For Quick Alerts
ALLOW NOTIFICATIONS  
For Daily Alerts

ಮಧ್ಯಪ್ರಾಚ್ಯದಿಂದ ತೈಲದ ಆಮದನ್ನು ತಗ್ಗಿಸಿರುವ ಭಾರತ: 4 ವರ್ಷಗಳಲ್ಲಿ ಕನಿಷ್ಟ ಮಟ್ಟ

|

ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕ ಭಾರತವು ಮಧ್ಯಪ್ರಾಚ್ಯದಿಂದ ಮಾಡಿಕೊಳ್ಳುತ್ತಿರುವ ತೈಲದ ಆಮದನ್ನು ತಗ್ಗಿಸಿದ್ದು, 2019 ರಲ್ಲಿ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಅಮೆರಿಕಾ-ಇರಾನ್ ನಡುವಿನ ಯುದ್ಧದ ಭೀತಿಯ ವಾತಾವರಣ ಸೇರಿದಂತೆ ಜಾಗತಿಕ ಮಟ್ಟದಲ್ಲಿ ವಾಣಿಜ್ಯ ಸಮರದಿಂದ ವೆಚ್ಚವನ್ನು ಕಡಿತಗೊಳಿಸಲು ಭಾರತವು ಇತರೆ ಮೂಲಗಳ ಅವಲಂಬನೆ ಹೆಚ್ಚಿಸಿದೆ ಎಂದು ಮೂಲಗಳ ಅಂಕಿ-ಅಂಶಗಳು ತಿಳಿಸಿವೆ. ಭಾರತವು ತನ್ನ ತೈಲ ಅಗತ್ಯಗಳಲ್ಲಿ ಸುಮಾರು 84 ಪರ್ಸೆಂಟ್ ನಷ್ಟು ಆಮದು ಮಾಡಿಕೊಳ್ಳುತ್ತದೆ ಮತ್ತು ಸಾಂಪ್ರದಾಯಿಕವಾಗಿ ಮಧ್ಯಪ್ರಾಚ್ಯವನ್ನು ಅದರ ಬಹುಪಾಲು ಸರಬರಾಜುಗಾಗಿ ಅವಲಂಬಿಸಿದೆ.

ಅಮೆರಿಕಾ-ರಷ್ಯಾದಂತಹ ರಾಷ್ಟ್ರಗಳಿಂದ ಹೆಚ್ಚಿದ ತೈಲ ಆಮದು

ಅಮೆರಿಕಾ-ರಷ್ಯಾದಂತಹ ರಾಷ್ಟ್ರಗಳಿಂದ ಹೆಚ್ಚಿದ ತೈಲ ಆಮದು

ಅಮೆರಿಕಾ ಮತ್ತು ರಷ್ಯಾದಂತಹ ದೇಶಗಳಿಂದ ದಾಖಲೆಯ ಉತ್ಪಾದನೆಯು ಭಾರತದಂತಹ ಆಮದುದಾರರಿಗೆ ಇತರ ಮೂಲಗಳಾಗಿ ಅವಕಾಶವನ್ನು ಒದಗಿಸಿವೆ. ಇದರಿಂದ ಭಾರತದ ಕಚ್ಛಾ ಪ್ರದೇಶದ ಪಾಲು ಕಳೆದ ವರ್ಷ 60 ಪರ್ಸೆಂಟ್‌ಗೆ ಕುಸಿದಿದೆ. ಇದು ಒಂದು ವರ್ಷದ ಹಿಂದೆ 65 ಪರ್ಸೆಂಟ್‌ನಷ್ಟಿದ್ದು 2015ರಿಂದ ದಾಖಲಾದ ಅತಿ ಕಡಿಮೆ ಮಟ್ಟವಾಗಿದೆ.

