For Quick Alerts
ALLOW NOTIFICATIONS  
For Daily Alerts

ಚಿಲ್ಲರೆ ಹಣದುಬ್ಬರ ಶೇಕಡಾ 4.35ಕ್ಕೆ ಕುಸಿತ: ಐದು ತಿಂಗಳಿನಲ್ಲಿ ಅತ್ಯಂತ ಕಡಿಮೆ

|

ಚಿಲ್ಲರೆ ಹಣದುಬ್ಬರವು ಆಗಸ್ಟ್‌ನಲ್ಲಿ ಶೇಕಡಾ 5.30 ರಿಂದ ಸೆಪ್ಟೆಂಬರ್‌ನಲ್ಲಿ ಶೇಕಡಾ 4.35 ಕ್ಕೆ ಕುಸಿದಿದೆ. ಇದು ಕಳೆದ ಐದು ತಿಂಗಳಿನಲ್ಲಿ ಕನಿಷ್ಠ ಮಟ್ಟವಾಗಿದೆ.

 

ಚಿಲ್ಲರೆ ಹಣದುಬ್ಬರವು ಮುಖ್ಯವಾಗಿ ಆಹಾರದ ಬೆಲೆಗಳ ಕುಸಿತದಿಂದಾಗಿ ಕಡಿಮೆಯಾಗಿದೆ. ಮಂಗಳವಾರ ಬಿಡುಗಡೆಯಾದ ಸರ್ಕಾರಿ ದತ್ತಾಂಶದಿಂದ ಇದು ಬಹಿರಂಗವಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಹಣದುಬ್ಬರವು ಆಗಸ್ಟ್‌ನಲ್ಲಿ ಶೇಕಡಾ 5.30 ಮತ್ತು ಸೆಪ್ಟೆಂಬರ್ 2020 ರಲ್ಲಿ ಶೇ. 7.27 ರಷ್ಟಿತ್ತು. ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಹಾರ ಹಣದುಬ್ಬರವು ಸೆಪ್ಟೆಂಬರ್ 2021 ರಲ್ಲಿ ಶೇಕಡಾ 0.68ಕ್ಕೆ ಇಳಿದಿದೆ. ಇದು ಆಗಸ್ಟ್‌ನಲ್ಲಿ ಶೇಕಡಾ 3.11ಕ್ಕಿಂತ ಕಡಿಮೆಯಾಗಿದ್ದು, ಆಗಸ್ಟ್‌ನ ಕೈಗಾರಿಕಾ ಉತ್ಪಾದನಾ ಅಂಕಿಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

