For Quick Alerts
ALLOW NOTIFICATIONS  
For Daily Alerts

ನಾರಿ ಸಾಮ್ರಾಜ್ಯ..! ಎನ್‌ಎಸ್‌ಇ ಟಾಪ್ ಕಂಪನಿಗಳ ಆಡಳಿತ ಮಂಡಳಿಯಲ್ಲಿ ಶೇ. 18 ಮಹಿಳೆಯರು

|

ನವದೆಹಲಿ, ನ. 22: ಉದ್ಯೋಗಸ್ಥಳಗಳಲ್ಲಿ ನಾನಾ ಕಾರಣಗಳಿಗೆ ಮಹಿಳೆಯರು ಅವಕಾಶವಂಚಿತರಾಗುವುದುಂಟು. ಗರ್ಭಿಣಿ, ಹೆರಿಗೆಯ ಜೊತೆಗೆ ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ ಇತ್ಯಾದಿ ಹೆಚ್ಚುವರಿ ಜವಾಬ್ದಾರಿಗಳು ಹೆಣ್ಮಕ್ಕಳಿಗೆ ವೃತ್ತಿಪರ ಜಗತ್ತಿನಲ್ಲಿ ಸ್ಥಿರವಾಗಿ ಮುಂದುವರಿಯಲು ಅಡ್ಡಿಗಳಾಗಬಹುದು. ದೈಹಿಕವಾಗಿ ಗಂಡಸರಿಗಿಂತ ತುಸು ಬಲಹೀನರಾಗಿರುವುದು ಕೆಲವಾರು ಕ್ಷೇತ್ರಗಳಲ್ಲಿ ಅವರಿಗೆ ಆದ್ಯತೆ ಕಡಿಮೆ ಇರುತ್ತದೆ. ಇಷ್ಟೆಲ್ಲಾ ಅಡೆತಡೆಗಳನ್ನು ಮೀರಿ ಬಹಳಷ್ಟು ಮಹಿಳೆಯರು ಕಾರ್ಪೊರೇಟ್ ಜಗತ್ತಿನಲ್ಲಿ ಪ್ರಜ್ವಲಿಸಿದ್ದಾರೆ. ವೃತ್ತಿಯಲ್ಲಿ ಪರಮಶಿಖರ ಏರಿದ್ದಾರೆ.

 

ಷೇರುಪೇಟೆಯ ಎನ್‌ಎಸ್‌ಇಯಲ್ಲಿ ಲಿಸ್ಟ್ ಆದ ಟಾಪ್-500 ಕಂಪನಿಗಳ ಆಡಳಿತ ಮಂಡಳಿಯಲ್ಲಿ ಶೇ. 18ರಷ್ಟು ಮಹಿಳೆಯರೇ ಇದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಇದು ಈ ವರ್ಷದ ಮಾರ್ಚ್‌ವರೆಗಿನ ಅಂಕಿ ಅಂಶ.

ಜಾಗತಿಕವಾಗಿ ಕಾರ್ಪೊರೇಟ್ ಜಗತ್ತಿನ ಆಡಳಿತ ಮಂಡಳಿಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ. 24ರಷ್ಟಿದೆ. ಭಾರತದಲ್ಲಿ 2014ರಲ್ಲಿ ಮಹಿಳೆಯರ ಸಂಖ್ಯೆ ಶೇ. 6ರಷ್ಟು ಇತ್ತು. 2017ರಲ್ಲಿ ಈ ಕಂಪನಿಗಳ ಆಡಳಿತ ಮಂಡಳಿಯಲ್ಲಿ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಶೇ. 6ರಷ್ಟು ಇದ್ದ ಮಹಿಳಾ ಪ್ರಾತಿನಿಧ್ಯ ಮೂರ್ನಾಲ್ಕು ವರ್ಷಗಳಲ್ಲಿ ಶೇ. 14ಕ್ಕೆ ಏರಿತ್ತು. ಈಗ ಶೇ. 14ರಷ್ಟು ಮಹಿಳಾ ನಿರ್ದೇಶಕಿಯರು ಈ ಟಾಪ್ 500 ಕಂಪನಿಗಳಲ್ಲಿ ಇದ್ದಾರೆ.

