For Quick Alerts
ALLOW NOTIFICATIONS  
For Daily Alerts

ಭಾರತದ ಕೈಗಾರಿಕಾ ಉತ್ಪಾದನೆ ಪ್ರಮಾಣದಲ್ಲಿ ಭಾರೀ ಕುಸಿತ

|

ದೇಶದಲ್ಲಿನ ಮಂದಗತಿಯ ಆರ್ಥಿಕತೆಯಿಂದಾಗಿ ಕೈಗಾರಿಕಾ ಉತ್ಪಾದನೆ ಪ್ರಮಾಣ ಕಳೆದ 8 ವರ್ಷಗಳಲ್ಲಿ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಬಂಡವಾಳ ಸರಕು, ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ವಲಯದಲ್ಲಿ ಕುಸಿತದೊಂದಿಗೆ ದೇಶದ ಕೈಗಾರಿಕಾ ಉತ್ಪಾದನೆ ಪ್ರಮಾಣ ಕಳೆದ 8 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ದಾಖಲಾಗಿದೆ.

ಕರ್ನಾಟಕದಲ್ಲಿ ಕಾಫಿ ಉತ್ಪಾದನೆ ಶೇಕಡಾ 35 ರಷ್ಟು ಕುಸಿತಕರ್ನಾಟಕದಲ್ಲಿ ಕಾಫಿ ಉತ್ಪಾದನೆ ಶೇಕಡಾ 35 ರಷ್ಟು ಕುಸಿತ

ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (IIP) ಬಿಡುಗಡೆ ಮಾಡಿದ ವರದಿ ಪ್ರಕಾರ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಸೆಪ್ಟೆಂಬರ್ ನಲ್ಲಿ 4.3ರಷ್ಟು ಕುಸಿದಿದ್ದು, ಆಗಸ್ಟ್‌ ನಲ್ಲಿ 1.4ರಷ್ಟು ಕುಸಿತ ಕಂಡ ಬಳಿಕ ಸತತ 2ನೇ ತಿಂಗಳು ಕೂಡ ಸೂಚ್ಯಂಕ ಇಳಿಕೆ ಕಂಡಿದೆ.

ಭಾರತದ ಕೈಗಾರಿಕಾ ಉತ್ಪಾದನೆ ಪ್ರಮಾಣದಲ್ಲಿ ಭಾರೀ ಕುಸಿತ

2011 ಅಕ್ಟೋಬರ್‌ನಲ್ಲಿ ಐಐಪಿ ಶೇಕಡಾ 5ರಷ್ಟು ಕುಗ್ಗಿದ ನಂತರ, 8 ವರ್ಷಗಳಲ್ಲಿ ಅತ್ಯಂತ ಕನಿಷ್ಟ ಮಟ್ಟಕ್ಕೆ ಕೊಂಡೊಯ್ದಿದೆ. ಇದು ಕಳೆದ ೮ ವರ್ಷಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದ್ದು, ಯಂತ್ರೋಪಕರಣ, ಗೃಹಪಯೋಗಿ ಸಲಕರಣೆ, ಮೂಲಸೌಕರ್ಯ ಮತ್ತು ನಿರ್ಮಾಣ ವಲಯದ ಸರಕುಗಳ ತಯಾರಿಕೆಯು ಕುಸಿತ ಕಂಡಿದೆ.

English summary

India's Industrial Production Big Fall In 8 Years

In sign of continuing weakness economy, India's factory output fall to the lowest level in 8 years
Story first published: Tuesday, November 12, 2019, 16:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X