For Quick Alerts
ALLOW NOTIFICATIONS  
For Daily Alerts

ಚೀನಾದಂತೆ ಟಿಕ್‌ಟಾಕ್‌ನ್ನು ಭಾರತದಲ್ಲಿ ರೂಪಿಸಬಹುದು. ಆದರೆ,...

|

ಸದ್ಯ ಎಲ್ಲಿ ಕೇಳಿದರೂ ಟಿಕ್‌ಟಾಕ್‌ನದ್ದೆ ಮಾತು. ಭಾರತದಲ್ಲಿ ತ್ವರಿತವಾಗಿ ಬೆಳೆಯುತ್ತಿದ್ದ ಟಿಕ್‌ಟಾಕ್‌ಗೆ ಸರಿಸಾಟಿ ಯಾರೂ ಇರಲಿಲ್ಲ.

ಇಂತಹ ಸಮಯದಲ್ಲೇ ಭಾರತ ಸರ್ಕಾರ ಟಿಕ್‌ಟಾಕ್‌ ಗೆ ಮರ್ಮಾಘಾತ ನೀಡಿತು. ಟಿಕ್‌ಟಾಕ್‌ ಸೇರಿದಂತೆ ಚೀನಾದ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧ ಮಾಡಿತು. ಈಗ ಎಲ್ಲೆಡೆ ಭಾರತದಲ್ಲಿ ಟಿಕ್‌ಟಾಕ್‌ನಂತಹ ಒಂದು ಮೊಬೈಲ್ ಅಪ್ಲಿಕೇಶನ್ ಬೇಕು ಎಂಬ ಬಲವಾದ ಕೂಗಿ ಕೇಳಿ ಬರುತ್ತಿವೆ.

ಟಿಕ್ ಟಾಕ್ ಗೆ ಸಡ್ಡು ಹೊಡೆಯುತ್ತಿರುವ 'ಚಿಂಗಾರಿ' ರೂಪಿಸಿದ್ದು ಈ ಯುವಕಟಿಕ್ ಟಾಕ್ ಗೆ ಸಡ್ಡು ಹೊಡೆಯುತ್ತಿರುವ 'ಚಿಂಗಾರಿ' ರೂಪಿಸಿದ್ದು ಈ ಯುವಕ

ಈ ನಿಟ್ಟಿನಲ್ಲಿ ಟಿಕ್‌ಟಾಕ್ ಬಗ್ಗೆ ಇನ್ಫೋಸಿಸ್ ಕಂಪನಿ ಸಹ ಸ್ಥಾಪಕ ನಂದನ್ ನಿಲೇಕಣಿ ಅವರು ಟಿಕ್ ಟಾಕ್‌ನಂತಹ ಮೊಬೈಲ್ ಅಪ್ಲಿಕೇಶನ್‌ ಒಂದು ಭಾರತಕ್ಕೆ ಬೇಕು, ಆದರೆ, ಅವರ ಹಾಗೇ ನಾವು ಅದನ್ನು ಯಶಸ್ಸುಗೊಳಿಸುತ್ತೇವೋ ಗೊತ್ತಿಲ್ಲ ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವ್ಯವಹಾರ ಮಾದರಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು.

ವ್ಯವಹಾರ ಮಾದರಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು.

ಭಾರತದೊಳಗೆ ಟಿಕ್ ಟಾಕ್ ನಂತಹ ಅಪ್ಲಿಕೇಶನ್‌ಗಳನ್ನು ನಿರ್ಮಿಸುವುದು ಖಂಡಿತವಾಗಿಯೂ ಸಾಧ್ಯ. ಆದರೆ, ದೊಡ್ಡ ಸಮಸ್ಯೆ ಎನೆಂದರೆ ಅಪ್ಲಿಕೇಶನ್‌ಗಳ ನಿರ್ಮಾಣವಲ್ಲ, ಅದರ ವ್ಯವಹಾರ ಮಾದರಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು. ಭಾರತವು ಇನ್ನೂ ದೊಡ್ಡ ಡಿಜಿಟಲ್ ಜಾಹೀರಾತು ಮಾರುಕಟ್ಟೆಯಾಗಿಲ್ಲ ಮತ್ತು ಟಿಕ್‌ಟಾಕ್‌ನಂತಹ ಅಪ್ಲಿಕೇಶನ್‌ಗಳು ಜಾಹೀರಾತಿನಿಂದ ಉತ್ತೇಜಿಸಲ್ಪಟ್ಟಿವೆ ಎಂದು ನಿಲೇಕಣಿ ಹೇಳುತ್ತಾರೆ

