For Quick Alerts
ALLOW NOTIFICATIONS  
For Daily Alerts

ಭಾರತದ ಗ್ರಾಮೀಣ ಬಡತನ ದರದಲ್ಲಿ 4 ಪರ್ಸೆಂಟ್ ಏರಿಕೆ : NSO

|

ಭಾರತದಲ್ಲಿ 2011-12 ರಿಂದ 2017-18ರ ಅವಧಿಯಲ್ಲಿ ಗ್ರಾಮೀಣ ಬಡತನವು 4 ಪರ್ಸೆಂಟ್‌ ಏರಿಕೆಯಾಗಿದೆ. ನಗರ ಬಡತನವು ಶೇಕಡಾ 5 ಪರ್ಸೆಂಟ್ ಇಳಿದು 9 ಪರ್ಸೆಂಟ್ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ(NSO) ತಿಳಿಸಿದೆ.

ಭಾರತವು 1980ರ ದಶಕದಲ್ಲಿ ಬೆಳವಣಿಗೆಯ ಪಥಕ್ಕೆ ಸ್ಥಳಾಂತರಗೊಂಡ ಬಳಿಕ ಇಲ್ಲಿಯವರೆಗೂ ಬಡತನ ಪ್ರಮಾಣವು ಸ್ಥಿರವಾಗಿ ಕುಸಿದಿದೆ. 2011-12 ರಿಂದ 2017-18ರ ಅವಧಿಯಲ್ಲಿ 4 ಪರ್ಸೆಂಟ್ ಏರಿಕೆಯಾಗಿದ್ದು, ಇದೇ ಅವಧಿಯಲ್ಲಿ ನಗರ ಬಡತನವು 5 ಪರ್ಸೆಂಟ್ ಇಳಿದು 9 ಪರ್ಸೆಂಟ್‌ಗೆ ತಲುಪಿದೆ ಎಂದು NSO ತಿಳಿಸಿದೆ ಎಂದು 'ದಿ ಮಿಂಟ್' ವರದಿ ಮಾಡಿದೆ.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದ ಬಡತನ ದರ

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದ ಬಡತನ ದರ

ಗ್ರಾಮೀಣ ಜನಸಂಖ್ಯೆಯಲ್ಲಿನ ಹೆಚ್ಚಳವನ್ನು ಗಮನಿಸದರೆ, ಅಂದಾಜು ಒಟ್ಟಾರೆ ಬಡತನವು 2017-18ರ ಅವಧಿಯಲ್ಲಿ ಸುಮಾರು 23 ಪರ್ಸೆಂಟ್ ಏರಿಕೆಯಾಗಿದೆ. ಕಳೆದ ಅರ್ಧ ದಶಕದಲ್ಲಿ 30 ದಶಲಕ್ಷ ಜನರು ಭಾರತದ ಅಧಿಕೃತ ಬಡತನ ರೇಖೆಗಿಂತ ಕೆಳಗಿಳಿದು ಬಡವರ ಶ್ರೇಣಿಗೆ ಸೇರಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.

ಬಿಹಾರ, ಜಾರ್ಖಂಡ್‌ನಲ್ಲಿ ಹೆಚ್ಚಿದ ಬಡತನ ದರ

ಬಿಹಾರ, ಜಾರ್ಖಂಡ್‌ನಲ್ಲಿ ಹೆಚ್ಚಿದ ಬಡತನ ದರ

ಕಳೆದ ಕೆಲವು ವರ್ಷಗಳಲ್ಲಿ ಬಿಹಾರ, ಜಾರ್ಖಂಡ್, ಒಡಿಶಾ ರಾಜ್ಯಗಳಲ್ಲಿ ಗ್ರಾಮೀಣ ಬಡತನವು ಅತಿ ಹೆಚ್ಚು ಏರಿಕೆಯಾಗಿದೆ ಎಂದು NSO ಅಂಕಿ-ಅಂಶಗಳು ತಿಳಿಸಿವೆ.