ಭಾರತವು 2019 ರಲ್ಲಿ ಮಧ್ಯಪ್ರಾಚ್ಯದಿಂದ ದಿನಕ್ಕೆ 2.68 ಮಿಲಿಯನ್ ಬ್ಯಾರೆಲ್ (ಬಿಪಿಡಿ) ತೈಲವನ್ನು ಆಮದು ಮಾಡಿಕೊಂಡಿದೆ. ಇದು 2018 ರಿಂದ ಸುಮಾರು 10 ಪರ್ಸೆಂಟ್ನಷ್ಟು ಕಡಿಮೆಯಾಗಿದೆ ಮತ್ತು ಬೇರೆಡೆಗಳಿಂದ ಸುಮಾರು 1.8 ಮಿಲಿಯನ್ ಬಿಪಿಡಿ ಇದೆ ಎಂದು ರಾಯಿಟರ್ಸ್ ಪರಿಶೀಲಿಸಿದ ಅಂಕಿ ಅಂಶಗಳು ತಿಳಿಸಿವೆ.

 

ಮಿತ್ರರಾಷ್ಟ್ರಗಳಿಂದ ಉತ್ಪಾದನೆ ಕಡಿತ, ಅಮೆರಿಕಾ ಇರಾನ್ ನಡುವಿನ ಸಂಘರ್ಷದ ಪರಿಣಾಮ

ಮಿತ್ರರಾಷ್ಟ್ರಗಳಿಂದ ಉತ್ಪಾದನೆ ಕಡಿತ, ಅಮೆರಿಕಾ ಇರಾನ್ ನಡುವಿನ ಸಂಘರ್ಷದ ಪರಿಣಾಮ

ಒಪೆಕ್ ಮತ್ತು ಮಿತ್ರರಾಷ್ಟ್ರಗಳ ನಿರೀಕ್ಷಿತ ತೈಲ ಉತ್ಪಾದನೆ ಕಡಿತ ಮತ್ತು ಅಮೆರಿಕಾ ನಿರ್ಬಂಧಗಳಿಂದಾಗಿ ಇರಾನ್‌ನಿಂದ ಕಡಿಮೆ ಪೂರೈಕೆ ಕೂಡ ಭಾರತದ ಮಧ್ಯಪ್ರಾಚ್ಯ ತೈಲದ ಅವಲಂಭನೆಯನ್ನು ದುರ್ಬಲಗೊಳಿಸಿದೆ ಎಂದು ರಿಫಿನಿಟಿವ್‌ನ ವಿಶ್ಲೇಷಕ ಎಹ್ಸಾನ್ ಉಲ್ ಹಕ್ ಹೇಳಿದ್ದಾರೆ.

ಕಳೆದ ವರ್ಷ ಒಪೆಕ್ ಪ್ಲಸ್ ಎಂದು ಕರೆಯಲ್ಪಡುವ ಒಪೆಕ್ ಮತ್ತು ಮಿತ್ರರಾಷ್ಟ್ರಗಳ ನಿರ್ಬಂಧಗಳು ಮತ್ತು ಕಡಿತವು ಗುಂಪಿನ ಸರಬರಾಜನ್ನು 2018 ರಿಂದ 1.9 ಮಿಲಿಯನ್ ಬಿಪಿಡಿ ಕಡಿಮೆಗೊಳಿಸಿದರೆ, ಒಪೆಕ್ ಅಲ್ಲದ ಪೂರೈಕೆ 2 ಮಿಲಿಯನ್ ಬಿಪಿಡಿ ಹೆಚ್ಚಾಗಿದೆ ಎಂದು ಅಂತರಾಷ್ಟ್ರೀಯ ಇಂಧನ ಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

 