ಮುಖ್ಯ ಆದಾಯವು ಜಾಹೀರಾತುಗಳಿಂದ ಬಂದಿದೆ

ಮುಖ್ಯ ಆದಾಯವು ಜಾಹೀರಾತುಗಳಿಂದ ಬಂದಿದೆ

ನಾವು ಖಂಡಿತವಾಗಿಯೂ ನಮ್ಮದೇ ಟಿಕ್ ಟಾಕ್ ನಂತಹ ಇತರ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿರ್ಮಿಸಬಹುದು. ಆದರೆ ಇಲ್ಲಿ ಸವಾಲು ಸ್ವಲ್ಪ ಹೆಚ್ಚು ಕಷ್ಟ. ಈ ಅಪ್ಲಿಕೇಶನ್‌ಗಳ ವ್ಯವಹಾರ ಮಾದರಿಗಳನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಫೇಸ್‌ಬುಕ್ ಮತ್ತು ಗೂಗಲ್‌ನಂತೆ ಟಿಕ್‌ಟಾಕ್‌ನ ಮುಖ್ಯ ಆದಾಯವು ಜಾಹೀರಾತುಗಳಿಂದ ಬಂದಿದೆ. ಕಳೆದ ವರ್ಷ ಜಾಗತಿಕವಾಗಿ, ಟಿಕ್‌ಟಾಕ್ 3 ಬಿಲಿಯನ್ ಡಾಲರ್ ಲಾಭದೊಂದಿಗೆ 17 ಬಿಲಿಯನ್ ಆದಾಯವನ್ನು ಹೊಂದಿದೆ ಎಂದು ನಿಲೇಕಣಿ ಹೇಳಿದ್ದಾರೆ.

ಡಿಜಿಟಲ್ ಜಾಹೀರಾತು ಮಾರುಕಟ್ಟೆಯಾಗಿಲ್ಲ

ಡಿಜಿಟಲ್ ಜಾಹೀರಾತು ಮಾರುಕಟ್ಟೆಯಾಗಿಲ್ಲ

ನಮ್ಮ ಸಮಸ್ಯೆ ಏನೆಂದರೆ, ಭಾರತ ಇನ್ನೂ ಚೀನಾ ಮತ್ತು ಅಮೆರಿಕ ನಂತಹ ದೊಡ್ಡ ಡಿಜಿಟಲ್ ಜಾಹೀರಾತು ಮಾರುಕಟ್ಟೆಯಾಗಿಲ್ಲ. ಭಾರತವು ತುಂಬಾ ದೊಡ್ಡ ಜಾಹೀರಾತು ಮಾರುಕಟ್ಟೆಯಲ್ಲ. ಟಿವಿ, ಮುದ್ರಣ ಮತ್ತು ಡಿಜಿಟಲ್‌ನಾದ್ಯಂತ ಭಾರತದಲ್ಲಿ ಒಟ್ಟು ಜಾಹೀರಾತು ಖರ್ಚು ಸುಮಾರು 10 ರಿಂದ 12 ಬಿಲಿಯನ್. ಇದು ಡಿಜಿಟಲ್ ಜಾಗದಲ್ಲಿ ಸುಮಾರು 2 ರಿಂದ 3 ಬಿಲಿಯನ್ ಡಾಲರ್ ಆಗಿದೆ ಎನ್ನುತ್ತಾರೆ ನಿಲೇಕಣಿ.

ಕಾರ್ಯತಂತ್ರದ ಕಾರಣಗಳಿಗಾಗಿ ಬೆಳೆಯುತ್ತವೆ

ಕಾರ್ಯತಂತ್ರದ ಕಾರಣಗಳಿಗಾಗಿ ಬೆಳೆಯುತ್ತವೆ

ಟಿಕ್‌ಟಾಕ್‌ನಂತಹ ಅಪ್ಲಿಕೇಶನ್‌ಗಳು ಕಾರ್ಯತಂತ್ರದ ಕಾರಣಗಳಿಗಾಗಿ ಬೆಳೆಯುತ್ತವೆ. ವಾಟ್ಸಾಪ್ ಭಾರತದಲ್ಲಿ 400 ಮಿಲಿಯನ್ ಬಳಕೆದಾರರನ್ನು ಹೊಂದಿರಬಹುದು. ಆದರೆ, ಅವರು ಅದರಿಂದ ಹೆಚ್ಚಿನ ಹಣವನ್ನು ಗಳಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಟಿಕ್‌ಟಾಕ್ ಬಗ್ಗೆ ಮಾತನಾಡಿದ್ದಾರೆ ನಿಲೇಕಣಿ ಅವರು.

English summary

India Can Make Tiktok-Like Apps, Building Business Model More Difficult: Nandan Nilekani

Marketing Strategies Are Main Reasons For TikTok Success Says Nandan Nilekani
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X