For Quick Alerts
ALLOW NOTIFICATIONS  
For Daily Alerts

2019ರಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆದ ಉದ್ಯಮಿಗಳು ಇವರು

|

ಭಾರತದ ಅತಿ ದೊಡ್ಡ ಸರ್ಚ್ ಎಂಜಿನ್ ಗೂಗಲ್‌ ಪ್ರತಿ ವರ್ಷದಂತೆ ಈ ವರ್ಷದ ಕೊನೆಯಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್‌ 10 ಉದ್ಯಮಿಗಳ ಪಟ್ಟಿ ಬಿಡುಗಡೆ ಮಾಡಿದೆ. ಗೂಗಲ್‌ನಲ್ಲಿ 2019ನೇ ಇಸವಿಯಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಉದ್ಯಮಿ ಟಾಟಾ ಸಂಸ್ಥೆಯ ಮಾಜಿ ಅಧ್ಯಕ್ಷ ರತನ್ ಟಾಟಾ ಆಗಿದ್ದಾರೆ.

 

82ನೇ ವಯಸ್ಸಿನಲ್ಲೂ ರತನ್‌ ಟಾಟಾ ಮತ್ತೊಮ್ಮೆ ಅತಿ ಹೆಚ್ಚು ಗೂಗಲ್ ಸರ್ಚ್ ಆದ ಉದ್ಯಮಿ ಎನಿಸಿಕೊಂಡಿದ್ದಾರೆ. ಟಾಪ್ 10ನಲ್ಲಿ ಯಾವೊಬ್ಬ ಸ್ಟಾರ್ಟ್ ಅಪ್ ಉದ್ಯಮಿಯ ಹೆಸರು ಕಾಣಿಸಿಕೊಂಡಿಲ್ಲ. ಈ ವರ್ಷ ಅತಿ ಹೆಚ್ಚು ಗೂಗಲ್ ಸರ್ಚ್ ಆದ ವ್ಯಕ್ತಿ ಎಂದರೆ ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಆಗಿದ್ದಾರೆ. ಭಾರತದ ಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ಎಫ್‌ 16 ಯುದ್ಧ ವಿಮಾನಗಳನ್ನು ಹಿಮ್ಮೆಟ್ಟುವಲ್ಲಿ ಹಾಗೂ ಮಿಗ್ 21 ವಿಮಾನದಿಂದ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದ ಪೈಲಟ್ ಅಭಿನಂದನ್ 60 ಗಂಟೆಗಳ ಕಾಲ ಪಾಕಿಸ್ತಾನ ಸೇನೆಯ ವಶದಲ್ಲಿದ್ದು ಆನಂತರ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ್ದರು.

ಭಾರತದಲ್ಲಿ ಅತಿ ಹೆಚ್ಚು ಟ್ರೆಂಡಿಂಗ್ ಇರುವ ಹಾಗೂ 2019ರಲ್ಲಿ ಹೆಚ್ಚು ಸರ್ಚ್ ಆದ ಟಾಪ್ 10 ಉದ್ಯಮಿಗಳ ವಿವರ ಈ ಕೆಳಗಿದೆ ಓದಿ

1.  ರತನ್ ಟಾಟಾ

1. ರತನ್ ಟಾಟಾ

ಟಾಟಾ ಗ್ರೂಪ್‌ನ ಪಿತಾಮಹ ರತನ್ ಟಾಟಾ 2019ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಉದ್ಯಮಿಯಾಗಿದ್ದಾರೆ. 2012ರಲ್ಲಿ ಟಾಟಾ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ 81ನೇ ವಯಸ್ಸಿನಲ್ಲೂ ಅತಿ ಹೆಚ್ಚು ಸರ್ಚ್‌ ಆದ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ನಿವೃತ್ತಿ ನಂತರವೂ ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾಗಿ ಮತ್ತು ಎಮಿರಿಟಸ್ ಆಪ್ ಟಾಟಾ ಸನ್ಸ್‌ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

21 ವರ್ಷಗಳ ಕಾಲ ಟಾಟಾ ಗ್ರೂಪ್‌ನ ಚುಕ್ಕಾಣಿ ಹಿಡಿದಿದ್ದ ರತನ್ ಟಾಟಾ ಅವರು ಸಂಸ್ಥೆಯನ್ನು 100 ಬಿಲಿಯನ್ ಅಮೆರಿಕನ್ ಡಾಲರ್ ಕಾರ್ಪೊರೇಟ್ ಕಂಪನಿಯಾಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ವರ್ಷ ಇನ್‌ಸ್ಟಾಗ್ರಾಂಗೆ ಸೇರ್ಪಡೆಯಾದ ರತನ್ ಟಾಟಾ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.