ಬಿಹಾರವು 2011-12 ರಿಂದ 2017-18ರ ಅವಧಿಯಲ್ಲಿ ಬಡತನ ಪ್ರಮಾಣವು 17 ಪರ್ಸೆಂಟ್ ಏರಿಕೆಯಾಗಿ, 50.47 ಪರ್ಸೆಂಟ್‌ಗೆ ಏರಿದೆ. ಜಾರ್ಖಂಡ್ (8.6 ಪರ್ಸೆಂಟ್), ಒಡಿಶಾ (8.1 ಪರ್ಸೆಂಟ್), ಬಡತನದ ದರದಲ್ಲಿ ದೊಡ್ಡ ಏರಿಕೆ ಕಂಡ ಇತರೆ ರಾಜ್ಯಗಳಾಗಿವೆ.

ಬಡತನ ದರವು ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯ (ಶೇಕಡಾವಾರು) ಪಾಲನ್ನು ಸೂಚಿಸುತ್ತದೆ. ಜಾರ್ಖಂಡ್ ಮತ್ತು ಒಡಿಶಾ ಎರಡರಲ್ಲೂ 40 ಪರ್ಸೆಂಟ್ ಗಿಂತಲೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ.

 

ಕರ್ನಾಟಕ, ಮಹಾರಾಷ್ಟ್ರದಲ್ಲೂ ಬಡತನ ದರ ಏರಿಕೆ

ಕರ್ನಾಟಕ, ಮಹಾರಾಷ್ಟ್ರದಲ್ಲೂ ಬಡತನ ದರ ಏರಿಕೆ

ಪಶ್ಚಿಮ ಬಂಗಾಳ, ಗುಜರಾತ್, ತಮಿಳುನಾಡು ರಾಜ್ಯಗಳಲ್ಲಿ ಬಡತನವು ಇಳಿಕೆಯಾದರೆ, ಕರ್ನಾಟಕದಲ್ಲಿ ಇದೇ ಅವಧಿಯಲ್ಲಿ 2.3 ಪರ್ಸೆಂಟ್ ಏರಿಕೆಯಾಗಿದೆ. ಮಹಾರಾಷ್ಟ್ರವು (5 ಪರ್ಸೆಂಟ್), ಛತ್ತೀಸಘಡ (2.1 ಪರ್ಸೆಂಟ್), ರಾಜಸ್ಥಾನ (1.9 ಪರ್ಸೆಂಟ್) ಏರಿಕೆ ದಾಖಲಿಸಿದೆ.

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!

ಪಶ್ಚಿಮ ಬಂಗಾಳ, ಗುಜರಾತ್‌ನಲ್ಲಿ ಬಡತನ ದರ ಇಳಿಕೆ

ಪಶ್ಚಿಮ ಬಂಗಾಳ, ಗುಜರಾತ್‌ನಲ್ಲಿ ಬಡತನ ದರ ಇಳಿಕೆ

2011-12 ರಿಂದ 2017-18ರ ಅವಧಿಯಲ್ಲಿ ಪಶ್ಚಿಮ ಬಂಗಾಳ (6 ಪರ್ಸೆಂಟ್), ಗುಜರಾತ್ ( 5 ಪರ್ಸೆಂಟ್), ತಮಿಳುನಾಡು (5 ಪರ್ಸೆಂಟ್), ರಾಜ್ಯಗಳು ಬಡತನದ ದರದಲ್ಲಿ ಭಾರೀ ಇಳಿಕೆ ಕಂಡಂತಹ ರಾಜ್ಯಗಳಾಗಿವೆ.

English summary

India Rural Poverty Shot Up, NSO Data Shows

NSO report suggest that rural poverty rose nearly 4 percentage points between 2011-12 to 2017-18 to 30 percent even as urban poverty fell 15 percentage points.
Story first published: Tuesday, December 3, 2019, 17:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X