For Quick Alerts
ALLOW NOTIFICATIONS  
For Daily Alerts

Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ

|

ದೇಶದಲ್ಲಿ ಇಂದು ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. 2023-2024ನೇ ಹಣಕಾಸು ವರ್ಷದ ಬಜೆಟ್ ಅನ್ನು ನಾಳೆ ಅಂದರೆ ಫೆಬ್ರವರಿ 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ. ಈ ನಡುವೆ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ಜಾಗತಿಕವಾಗಿ ಬೆಳವಣಿಗೆ ದರವನ್ನು ಬಿಡುಗಡೆ ಮಾಡಿದೆ.

ಮಾರ್ಚ್‌ 31ಕ್ಕೆ ಅಂತ್ಯವಾಗುವ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇಕಡ 6.8 ಆಗಿದ್ದು, ಯಾವುದೇ ಬದಲಾವಣೆಯನ್ನು ಐಎಂಎಫ್ ಮಾಡಿಲ್ಲ. ಆದರೆ ಮುಂದಿನ 2023-24ನೇ ಹಣಕಾಸು ವರ್ಷದಲ್ಲಿ ದರವು ಶೇಕಡ ಶೇ 6.1ಕ್ಕೆ ಇಳಿಯಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ.

ಜಾಗತಿಕ ಬೆಳವಣಿಗೆ ದರ ತಗ್ಗಿಸಿ ಹಿಂಜರಿತದ ಎಚ್ಚರಿಕೆ ನೀಡಿದ ಐಎಂಎಫ್ಜಾಗತಿಕ ಬೆಳವಣಿಗೆ ದರ ತಗ್ಗಿಸಿ ಹಿಂಜರಿತದ ಎಚ್ಚರಿಕೆ ನೀಡಿದ ಐಎಂಎಫ್

ಹಾಗೆಯೇ ಈ ಹಣಕಾಸು ವರ್ಷದಲ್ಲಿ (2022-23) ವಿಶ್ವ ಆರ್ಥಿಕ ಪ್ರಗತಿ ದರವು ಶೇ 2.9ಕ್ಕೆ ಕುಸಿಯಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ. ಈ ಮೊದಲು ಪ್ರಸಕ್ತ ಹಣಕಾಸು ವರ್ಷದ ಪ್ರಗತಿ ದರವು ಶೇ 3.4 ಇರಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ ಅಂದಾಜು ಮಾಡಿತ್ತು. 2023-24ರಲ್ಲಿ ಜಾಗತಿಕ ಬೆಳವಣಿಗೆ ದರವು ಶೇ 3.1ಕ್ಕೆ ಏರುವ ನಿರೀಕ್ಷೆಯಿದೆ.

ಭಾರತದ ಬೆಳವಣಿಗೆಯ ಭರವಸೆ ಹೆಚ್ಚಿಸಿದ ಐಎಂಎಫ್

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಐಎಂಎಫ್‌ನ ಸಂಶೋಧನಾ ವಿಭಾಗದ ಮುಖ್ಯ ಆರ್ಥಶಾಸ್ತ್ರಜ್ಞ ಪಿರೆ-ಆಲಿವೀರ್ ಗೌರಿಂಚಸ್, "ಭಾರತದಲ್ಲಿ ನಾವು ಪ್ರಗತಿ ವಿಚಾರದಲ್ಲಿ ಮಾಡಿದ ಅಂದಾಜಿನಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಪ್ರಸಕ್ತ ಹಣಕಾಸು ವರ್ಷಕ್ಕೆ ಪ್ರಗತಿ ದರವನ್ನು ಶೇ 6.8ರಲ್ಲಿಯೇ ಇರಲಿದೆ. ಆದರೆ ಮಾರ್ಚ್ ಬಳಿಕ ಕೊಂಚ ಬದಲಾವಣೆಯಾಗಬಹುದು," ಎಂದು ಹೇಳಿದ್ದಾರೆ.

