For Quick Alerts
ALLOW NOTIFICATIONS  
For Daily Alerts

ದೇಶದ ಹಣಕಾಸಿನ ಕೊರತೆ 18.21 ಲಕ್ಷ ಕೋಟಿ: ನಿರೀಕ್ಷೆಗಿಂತಲೂ ಕಡಿಮೆ

|

2020-21ರ ಹಣಕಾಸಿನ ಕೊರತೆಯು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 9.3 ರಷ್ಟಿದ್ದು, ಹಣಕಾಸು ಸಚಿವಾಲಯದ ಪರಿಷ್ಕೃತ ಬಜೆಟ್ ಅಂದಾಜು ಶೇಕಡಾ 9.5 ಕ್ಕಿಂತ ಕಡಿಮೆಯಾಗಿದೆ. ಫೆಬ್ರವರಿಯಲ್ಲಿ ನಡೆದ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವಾಲಯವು ಜಿಡಿಪಿಯ ಶೇಕಡಾ 9.5 ರಷ್ಟು ಹಣಕಾಸಿನ ಕೊರತೆಯನ್ನು ಯೋಜಿಸಿತ್ತು.

 

4 ದಶಕಗಳಲ್ಲೇ ಭಾರೀ ಕುಸಿತ ಕಂಡ ಭಾರತದ ಜಿಡಿಪಿ ದರ!4 ದಶಕಗಳಲ್ಲೇ ಭಾರೀ ಕುಸಿತ ಕಂಡ ಭಾರತದ ಜಿಡಿಪಿ ದರ!

ಸಿಜಿಎ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಆದಾಯ ಮತ್ತು ಖರ್ಚು ವರದಿಯಲ್ಲಿ ಹಣಕಾಸಿನ ಕೊರತೆಯು ಮುನ್ಸೂಚನೆಗಿಂತ ಕಡಿಮೆಯಾಗಿದೆ ಎಂದು ಸಿಜಿಎ (ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್) ಹೇಳಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಹಣಕಾಸಿನ ಕೊರತೆ ಶೇಕಡಾ 7.42 ರಷ್ಟಿತ್ತು.

 
ದೇಶದ ಹಣಕಾಸಿನ ಕೊರತೆ 18.21 ಲಕ್ಷ ಕೋಟಿ: ನಿರೀಕ್ಷೆಗಿಂತಲೂ ಕಡಿಮೆ

ಇನ್ನು ಹಣಕಾಸಿನ ಕೊರತೆ ಕುರಿತು ಸಂಪೂರ್ಣವಾಗಿ ಹೇಳುವುದಾದರೆ, ಜಿಡಿಪಿಯ ಶೇಕಡಾ 9.3ರಷ್ಟು ಅಥವಾ ಹಣಕಾಸಿನ ಕೊರತೆಯು 18,21,461 ಕೋಟಿ ರೂಪಾಯಿನಷ್ಟಿದೆ.

ಇನ್ನು ಈ ಹಣಕಾಸಿನ ಕೊರತೆ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಅನಿರೀಕ್ಷಿತ ಕೋವಿಡ್ ಬಿಕ್ಕಟ್ಟಾಗಿದ್ದು, ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿದೆ. ಕೊರೊನಾ ಲಾಕ್‌ಡೌನ್ ವಿಸ್ತರಣೆ ಮತ್ತು ಇತರ ಕಠಿಣ ನಿರ್ಬಂಧಗಳನ್ನು ಅಳವಡಿಸಿಕೊಂಡ ನಂತರ ಸರ್ಕಾರದ ತೆರಿಗೆ ಆದಾಯವನ್ನು ಕಡಿಮೆ ಮಾಡಿದೆ ಮತ್ತು ವೆಚ್ಚಗಳನ್ನು ಹೆಚ್ಚಿಸಿದೆ.

ಕೋವಿಡ್ ಸಾಂಕ್ರಾಮಿಕಕ್ಕೆ ಮುಂಚಿತವಾಗಿ, ಸರ್ಕಾರವು ಹಣಕಾಸಿನ ಕೊರತೆಯನ್ನು ಜಿಡಿಪಿಯ ಶೇಕಡಾ 3.5 ರಷ್ಟು ಮಾತ್ರ ಗ್ರಹಿಸಿತ್ತು. ಆದರೆ ಕೊರೊನಾ ಸಾಂಕ್ರಾಮಿಕದ ಪರಿಣಾಮ ಅಂದಾಜಿನ ಪ್ರಮಾಣಕ್ಕೆ ಹಣಕಾಸಿನ ಕೊರತೆ ಹೆಚ್ಚಾಗಿದೆ. ಆದರೆ 2019-20ರಲ್ಲಿ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 4.6 ಕ್ಕೆ ಏರಿತು.

ಭಾರತದ ವಿಷಯದಲ್ಲಿ, ಐಎಂಎಫ್ ಶೇಕಡಾ 12.5 ರಷ್ಟು ಬೆಳವಣಿಗೆಯ ದರವನ್ನು ಅಂದಾಜಿಸಿದೆ. ವಾಷಿಂಗ್ಟನ್ ಮೂಲದ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ, 2022 ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.9 ರಷ್ಟು ಏರಿಕೆಯಾಗಲಿದೆ.

English summary

India's 2020-21 Fiscal Deficit At 9.3 Percent Of GDP For FY21

Fiscal Deficit for 2020-21 was at 9.3 per cent of the gross domestic product (GDP), lower than 9.5 per cent estimated by the Finance Ministry in the revised Budget estimates, according to the CGA data.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X