For Quick Alerts
ALLOW NOTIFICATIONS  
For Daily Alerts

ಟಾಪ್ 100 ಸಾಲಗಾರರು ಹಿಂತಿರುಗಿಸದ ಮೊತ್ತ ಈಶಾನ್ಯ ರಾಜ್ಯಗಳ ಬಜೆಟ್ ಗಿಂತ ಹೆಚ್ಚು

By ಅನಿಲ್ ಆಚಾರ್
|

ಬ್ಯಾಂಕ್ ಗಳಿಗೆ ಮಾರ್ಚ್ 2020ಕ್ಕೆ ಉದ್ದೇಶಪೂರ್ವಕವಾಗಿ ಸಾಲ ವಾಪಸ್ ಹಿಂತಿರುಗಿಸದ ಮೊತ್ತ ರು. 84,632 ಕೋಟಿ. ಅಂದ ಹಾಗೆ ಇದು ಟಾಪ್ 100 ಉದ್ದೇಶಪೂರ್ವಕ ಸುಸ್ತಿದಾರರು ಮಾತ್ರ ಬಾಕಿ ಉಳಿಸಿಕೊಂಡ ಮೊತ್ತ. ಟಾಪ್ ಟೆನ್ ಪಟ್ಟಿಯಲ್ಲಿ ಇರುವ ಗೀತಾಂಜಲಿ ಜೆಮ್ಸ್, ವಿನ್ಸಮ್ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ ಮತ್ತು ಕಿಂಗ್ ಫಿಶರ್ ಏರ್ ಲೈನ್ಸ್ ಇವುಗಳಿಂದ ಬರಬೇಕಾದ ಮೊತ್ತವೇ ಒಟ್ಟು ಸಾಲದ 32% ಆಗುತ್ತದೆ.

ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ದತ್ತಾಂಶದಿಂದ ತಿಳಿದುಬಂದಿರುವ ಅಂಶ. ಬ್ಯಾಲೆನ್ಸ್ ಶೀಟ್ ಸರಿಯಾಗಿ ