For Quick Alerts
ALLOW NOTIFICATIONS  
For Daily Alerts

'ಕೇಂದ್ರದ ತೆರಿಗೆ ಸಂಗ್ರಹ ಗುರಿಗಿಂತ 2.5 ಲಕ್ಷ ಕೋಟಿ ಕಡಿಮೆ ಆಗಬಹುದು'

|

ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಗುರಿಯಲ್ಲಿ 2.5 ಲಕ್ಷ ಕೋಟಿ ಅಥವಾ 2019-20ನೇ ಸಾಲಿನ GDPಯ 1.2 ಪರ್ಸೆಂಟ್ ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಮಾಜಿ ಆರ್ಥಿಕ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಭಾನುವಾರ ಅಭಿಪ್ರಾಯ ಪಟ್ಟಿದ್ದಾರೆ.

"ತೆರಿಗೆ ಆದಾಯದಲ್ಲಿ 2.5 ಲಕ್ಷ ಕೋಟಿ (GDPಯ 1.2 ಪರ್ಸೆಂಟ್) ಕೊರತೆ ಬೀಳುವಂತಿದೆ. ಇದು ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ ಟ್ಯಾಕ್ಸ್ (DDT) ರದ್ದು ಮಾಡುವ ಮತ್ತು ವೈಯಕ್ತಿಕ ಆದಾಯ ತೆರಿಗೆಯಲ್ಲಿ ಸುಧಾರಣೆ ತರುವ ಸಮಯ ಇದು" ಎಂದು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಆರ್ಥಿಕ ಸಚಿವಾಲಯದಿಂದ #ArthShastri ಅಭಿಯಾನ; ಏನಿದರ ವಿಶೇಷ?

 

ಒಟ್ಟಾರೆ ತೆರಿಗೆ ಆದಾಯ 24.59 ಲಕ್ಷ ಕೋಟಿ ರುಪಾಯಿ ಬರುತ್ತದೆ ಎಂದು ಸರ್ಕಾರ ಅಂದಾಜು ಮಾಡಿತ್ತು. ಅದರಲ್ಲಿ ರಾಜ್ಯಗಳ ಪಾಲು 8.09 ಲಕ್ಷ ಕೋಟಿ ಪಕ್ಕಕ್ಕಿಟ್ಟರೆ, ಕೇಂದ್ರ ಸರ್ಕಾರದ ನಿವ್ವಳ ತೆರಿಗೆ ಆದಾಯ 16.50 ಲಕ್ಷ ಕೋಟಿಯನ್ನು ಇರಿಸಿಕೊಂಡಿತ್ತು. ಈ ಮೊತ್ತವು 2018-19ನೇ ಸಾಲಿನಲ್ಲಿ ಸಂಗ್ರಹವಾಗಿದ್ದ ವಾಸ್ತವ ಆದಾಯ 13.37 ಲಕ್ಷಕ್ಕಿಂತ ಹೆಚ್ಚಿನ ಮೊತ್ತ. ಈ ಬಾರಿ ಗುರಿ ಇರಿಸಿಕೊಂಡಿದ್ದು ಆಗಿನದಕ್ಕಿಂತ 23.4 ಪರ್ಸೆಂಟ್ ಹೆಚ್ಚು. ಈ ಬಾರಿ ಇರಿಸಿಕೊಂಡಿದ್ದು ದೊಡ್ಡ ಮಟ್ಟದ ಗುರಿಯೇ ಎಂದು ಅವರು ಹೇಳಿದ್ದಾರೆ.

'ಕೇಂದ್ರ ತೆರಿಗೆ ಸಂಗ್ರಹ ಗುರಿಗಿಂತ  2.5 ಲಕ್ಷ ಕೋಟಿ ಕಡಿಮೆ ಆಗಬಹುದು'

2019-20ನೇ ಸಾಲಿನಲ್ಲಿ ಕಾರ್ಪೊರೇಟ್ ತೆರಿಗೆ, ಅಬಕಾರಿ ಸುಂಕ ನಕಾರಾತ್ಮಕ ಪ್ರಗತಿ ದಾಖಲಿಸಿದೆ. ಕಾರ್ಪೊರೇಟ್ ತೆರಿಗೆ 8 ಪರ್ಸೆಂಟ್, ಅಬಕಾರಿ ಸುಂಕ 5 ಪರ್ಸೆಂಟ್ ನಕಾರಾತ್ಮಕ ಪ್ರಗತಿ ಆಗಿದೆ. ಇನ್ನು ಸೀಮಾ ಸುಂಕದಲ್ಲಿ (ಕಸ್ಟಮ್ಸ್ ಡ್ಯೂಟಿ) 10 ಪರ್ಸೆಂಟ್ ನಕಾರಾತ್ಮಕ ಪ್ರಗತಿಯಾಗಿದೆ.

ಒಟ್ಟಾರೆಯಾಗಿ ನೋಡಿದಾಗ, ಕೇಂದ್ರದ ತೆರಿಗೆ ಸಂಗ್ರಹದಲ್ಲಿ 3.5 ಲಕ್ಷ ಕೋಟಿಯಿಂದ 3.75 ಲಕ್ಷ ಕೋಟಿ ರುಪಾಯಿ ಕಡಿಮೆ ತೆರಿಗೆ ಸಂಗ್ರಹ ಆಗುವಂತಿದೆ. ಆದ್ದರಿಂದಲೇ ವಿತ್ತೀಯ ಕೊರತೆ ಅಂದಾಜನ್ನು 3.3 ಪರ್ಸೆಂಟ್ ಅನ್ನು ಪರಿಷ್ಕರಿಸಿ, 0.5 ಪರ್ಸೆಂಟ್ ನಿಂದ 0.7 ಪರ್ಸೆಂಟ್ ಹೆಚ್ಚು ಮಾಡಬೇಕಾಗಿರುವುದು ಅನಿವಾರ್ಯ ಎಂದಿದ್ದಾರೆ.

ಈಗಿನ ಪರಿಸ್ಥಿತಿಯಲ್ಲೂ ತೆರಿಗೆ ಸುಧಾರಣೆ ಮಾಡಬೇಕಿರುವುದು ಅನಿವಾರ್ಯ ಎಂದು ಗರ್ಗ್ ಅಭಿಪ್ರಾಯ ಪಟ್ಟಿದ್ದಾರೆ.

English summary

'India May Miss Tax Collection Target Nearly 2.5 Lakh Crore'

The union government's tax collection is likely to fall short of its estimate by Rs 2.5 lakh crore in 2019-20, said by former finance secretary Subhash Chandra Garg.
Story first published: Monday, January 20, 2020, 9:00 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more