 
ಗುಡ್‌ನ್ಯೂಸ್‌: ಚಿಲ್ಲರೆ ಹಣದುಬ್ಬರ ಶೇಕಡಾ 4.35ಕ್ಕೆ ಕುಸಿತ

ಆರ್‌ಬಿಐ ಗುರಿ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಪ್ರಾಥಮಿಕವಾಗಿ ಸಿಪಿಐ ಆಧಾರಿತ ಹಣದುಬ್ಬರವನ್ನು ತನ್ನ ದ್ವೈಮಾಸಿಕ ಹಣಕಾಸು ನೀತಿಗೆ ಟ್ರ್ಯಾಕ್ ಮಾಡುತ್ತದೆ, ಸರ್ಕಾರವು ಶೇಕಡಾ 4ರ ಗುರಿಯನ್ನು ನೀಡಿದೆ, ಎರಡೂ ಕಡೆಗಳಲ್ಲಿ 2 ಪ್ರತಿಶತದಷ್ಟು , ಅಂದರೆ ಗರಿಷ್ಠ 6 ಪ್ರತಿಶತ ಮತ್ತು ಕನಿಷ್ಠ 4 ಪ್ರತಿಶತವಾಗಿದೆ. ಆರ್‌ಬಿಐ 2021-22ಕ್ಕೆ ಸಿಪಿಐ ಹಣದುಬ್ಬರವನ್ನು ಶೇಕಡಾ 5.3 ಕ್ಕೆ ಅಂದಾಜಿಸಿದೆ. ಇದು ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 5.1ರಷ್ಟಿದ್ದು, ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 4.5ರಷ್ಟು ಮತ್ತು ಪ್ರಸ್ತುತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಶೇಕಡಾ 5.8ರಷ್ಟು ಎಂದು ಅಂದಾಜಿಸಲಾಗಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕ
ಭಾರತದಲ್ಲಿ ಕೈಗಾರಿಕಾ ಉತ್ಪಾದನೆಯು ಆಗಸ್ಟ್‌ನಲ್ಲಿ ಸ್ಥಿರವಾಗಿತ್ತು. ಇದು ಆಗಸ್ಟ್‌ನಲ್ಲಿ ವರ್ಷಕ್ಕೆ ಶೇಕಡಾ 11.9ರಷ್ಟು ಗಳಿಸಿತು, ಇದು ಜುಲೈನಲ್ಲಿ ಶೇಕಡ 11.4ಕ್ಕಿಂತ ಹೆಚ್ಚಾಗಿದೆ. ಅಕ್ಟೋಬರ್ 12 ರಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ದತ್ತಾಂಶವು ಕೈಗಾರಿಕಾ ಉತ್ಪಾದನೆಯು ಸ್ಥಿರವಾದ ವೇಗವನ್ನು ಕಾಯ್ದುಕೊಂಡಿರುವುದನ್ನು ತೋರಿಸುತ್ತದೆ. ಐಐಪಿಯಲ್ಲಿನ ಬೆಳವಣಿಗೆಯನ್ನು ಮಾರ್ಚ್ 2021ರಿಂದ ಮುಂದುವರಿಸಲಾಗಿದೆ.

ಕಳೆದ ಕೆಲವು ತಿಂಗಳ ಕಾರ್ಯಕ್ಷಮತೆ
ಕೈಗಾರಿಕಾ ಉತ್ಪಾದನೆಯು ಮೇ ತಿಂಗಳಲ್ಲಿ ಶೇಕಡಾ 28.6 ರಷ್ಟು ಬೆಳವಣಿಗೆಯಾಗಿದೆ ಮತ್ತು ಏಪ್ರಿಲ್‌ನಲ್ಲಿ ಶೇಕಡಾ 134 ರಷ್ಟು ಬೃಹತ್ ಬೆಳವಣಿಗೆಯನ್ನು ದಾಖಲಿಸಿದೆ. ಆಗಸ್ಟ್‌ನಲ್ಲಿ ಉತ್ಪಾದನಾ ವಲಯದ ಉತ್ಪಾದನೆಯು ಶೇಕಡಾ 9.7ರಷ್ಟು ಬೆಳವಣಿಗೆಯಾಗಿದೆ. ಇದು ಜುಲೈನಲ್ಲಿ ಶೇಕಡಾ 10.4ರಷ್ಟು ಮತ್ತು ಜೂನ್ ನಲ್ಲಿ ಶೇಕಡಾ 13ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಇದು ಮೇ ತಿಂಗಳಲ್ಲಿ ಶೇಕಡಾ 34.5 ಮತ್ತು ಏಪ್ರಿಲ್‌ನಲ್ಲಿ ಸುಮಾರು ಶೇಕಡಾ 200ರಷ್ಟು ಜಿಗಿದಿದೆ. ಉತ್ಪಾದನೆಯು ಜುಲೈ 2019 ಕ್ಕೆ ಹೋಲಿಸಿದರೆ ಶೇಕಡಾ 2 ರಷ್ಟು ಕಡಿಮೆಯಾಗಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಲಾಕ್‌ಡೌನ್‌ನಿಂದಾಗಿ, 2020ರ ಬಹುಪಾಲು ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.

English summary

India's Retail inflation in September 2021: India's Retail Inflation At 5 Month Low Of 4.35%

India's retail inflation fell to a five-month low of 4.35% in September from 5.3% in August as food inflation declined sharply, according to the data released by the government on Tuesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X