For Quick Alerts
ALLOW NOTIFICATIONS  
For Daily Alerts

ಜೂನ್ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಆಮದು 7.9 ಬಿಲಿಯನ್ ಡಾಲರ್‌ಗೆ ಏರಿಕೆ

|

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಆಮದು ಪ್ರಮಾಣವು ಭರ್ಜರಿಯಾಗಿ ಏರಿಕೆಯಾಗಿದ್ದು, 7.9 ಬಿಲಿಯನ್ ಡಾಲರ್‌ಗೆ (ಅಂದರೆ ಸುಮಾರು 58,572.99 ಕೋಟಿ ರೂ.) ಹೆಚ್ಚಾಗಿದೆ.

ಚಿನ್ನದ ಆಮದು ದೇಶದ ಚಾಲ್ತಿ ಖಾತೆ ಕೊರತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ, ಕೊರೊನಾದಿಂದಾಗಿ ಚಿನ್ನದ ಆಮದು ತುಂಬಾ ಕಡಿಮೆಯಾಗಿತ್ತು. ಪರಿಸ್ಥಿತಿ ಸುಧಾರಿಸುವುದರೊಂದಿಗೆ, ಚಿನ್ನದ ಆಮದು ಅನೇಕ ಪಟ್ಟು ಹೆಚ್ಚಾಗಿದೆ.

ಭಾರತದ ಚಿನ್ನದ ಆಮದು 7.9 ಬಿಲಿಯನ್ ಡಾಲರ್‌ಗೆ ಏರಿಕೆ

ಕಳೆದ ವರ್ಷದ ತ್ರೈಮಾಸಿಕದಲ್ಲಿ ಹಳದಿ ಲೋಹದ ಆಮದು 688 ಮಿಲಿಯನ್ ಡಾಲರ್ (5,208.41 ಕೋಟಿ ರೂ) ಕ್ಕೆ ಇಳಿದಿದೆ ಎಂದು ಅಂಕಿ-ಅಂಶಗಳು ತೋರಿಸಿವೆ. ಚಿನ್ನಕ್ಕಿಂತ ಭಿನ್ನವಾಗಿ, ಬೆಳ್ಳಿ ಆಮದು ಈ ವರ್ಷ ಶೇಕಡಾ 93.7ರಷ್ಟು ಇಳಿದು 394 ದಶಲಕ್ಷ ಡಾಲರ್‌ಗೆ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಚಿನ್ನದ ಆಮದಿನ ಗಮನಾರ್ಹ ಹೆಚ್ಚಳದಿಂದಾಗಿ ದೇಶದ ವ್ಯಾಪಾರ ಕೊರತೆ, ಆಮದು ಮತ್ತು ರಫ್ತು ನಡುವಿನ ಅಂತರವು ಸುಮಾರು 31 ಶತಕೋಟಿ ಡಾಲರ್‌ಗೆ ವಿಸ್ತರಿಸಿದೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶವಾಗಿದ್ದು, ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ಈಡೇರಿಸಿದೆ. ಚಿನ್ನದ ಆಮದು ಪ್ರಮಾಣಕ್ಕೆ ಸಂಬಂಧಿಸಿದಂತೆ, ವಾರ್ಷಿಕವಾಗಿ 800 ರಿಂದ 900 ಟನ್ ಚಿನ್ನವನ್ನು ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ರತ್ನಗಳು ಮತ್ತು ಆಭರಣಗಳ ರಫ್ತು 9.1 ಶತಕೋಟಿಗೆ ಏರಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 2.7 ಬಿಲಿಯನ್ ಡಾಲರ್ ಆಗಿತ್ತು.

English summary

India's Gold Imports Jumps In Apr-Jun $7.9 Billion

India registered a manifold raise in import of gold during the first three months of FY22 on a year-on-year basis, to nearly $7.9 billion.
Story first published: Monday, July 26, 2021, 14:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X