇಕಡ 7.1ರಲ್ಲಿ ಇರಲಿದೆ ಎಂದು ಸೂಚನೆ ನೀಡಿದೆ.

ಉಕ್ರೇನ್ ರಷ್ಯಾ ಯುದ್ಧವನ್ನು ಉಲ್ಲೇಖಿಸಿದ್ದ ಎಎಂಎಫ್

ಇತ್ತೀಚಿನ ತನ್ನ ಮುನ್ಸೂಚನೆಯಲ್ಲಿ ಐಎಂಎಫ್ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಪರಿಣಾಮವನ್ನು ಉಲ್ಲೇಖ ಮಾಡಿತ್ತು. ಶಕ್ತಿ ಮತ್ತು ಆಹಾರದ ಬೆಲೆಗಳು ಹೆಚ್ಚಾಗುತ್ತವೆ. ಹಣದುಬ್ಬರ ಉಂಟಾಗುತ್ತದೆ. ಇದರಿಂದಾಗಿ ವಿತ್ತೀಯ ನೀತಿ ಬಿಗಿಯಾಗುತ್ತದೆ ಎಂದು ಐಎಂಎಫ್ ಹೇಳಿತ್ತು. ಜಾಗತಿಕ ಬೆಳವಣಿಗೆಯು 1970 ರಿಂದ ಕೇವಲ ಐದು ಬಾರಿ ಶೇಕಡ 2ಕ್ಕಿಂತ ಕಡಿಮೆಯಾಗಿದೆ. ಕೋವಿಡ್ ಸಂದರ್ಭದಲ್ಲಿಯೂ ಜಾಗತಿಕ ಬೆಳವಣಿಗೆ ಕುಸಿದಿದೆ.

English summary

IMF Cuts Global Growth Forecasts and Warns High Inflation Threatens Recession

International Monetary Fund Cuts Global Growth Forecasts and Warns High Inflation Threatens Recession.
Story first published: Tuesday, July 26, 2022, 20:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X