For Quick Alerts
ALLOW NOTIFICATIONS  
For Daily Alerts

ಕೇಂದ್ರದ ನೇರ ತೆರಿಗೆ ಸಂಗ್ರಹಣೆಯಲ್ಲಿ ಶೇ 8 ರಷ್ಟು ಹೆಚ್ಚಳ

|

ನವದೆಹಲಿ, ಜೂನ್ 8: ಕೇಂದ್ರದ ನೇರ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ ಕಂಡು ಬಂದಿದೆ. 2019-20 ನೇ ಸಾಲಿನ ಕೇಂದ್ರದ ಒಟ್ಟು ನೇರ ತೆರಿಗೆ ಸಂಗ್ರಹದಲ್ಲಿ ಶೇ 8 ರಷ್ಟು ಬೆಳವಣಿಗೆಯಾಗಿದೆ. ಆದರೆ, ಒಟ್ಟಾರೆ ಕಳೆದ ವರ್ಷಕ್ಕೆ ಹೋಲಿಸಿದರೆ ನೇರ ತೆರಿಗೆ ಸಂಗ್ರಹಣೆಯಲ್ಲಿ ಕುಸಿತಗೊಂಡಿದ್ದು ಅದರ ಪ್ರಮಾಣ ಶೇ 5 ರಷ್ಟಿದೆ ಎಂದು The Central Board of Direct Taxes (CBDT) ತಿಳಿಸಿದೆ.

ಕಾರ್ಪೊರೇಟ್ ತೆರಿಗೆ ಸುಧಾರಣೆಗಳಿಂದ 1,45,000 ಕೋಟಿ ರುಪಾಯಿ ಮತ್ತು ವೈಯಕ್ತಿಕ ಆದಾಯ ತೆರಿಗೆ ರಿಯಾಯಿತಿಗಳಿಂದಾಗಿ 23,200 ಕೋಟಿ ರುಪಾಯಿ ತೆರಿಗೆ ಸಂಗ್ರಹಣೆಯಾಗಿದೆ ಎಂದು CBDT ತಿಳಿಸಿದೆ.

ಆದಾಯ ತೆರಿಗೆ ಇಲಾಖೆ ಹೊಸ ಐಟಿಆರ್ ಫಾರ್ಮ್‌: ಪೂರ್ಣ ವಿವರ ಇಲ್ಲಿದೆಆದಾಯ ತೆರಿಗೆ ಇಲಾಖೆ ಹೊಸ ಐಟಿಆರ್ ಫಾರ್ಮ್‌: ಪೂರ್ಣ ವಿವರ ಇಲ್ಲಿದೆ

ಕಳೆದ ವರ್ಷ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೂಡಿಕೆ ಬೆಳವಣಿಗೆಯನ್ನು ಉತ್ತೇಜಿಸಲು ಕಾರ್ಪೊರೇಟ್ ತೆರಿಗೆಯನ್ನು ಗಣನೀಯವಾಗಿ ಕಡಿತಗೊಳಿಸಿದ್ದರು. ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ವ್ಯಕ್ತಿಗಳಿಗೆ ತೆರಿಗೆ ಪರಿಹಾರವನ್ನು ನೀಡಿದ್ದರು.

ಕೇಂದ್ರದ ನೇರ ತೆರಿಗೆ ಸಂಗ್ರಹಣೆಯಲ್ಲಿ ಶೇ 8 ರಷ್ಟು ಹೆಚ್ಚಳ

ಹೂಡಿಕೆಗಳನ್ನು ಹೆಚ್ಚಿಸುವ ಸಲುವಾಗಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸರ್ಕಾರವು ಕಾರ್ಪೊರೇಟ್ ತೆರಿಗೆ ದರವನ್ನು ತೀವ್ರವಾಗಿ ಕಡಿಮೆ ಮಾಡುವ ಮೂಲಕ ಕಾರ್ಪೊರೇಟ್ ವಲಯಕ್ಕೆ 1.45 ಲಕ್ಷ ಕೋಟಿ ಕೊಡುಗೆಯನ್ನು ನೀಡಿತು ಎಂದು CBDT ತಿಳಿಸಿದೆ.

English summary

In 2019-20 Financial Year: Center Direct Tax Collection Growth

In 2019-20 Financial Year: Center Gross Direct Tax Collection Growth 8 per cent, says The Central Board of Direct Taxes (CBDT).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X