ಭಾರತದಲ್ಲಿ ಲಿಂಗ ವೈವಿಧ್ಯತೆ

ಭಾರತದಲ್ಲಿ ಲಿಂಗ ವೈವಿಧ್ಯತೆ

ಇನ್ಸ್‌ಟಿಟ್ಯೂಷನಲ್ ಇನ್ವೆಸ್ಟರ್ ಅಡ್ವೈಸರಿ ಸರ್ವಿಸಸ್ (ಐಐಎಎಸ್) ಎಂಬ ಸಂಸ್ಥೆ ಈ ಅಧ್ಯಯನ ನಡೆಸಿ 'ಕಾರ್ಪೊರೇಟ್ ಇಂಡಿಯಾ: ವುಮೆನ್ ಆನ್ ಬೋರ್ಡ್ಸ್' ಎಂಬ ವರದಿಯನ್ನು ಇಂದು ಮಂಗಳವಾರ ಬಿಡುಗಡೆ ಮಾಡಿದೆ. ಭಾರತ ಮಾತ್ರವಲ್ಲದೇ ಜಾಗತಿಕವಾಗಿಯೂ ಕಾರ್ಪೊರೇಟ್ ಆಡಳಿತ ಮಂಡಳಿಗಳಲ್ಲಿ ಶೇ. 24ರಷ್ಟು ಮಹಿಳೆಯರು ಸ್ಥಾನ ಪಡೆದಿರುವ ಸಂಗತಿಯನ್ನು ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ನಿಫ್ಟಿ ಪೇಟೆಯಲ್ಲಿ ಲಿಸ್ಟ್ ಆದ ಕಂಪನಿಗಳ ಪೈಕಿ ಟಾಪ್-500 ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಶೇ. 17.6ರಷ್ಟು ಮಹಿಳೆಯರಿದ್ದಾರೆ. ಈ ಕಂಪನಿಗಳ 4,694 ನಿರ್ದೇಶಕರ ಪೈಕಿ ಮಹಿಳೆಯರ ಸಂಖ್ಯೆ 827 ಇದೆ.

"ಭಾರತದಲ್ಲಿ ಮಹಿಳಾ ನಿರ್ದೇಶಕರ ಸಂಖ್ಯೆ ಹೆಚ್ಚುತ್ತಿದೆಯಾದರೂ ಕಳೆದ 3 ವರ್ಷಗಳಿಂದ ಸಂಖ್ಯೆಯ ಏರ್ಮುಖ ನಿಧಾನಗೊಳ್ಳುತ್ತಿದೆ. ಇದೇ ಮಂದವೇಗದಲ್ಲಿ ಸಾಗಿದರೆ ಆಡಳಿತ ಮಂಡಳಿಯಲ್ಲಿ ಮಹಿಳೆಯರ ಸಂಖ್ಯೆ ಶೇ. 30ರ ಮಟ್ಟ ಮುಟ್ಟಲು 2058ರ ವರ್ಷವಾದರೂ ಆದೀತು" ಎಂದು ಈ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

 

ವಯಸ್ಸಿನ ಅಂತರ ಕಡಿಮೆ
 

ವಯಸ್ಸಿನ ಅಂತರ ಕಡಿಮೆ

2022 ಮಾರ್ಚ್ 31ರವರೆಗಿನ ಅಂಕಿ ಅಂಶದ ಪ್ರಕಾರ, ನಿಫ್ಟಿ-500 ಕಂಪನಿಗಳ ಪೈಕಿ ಶೇ. 48.6ರಷ್ಟು ಕಂಪನಿಗಳು ತಮ್ಮ ಆಡಳಿತ ಮಂಡಳಿಯಲ್ಲಿ ಇಬ್ಬರಿಗಿಂತ ಹೆಚ್ಚು ಮಹಿಳಾ ಸದಸ್ಯರನ್ನು ಹೊಂದಿವೆ. ಎರಡು ವರ್ಷಗಳ ಹಿಂದೆ ಕನಿಷ್ಠ ಇಬ್ಬರು ನಿರ್ದೇಶಕಿಯರನ್ನು ಹೊಂದಿದ ಕಂಪನಿಗಳು ಶೇ. 44 ಇದ್ದವು.

