For Quick Alerts
ALLOW NOTIFICATIONS  
For Daily Alerts

2021ರಲ್ಲಿ ಭಾರತದ ಆರ್ಥಿಕತೆಯು ಶೇ. 7.6ರಷ್ಟು ಚೇತರಿಸಿಕೊಳ್ಳಲಿದೆ: ವಿಶ್ವಸಂಸ್ಥೆ

|

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 9.6 ರಷ್ಟು ಕುಗ್ಗಲಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಅಂದಾಜಿಸಿದೆ. 2021 ರಲ್ಲಿ ಆರ್ಥಿಕತೆಯು ಶೇಕಡಾ 7.3ರಷ್ಟು ಬೆಳವಣಿಗೆಯೊಂದಿಗೆ ಚೇತರಿಸಿಕೊಳ್ಳಲಿದ್ದು, 2022 ರಲ್ಲಿ ಶೇಕಡಾ 5.9 ರಷ್ಟು ನಿಧಾನವಾಗಲಿದೆ ಎಂದು ವರದಿ ಹೇಳಿದೆ.

ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಇತ್ತೀಚಿನ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ನಿರೀಕ್ಷೆಗಳ ಪ್ರಕಾರ, ವಿಶ್ವ ಆರ್ಥಿಕತೆಯು 2020ರಲ್ಲಿ ಶೇಕಡಾ 4.3 ರಷ್ಟು ಕುಗ್ಗಿತು. 2009ರ ಜಾಗತಿಕ ಆರ್ಥಿಕ ಬಿಕ್ಕಟ್ಟಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ. ಆದರೆ 2021ರಲ್ಲಿ ನಿರೀಕ್ಷಿಸಿದ ಪ್ರಮಾಣಕ್ಕಿಂತ ಚೇತರಿಕೆ ಕಂಡು 2020ರ ನಷ್ಟವನ್ನು ಸರಿದೂಗಿಸಬಹುದು ಎಂದು ವರದಿ ತಿಳಿಸಿದೆ.

ಯುಎನ್‌ ವರದಿಯ ಪ್ರಕಾರ, 2020ರ ಮಧ್ಯಭಾಗದಲ್ಲಿ ಭಾರತದಲ್ಲಿ ನಿರುದ್ಯೋಗ ದರಗಳು ಶೀಘ್ರವಾಗಿ ಶೇಕಡಾ 23ಕ್ಕೆ ಏರಿತು. ಪೂರ್ವ ಏಷ್ಯಾವು ಕಡಿಮೆ ಹಂತದಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ, ಬೆಳವಣಿಗೆಯು 2021 ರಲ್ಲಿ ಶೇಕಡಾ 6.4 ಕ್ಕೆ ಏರಿಕೆಯಾಗಲಿದೆ, 2022 ರಲ್ಲಿ ಶೇಕಡಾ 5.2 ಕ್ಕೆ ಇಳಿಕೆಯಾಗಲಿದೆ.

2021ರಲ್ಲಿ ಭಾರತದ ಆರ್ಥಿಕತೆಯು ಶೇ. 7.6ರಷ್ಟು ಚೇತರಿಸಿಕೊಳ್ಳಲಿದೆ!

ಇನ್ನು ಚೀನಾದ ಜಿಡಿಪಿ ಬೆಳವಣಿಗೆ ಕುರಿತು ವರದಿಯಲ್ಲಿ ಉಲ್ಲೇಖಿಸಿದ್ದು, 2020ರಲ್ಲಿ ಶೇಕಡಾ 2.3ರಿಂದ 2021ರಲ್ಲಿ ಶೇಕಡಾ 7.2ಕ್ಕೆ ಏರಿಕೆಯಾಗುವ ನಿರೀಕ್ಷೆಯನ್ನು ಹೊಂದಿದೆ.

ಇತ್ತೀಚೆಗೆ, ಹಣಕಾಸು ವರ್ಷ 2020-21ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 9.6 ರಷ್ಟು ಕುಗ್ಗಬಹುದು ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

English summary

India's Economy Estimated To Recover 7.3 Percent Growth In 2021: UN

A United Nations report has projected that India's economy recover and clock a 7.3 per cent growth in 2021
Story first published: Tuesday, January 26, 2021, 19:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X