ಜಾಗತಿಕ ಬೆಳವಣಿಗೆ ದರ ತಗ್ಗಿಸಿ ಹಿಂಜರಿತದ ಎಚ್ಚರಿಕೆ ನೀಡಿದ ಐಎಂಎಫ್ಜಾಗತಿಕ ಬೆಳವಣಿಗೆ ದರ ತಗ್ಗಿಸಿ ಹಿಂಜರಿತದ ಎಚ್ಚರಿಕೆ ನೀಡಿದ ಐಎಂಎಫ್

2023ರಲ್ಲಿ ಜಗತ್ತಿನ ಮೂರನೇ ಒಂದು ಭಾಗದಲ್ಲಿ ಆರ್ಥಿಕ ಹಿಂಜರಿತ

ವಿಶ್ವದ ಮೂರನೇ ಒಂದು ಭಾಗದಲ್ಲಿ 2023ರಲ್ಲಿ ಆರ್ಥಿಕ ಹಿಂಜರಿತ ಉಂಟಾಗಲಿದೆ. ಈ ವರ್ಷದ ಈ ಹಿಂದಿನ ವರ್ಷಕ್ಕಿಂತ ತೀರಾ ಕಷ್ಟಕರವಾದ ವರ್ಷವಾಗಲಿದೆ. ಯುಎಸ್, ಚೀನಾ ಹಾಗೂ ಇಯುವಿನಲ್ಲಿ ಅತೀ ಕೆಟ್ಟ ಸ್ಥಿತಿ ಉಂಟಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಈ ಹಿಂದೆ ಹೇಳಿದ್ದಾರೆ.

ಆರ್ಥಿಕ ಹಿಂಜರಿತವು ಭಾರೀ ಆರ್ಥಿಕ ದುಸ್ಥಿತಿಗೆ ದೂಡಲಿದೆ. ಅಮೆರಿಕಾ, ಐರೋಪ್ಯ ಒಕ್ಕೂಟ, ಚೀನಾದಲ್ಲಿ ಆರ್ಥಿಕತೆಯು ಮಂದಗತಿಯಲ್ಲಿ ಸಾಗಲಿದೆ. 2023 ಅತೀ ಕಠಿಣವಾದ ವರ್ಷವಾಗಲಿದೆ. ಆರ್ಥಿಕ ಹಿಂಜರಿತ ಯಾವ ದೇಶದಲ್ಲಿ ಉಂಟಾಗುವುದಿಲ್ಲವೋ ಆ ದೇಶದಲ್ಲಿಯೂ ಬೇರೆ ದೇಶಗಳಲ್ಲಿ ಉಂಟಾದ ಹಿಂಜರಿತದ ಪ್ರಭಾವ ಬೀರಲಿದೆ. ಮುಂದಿನ ಎರಡು ತಿಂಗಳು ಚೀನಾಕ್ಕೆ ಅತೀ ಕಷ್ಟವಾಗಲಿದೆ ಎಂದು ಕೂಡಾ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಮಾಹಿತಿ ನೀಡಿದ್ದಾರೆ.

ಜಾಗತಿಕವಾಗಿ ಬೆಳವಣಿಗೆಯು 2021ರಲ್ಲಿ ಶೇಕಡ 6ರಿಂದ 2022ರಲ್ಲಿ ಶೇಕಡ 3.2ಕ್ಕೆ ಮತ್ತು 2023ರಲ್ಲಿ ಶೇಕಡ 2.7ಕ್ಕೆ ಇಳಿಯಲಿದೆ. ಚೀನಾದಲ್ಲಿ ಶೂನ್ಯ ಕೋವಿಡ್ ನೀತಿ ವಿರುದ್ಧ ಸರ್ಕಾರದ ವಿರುದ್ಧ ಧ್ವನಿ ಕೇಳಿಬಂದ ಬಳಿಕ ಸರ್ಕಾರವು ಈ ನೀತಿಯನ್ನು ರದ್ದು ಮಾಡಿ, ಆರ್ಥಿಕತೆಯನ್ನು ತೆರೆದಿದೆ. ಆದರೆ ಇದು ಮುಂದಿನ ಎರಡು ತಿಂಗಳಲ್ಲಿ ಚೀನಾಕ್ಕೆ ಭಾರೀ ಕಷ್ಟಕರವಾದ ಸ್ಥಿತಿಗೆ ತಂದೊಡ್ಡಲಿದೆ ಎಂದು ಕೂಡಾ ಅಭಿಪ್ರಾಯಿಸಿದ್ದರು.

English summary

IMF predicts Indian economy to grow 6.1% in 2023, global growth to drop to 2.9%; Know details in Kannada

International Monetary Fund: IMF predicts Indian economy to grow 6.1% in 2023, global growth to drop to 2.9%; Know details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X