For Quick Alerts
ALLOW NOTIFICATIONS  
For Daily Alerts

ಭಾರತದ ರಫ್ತು ಪ್ರಮಾಣ ದಾಖಲೆಯ ಹೆಚ್ಚಳ: ಮಾರ್ಚ್‌ನಲ್ಲಿ ಶೇ. 58ರಷ್ಟು ಏರಿಕೆ

|

ಭಾರತದ ಸರಕು ರಫ್ತು ಪ್ರಮಾಣ ಮಾರ್ಚ್‌ನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ವರ್ಷದಿಂದ ವರ್ಷಕ್ಕೆ 58 ಪ್ರತಿಶತದಷ್ಟು (YOY) ಭಾರಿ ಏರಿಕೆ ಕಂಡಿದೆ.

ಮಾರ್ಚ್‌ 2020ರ ವಹಿವಾಟಿಗೆ ಹೋಲಿಸಿದರೆ 2021ರ ಮಾರ್ಚ್‌ನಲ್ಲಿ ಶೇಕಡಾ 58.23ರಷ್ಟು ಹೆಚ್ಚಾಗಿದೆ. ಈ ಮೂಲಕ 34 ಶತಕೋಟಿ ಡಾಲರ್‌ ಅನ್ನು ತಲುಪಿದೆ. ಇದು ಬೇಡಿಕೆಯ ಚೇತರಿಕೆಗೆ ಸೂಚಿಸುತ್ತದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಪ್ರಾಥಮಿಕ ಮಾಹಿತಿಯು ತೋರಿಸಿದೆ. ಅನುಕ್ರಮವಾಗಿ, ಸರಕು ರಫ್ತಿನ ಬೆಳವಣಿಗೆಯು ಶೇಕಡಾ 21 ರಷ್ಟಿತ್ತು.

ಭಾರತದ ರಫ್ತು ಪ್ರಮಾಣ ದಾಖಲೆಯ ಹೆಚ್ಚಳ: ಶೇ. 58ರಷ್ಟು ಏರಿಕೆ

2020ರ ಮಾರ್ಚ್‌ನಲ್ಲಿ ರಫ್ತು ವಹಿವಾಟು ಮೊತ್ತವು 1.56 ಲಕ್ಷ ಕೋಟಿಗಳಷ್ಟಿತ್ತು. 2020-21ರ ಏಪ್ರಿಲ್‌-ಮಾರ್ಚ್‌ ಅವಧಿಯಲ್ಲಿನ ರಫ್ತು ವಹಿವಾಟು ಶೇಕಡಾ 7.4ರಷ್ಟು ಇಳಿಕೆ ಕಂಡಿದೆ. ಆಮದು ವಹಿವಾಟು ಮಾರ್ಚ್‌ನಲ್ಲಿ ಶೇ. 52.89ರಷ್ಟು ಹೆಚ್ಚಾಗಿ 3.51 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

''ಮಾರ್ಚ್ ತಿಂಗಳ ರಫ್ತು ವಹಿವಾಟಿನ ಬೆಳವಣಿಗೆಯು ಭಾರತದ ಇತಿಹಾಸದಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳಿಂದಾಗಿ ಕೋವಿಡ್ ಸಾಂಕ್ರಾಮಿಕದ ನಡುವೆಯು ಭಾರತದ ಆರ್ಥಿಕತೆಯು ಹೊಸ ಎತ್ತರಕ್ಕೆ ತಲುಪಿದೆ'' ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಇನ್ನು ಪ್ರತಿ ತಿಂಗಳು ಇಂತಹ ಉನ್ನತ ಮಟ್ಟದ ರಫ್ತು ಸುಸ್ಥಿರವಾಗದಿರಬಹುದು ಎಂದು ಎಚ್ಚರಿಸಲಾಗಿದೆ. ಆದರೆ ಪ್ರತಿ ತಿಂಗಳು 30 ಬಿಲಿಯನ್ ರಫ್ತುಗಳನ್ನು ಹೊಂದಿದ್ದರೂ ಸಹ, ನಾವು 350 ಬಿಲಿಯನ್ ಡಾಲರ್‌ಗಳನ್ನು ಸುಲಭವಾಗಿ ತಲುಪಬಹುದು ಎಂದು ಅಂದಾಜಿಸಲಾಗಿದೆ.

English summary

India's Export Hit All Time High Of $34 Billion In March

India’s merchandise exports witnessed a huge jump of 58 per cent year-on-year (YoY) and touched a record $34 billion in March
Story first published: Friday, April 2, 2021, 11:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X