 

2. ಅಜೀಂ ಪ್ರೇಮ್‌ಜಿ

2. ಅಜೀಂ ಪ್ರೇಮ್‌ಜಿ

74 ವರ್ಷ ವಯಸ್ಸಿನ ವಿಪ್ರೋ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‌ಜಿ 2019ರಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆದ 2ನೇ ಉದ್ಯಮಿಯಾಗಿದ್ದಾರೆ. ವಿಪ್ರೋವನ್ನು ಅಡುಗೆ ತೈಲ ಕಂಪನಿಯಿಂದ 8.5 ಬಿಲಿಯನ್ ಅಮೆರಿಕನ್ ಡಾಲರ್ ಕಂಪನಿಗೆ ಪರಿವರ್ತಿಸಿದ ಕೀರ್ತಿಯು ಇವರಿಗಿದೆ. ಈ ವರ್ಷ ಜುಲೈನಲ್ಲಿ ವಿಪ್ರೋ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ನಿವೃತ್ತರಾದರು.

ಇತ್ತೀಚಿನ ಐಐಎಫ್‌ಎಲ್ ವೆಲ್ತ್ ಹುರನ್ ಇಂಡಿಯಾ ಸಮೀಕ್ಷೆಯ ಪ್ರಕಾರ ಭಾರತದ 3ನೇ ಬಹುದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಅಜೀಂ ಪ್ರೇಮ್‌ಜಿ ಆಸ್ತಿ 1 ಲಕ್ಷ, 17 ಸಾವಿರದ 100 ಕೋಟಿ ರುಪಾಯಿಗಳು. ಇವರು 50,000 ಕೋಟಿಗಳನ್ನು ಲೋಕೋಪಯೋಗಿ ಕಾರ್ಯಗಳಿಗೆ ನೀಡಿದ್ದಾರೆ.

 

3. ಲಕ್ಷ್ಮೀ ಮಿತ್ತಲ್
 

3. ಲಕ್ಷ್ಮೀ ಮಿತ್ತಲ್

ಲಂಡನ್ ಮೂಲದ ಲಕ್ಷ್ಮೀ ಮಿತ್ತಲ್ 2019ರಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆದ ಮೂರನೇ ಉದ್ಯಮಿಯಾಗಿದ್ದಾರೆ. ಎಲ್‌ಎನ್ ಮಿತ್ತಲ್ ನೇತೃತ್ವದ ಜಾಗತಿಕ ಉಕ್ಕಿನ ದೈತ್ಯ ಕಂಪನಿ ಆರ್ಸೆಲರ್ ಮಿತ್ತಲ್ 42,000 ಕೋಟಿ ಸಾಲವನ್ನು ಎಸ್ಸಾರ್ ಸ್ಟೀಲ್ ಸ್ವಾಧೀನಕ್ಕೆ ತೀರ್ಮಾನಿಸಿದೆ. 2017ರಲ್ಲಿ ಫೋರ್ಬ್ಸ್‌ನ ವಿಶ್ವದ 100 ಶ್ರೇಷ್ಟ ಉದ್ಯಮಿಗಳಲ್ಲಿ ಮಿತ್ತಲ್ ಹೆಸರಿಸಲಾಗಿತ್ತು.

4. ಸೈರಸ್ ಎಸ್. ಪೂನವಾಲ್ಲಾ

4. ಸೈರಸ್ ಎಸ್. ಪೂನವಾಲ್ಲಾ

ಭಾರತದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಪುಣೆ ಮೂಲದ ಸೈರಸ್ ಪೂನವಾಲ್ಲಾ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. 77 ವರ್ಷ ವಯಸ್ಸಿನ ಇವರು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ನಡೆಸುತ್ತಿದ್ದಾರೆ. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಿಸುವ ಮತ್ತು ಮಾರಾಟ ಮಾಡುವ ಉದ್ಯಮವನ್ನು ನಡೆಸುತ್ತಿದ್ದಾರೆ.

5. ಆನಂದ್ ಮಹೀಂದ್ರಾ

5. ಆನಂದ್ ಮಹೀಂದ್ರಾ

ಟ್ವಟರ್‌ನಲ್ಲಿ ಸದಾ ಸಕ್ರಿಯವಾಗಿರುವ ಉದ್ಯಮಿ ಆನಂದ್ ಮಹೀಂದ್ರಾ 2020 ಏಪ್ರಿಲ್‌ನಿಂದ ಮಹೀಂದ್ರ ಗ್ರೂಪ್ ಕಾರ್ಯ ನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು, ಸಂಸ್ಥೆಯ ಮಾರ್ಗದರ್ಶಿಯಾಗಿ ಮತ್ತು ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ. 2019ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಉದ್ಯಮಿಗಳಲ್ಲಿ ಇವರು ಒಬ್ಬರಾಗಿದ್ದಾರೆ.