2020ರಲ್ಲಿ ಮಧ್ಯಪ್ರಾಚ್ಯದಿಂದ ಹೊರಗಿನ ತೈಲ ಆಮದು ಹೆಚ್ಚಳ ಸಾಧ್ಯತೆ

2020ರಲ್ಲಿ ಮಧ್ಯಪ್ರಾಚ್ಯದಿಂದ ಹೊರಗಿನ ತೈಲ ಆಮದು ಹೆಚ್ಚಳ ಸಾಧ್ಯತೆ

2020 ರಲ್ಲಿ ಒಪೆಕ್ ಪ್ಲಸ್ ಒಪ್ಪಂದದ ಹೊರಗಿನ ಉತ್ಪಾದಕರು ಅಂದರೆ ಅಮೆರಿಕಾ, ರಷ್ಯಾದಂತಹ ರಾಷ್ಟ್ರಗಳು 2.1 ಮಿಲಿಯನ್ ಬಿಪಿಡಿಗಳಷ್ಟು ಪೂರೈಕೆಯನ್ನು ಹೆಚ್ಚಿಸಲಿದ್ದಾರೆ ಎಂದು ಐಇಎ ಮುನ್ಸೂಚನೆ ನೀಡಿದೆ. ಮಧ್ಯಪ್ರಾಚ್ಯದ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಲು ಭಾರತ ತನ್ನ ತೈಲ ಪೂರೈಕೆ ಮೂಲಗಳನ್ನು ವೈವಿಧ್ಯಗೊಳಿಸುವ ಕಾರ್ಯತಂತ್ರವನ್ನು ರೂಪಿಸುತ್ತಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಕಳೆದ ವಾರವಷ್ಟೇ ಹೇಳಿದ್ದಾರೆ. ರಷ್ಯಾದ ತೈಲ ಆಮದು ಹೆಚ್ಚಿಸಲು ರಿಫೈನರ್‌ಗಳು ಮುಂಚಿತವಾಗಿ ಮಾತುಕತೆ ನಡೆಸುತ್ತಿದ್ದಾರೆ.

2019ರಲ್ಲಿ ಸಿಐಎಸ್‌ ರಾಷ್ಟ್ರಗಳಿಂದ ತೈಲ ಆಮದು 65 ಪರ್ಸೆಂಟ್ ಏರಿಕೆ

2019ರಲ್ಲಿ ಸಿಐಎಸ್‌ ರಾಷ್ಟ್ರಗಳಿಂದ ತೈಲ ಆಮದು 65 ಪರ್ಸೆಂಟ್ ಏರಿಕೆ

ಸಿಐಎಸ್ ರಾಷ್ಟ್ರಗಳಿಂದ ಆಮದು 2019 ರಲ್ಲಿ ಸುಮಾರು 65 ಪರ್ಸೆಂಟ್‌ ರಷ್ಟು ಏರಿಕೆಯಾಗಿ 171,000 ಬಿಪಿಡಿಗೆ ತಲುಪಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಆಫ್ರಿಕನ್ ದೇಶಗಳಿಂದ ಆಮದು ಪ್ರಮಾಣ 7.3 ಪರ್ಸೆಂಟ್ ರಷ್ಟು ಏರಿಕೆಯಾಗಿ, ಸುಮಾರು 713,000 ಬಿಪಿಡಿಗೆ ತಲುಪಿದೆ. ಆದರೆ ಅಮೆರಿಕಾ ಸರಬರಾಜು 63% ರಷ್ಟು ಏರಿಕೆಯಾಗಿ 181,000 ಬಿಪಿಡಿಗೆ ತಲುಪಿದೆ.

ಅಮೆರಿಕಾದಿಂದ ಆಮದಾಗುವ ತೈಲವು 2019 ರಲ್ಲಿ ಭಾರತದ ಒಟ್ಟಾರೆ ಆಮದುಗಳಲ್ಲಿ ಸುಮಾರು 4 ಪರ್ಸೆಂಟ್ ನಷ್ಟಿದೆ. ಇದು ಒಂದು ವರ್ಷದ ಹಿಂದೆ ಕೇವಲ 2.5 ಪರ್ಸೆಂಟ್‌ನಷ್ಟಿತ್ತು.

English summary

India's Middle Eastren Oil Source Slumps 4 Years Low

India’s imports of Middle Eastern oil plunged to a four-year low in 2019 from sources
Story first published: Tuesday, January 21, 2020, 12:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X