ಆಡಳಿತ ಮಂಡಳಿಯಲ್ಲಿ ಶೇ. 20ಕ್ಕಿಂತ ಹೆಚ್ಚು ಮಹಿಳೆಯರನ್ನು ಹೊಂದಿದ ಕಂಪನಿಗಳ ಸಂಖ್ಯೆ 159 ಇತ್ತು. ಇನ್ನು ನಿರ್ದೇಶಕರ ವಯಸ್ಸಿನ ವಿಚಾರದಲ್ಲೂ ಪುರುಷರು ಮತ್ತು ಮಹಿಳೆಯರ ಅಂತರ ಕಡಿಮೆ ಆಗುತ್ತಿದೆ. ಸರಾಸರಿ ಮಹಿಳಾ ನಿರ್ದೇಶಕರ ವಯಸ್ಸು 58.7 ವರ್ಷ ಇದ್ದರೆ, ಪುರುಷ ನಿರ್ದೇಶಕರ ಸರಾಸರಿ ವಯಸ್ಸು 62.3 ವರ್ಷ ಇರುವುದು ತಿಳಿದುಬಂದಿದೆ.

ಆದರೆ, ಸರ್ಕಾರಿ ಸ್ವಾಮ್ಯದ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಬಹಳ ಕಡಿಮೆ ಇದೆ ಎನ್ನುವ ಗಮನಾರ್ಹ ಸಂಗತಿಯನ್ನು ಐಐಎಎಸ್ ತನ್ನ ವರದಿಯಲ್ಲಿ ಎತ್ತಿ ತೋರಿಸಿದೆ.

 

ಫ್ರಾನ್ಸ್‌ನಲ್ಲಿ ಅತಿಹೆಚ್ಚು

ಫ್ರಾನ್ಸ್‌ನಲ್ಲಿ ಅತಿಹೆಚ್ಚು

ಜಾಗತಿಕವಾಗಿ ಕಾರ್ಪೊರೇಟ್ ಕಂಪನಿಗಳ ಆಡಳಿತ ಮಂಡಳಿಯಲ್ಲಿ ಮಹಿಳೆಯರ ಸಂಖ್ಯೆ ಸರಾಸರಿಯಾಗಿ ಶೇ. 24 ಇದೆ. ಫ್ರಾನ್ಸ್ ದೇಶದ ಕಂಪನಿಗಳಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ಶೇ. 44.5 ಇದೆ. ಇದು 2021ರಲ್ಲಿದ್ದ ಸ್ಥಿತಿ. ಇನ್ನು ಖಂಡವಾರು ಲೆಕ್ಕಕ್ಕೆ ತೆಗೆದುಕೊಂಡರೆ ಯೂರೋಪ್‌ನಲ್ಲಿ ಸರಾಸರಿಯಾಗಿ ಶೇ. 34.4ರಷ್ಟು ಮಹಿಳಾ ನಿರ್ದೇಶಕಿಯರಿದ್ದರೆ ಉತ್ತರ ಅಮೆರಿಕದಲ್ಲಿ ಇವರ ಸಂಖ್ಯೆ ಶೇ. 28.6 ಇದೆ.

English summary

India's Nifty Top-500 Companies Have 18pc Women Directors, Says a Study

Gender diversity in boardrooms is picking up, though at a slower pace, with women accounting for nearly 18 per cent of the directorships in the top 500 NSE-listed companies, according to a study. ಷೇರುಪೇಟೆಯ ಎನ್‌ಎಸ್‌ಇಯಲ್ಲಿ ಲಿಸ್ಟ್ ಆದ ಟಾಪ್-500 ಕಂಪನಿಗಳ ಆಡಳಿತ ಮಂಡಳಿಯಲ್ಲಿ ಶೇ. 18ರಷ್ಟು ಮಹಿಳೆಯರೇ ಇದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಇದು ಈ ವರ್ಷದ ಮಾರ್ಚ್‌ವರೆಗಿನ ಅಂಕಿ ಅಂಶ.
Story first published: Tuesday, November 22, 2022, 17:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X