6. ಶಿವ ನಾಡರ್

6. ಶಿವ ನಾಡರ್

74 ವರ್ಷ ವಯಸ್ಸಿನ ಶಿವ ನಾಡರ್ ಉದ್ಯಮಶೀಲತೆಯು ಪ್ರಾರಂಭವಾಗಿದ್ದು ಗ್ಯಾರೇಜ್‌ನಲ್ಲಿ. 1976ರಲ್ಲಿ ಕ್ಯಾಲ್ಕುಲೇಟರ್‌ಗಳು ಮತ್ತು ಮೈಕ್ರೊಪ್ರೊಸೆಸರ್‌ಗಳನ್ನು ತಯಾರಿಸುವ ಮೂಲಕ ಉದ್ಯಮ ಆರಂಭಿಸಿದ ಇವರ ಹೆಚ್‌ಸಿಎಲ್ ಕಂಪನಿ ಈಗ 8.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕಂಪನಿಯಾಗಿ ಬೆಳೆದುನಿಂತಿದೆ.

7. ಗೌತಮ್ ಅದಾನಿ

7. ಗೌತಮ್ ಅದಾನಿ

ಗೌತಮ್ ಅದಾನಿ ಕೂಡ 2019ರಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆಗಿರುವ ಉದ್ಯಮಿಯಾಗಿದ್ದಾರೆ. ಗೌತಮ್ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪವರ್, ಅದಾನಿ ಟ್ರಾನ್ಸ್‌ಮಿಷನ್ಸ್ ಮತ್ತು ಅದಾನಿ ಗ್ಯಾಸ್ ನಡೆಸುತ್ತಿದ್ದಾರೆ. ಫೋರ್ಬ್ಸ ನಿಯತಕಾಲಿಕೆಯು ಪ್ರಕಟಿಸಿದ 2019ರ ಭಾರತದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ಗೌತಮ್ ಅದಾನಿ ಆಸ್ತಿ 1,09,200 ಕೋಟಿ ರುಪಾಯಿ

8. ಕಿರಣ್ ಮಂಜುದಾರ್-ಶಾ

8. ಕಿರಣ್ ಮಂಜುದಾರ್-ಶಾ

ಬಯೋಕಾನ್ ಮುಖ್ಯಸ್ಥೆ, ಭಾರತದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾದ ಕಿರಣ್ ಮಂಜುದಾರ್ ಶಾ ಭಾರತದ ಶ್ರೀಮಂತ ಮಹಿಳೆಯಾಗಿದ್ದು, 2019ರಲ್ಲಿ ಹೆಚ್ಚು ಗೂಗಲ್ ಸರ್ಚ್ ಆದ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. 2010ರಲ್ಲಿ ವಿಶ್ವದ ಅತ್ಯಂತ ಪ್ರಭಾವಶಾಲಿ 100 ಜನರಲ್ಲಿ ಇವರು ಒಬ್ಬರು.

9. ಉದಯ್ ಕೋಟಕ್

9. ಉದಯ್ ಕೋಟಕ್

60 ವರ್ಷ ವಯಸ್ಸಿನ ಬಿಲಿಯನೇರ್, ಕೋಟಕ್ ಮಹೀಂದ್ರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿರುವ ಉದಯ್ ಕೋಟಕ್ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. 2019ರಲ್ಲಿ ಹೆಚ್ಚು ಗೂಗಲ್ ಸರ್ಚ್ ಆದ ಉದ್ಯಮಿಗಳಲ್ಲಿ ಇವರು ಒಬ್ಬರು.

10. ರಾಧಾಕಿಶನ್ ದಮಾನಿ

10. ರಾಧಾಕಿಶನ್ ದಮಾನಿ

ಸ್ಟಾಕ್ ಬ್ರೋಕರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ರಾಧಾಕಿಶನ್ ದಮಾನಿ ಡಿ ಮಾರ್ಟ್ ಮಳಿಗೆಗಳನ್ನು ತೆರೆಯುವ ಮೂಲಕ ಯಶಸ್ಸು ಸಾಧಿಸಿದರು. 2019ರಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆದ ಉದ್ಯಮಿಗಳ ಪಟ್ಟಿಯಲ್ಲಿ ಟಾಪ್ 10ನಲ್ಲಿ ಕಾಣಿಸಿಕೊಂಡಿದ್ದಾರೆ.

English summary

India's Top 10 Most Googled Business Tycoons

This is the list of Indi's top 10 most googled business tycoons in 2019
Story first published: Saturday, December 28, 2019, 17:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X