ಬೆಲೆ ನಿಯಂತ್ರಣಕ್ಕೆ ಟರ್ಕಿಯಿಂದ 11,000 ಟನ್‌ ಈರುಳ್ಳಿ ಆಮದಿಗೆ ಕ್ರಮ

ದೇಶದಲ್ಲಿ ದಿನೇ ದಿನೇ ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ನಾನಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ದೇಶದಲ್ಲಿ ಈರುಳ್ಳಿ ಪೂರೈಕೆಯನ್ನು ಹೆಚ್ಚಿಸಲು ಟರ್ಕಿಯಿಂದ 11,000 ಟನ್‌ ಈರುಳ್ಳಿ ಆಮದಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ದೇಶದ ಕೆಲವು ನಗರಗಳಲ್ಲಿ ಈಗಾಗಲೇ ಈರುಳ್ಳಿ ಬೆಲೆ ನೂರರ ಗಡಿ ದಾಟಿದೆ. ಪೂರೈಕೆಯಲ್ಲಿ ಆಗಿರುವ ವ್ಯತ್ಯಯವನ್ನು ತಗ್ಗಿಸಲು ಟರ್ಕಿಯಿಂದ 11,000 ಟನ್‌ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರಿ ಸ್ವಾಮ್ಯದ ಎಂಎಂಟಿಸಿಗೆ ಆದೇಶಿಸಿದೆ. ಡಿಸೆಂಬರ್ ಕೊನೆಯಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಟರ್ಕಿ ಈರುಳ್ಳಿ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

ಬೆಲೆ ನಿಯಂತ್ರಣಕ್ಕೆ ಟರ್ಕಿಯಿಂದ 11,000 ಟನ್‌ ಈರುಳ್ಳಿ ಆಮದಿಗೆ ಕ್ರಮ

ಎಂಎಂಟಿಸಿ ಈ ಹಿಂದೆ ಈಜಿಪ್ಟ್‌ನಿಂದ 6,900 ಟನ್‌ ಈರುಳ್ಳಿ ಆಮದು ಒಪ್ಪಂದಕ್ಕೆ ಸಹಿ ಹಾಕಿದೆ. ಮುಂದಿನ 10 ದಿನಗಳಲ್ಲಿ ಈರುಳ್ಳಿ ಭಾರತದ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಈರುಳ್ಳಿ ಬೆಲೆ ಮೇಲೆ ನಿಗಾ ಇಡಲು ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ತಂಡವೊಂದನ್ನು ರಚಿಸಲಾಗಿದೆ. ಈ ತಂಡದಲ್ಲಿ ಹಣಕಾಸು, ಗ್ರಾಹಕ ವ್ಯವಹಾರ, ಕೃಷಿ ಮತ್ತು ಸಾರಿಗೆ ಸಚಿವರು ಸದಸ್ಯರಾಗಿದ್ದಾರೆ.

ಈರುಳ್ಳಿ ರಫ್ತು ಮೇಲೆ ಈಗಾಗಲೇ ನಿಷೇಧಿಸಿದ್ದ ಕೇಂದ್ರ ಸಂಪುಟ, ನವೆಂಬರ್ 20ರಂದು 1.2 ಲಕ್ಷ ಈರುಳ್ಳಿ ಆಮದು ಮಾಡಲು ಅನುಮೋದನೆ ನೀಡಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+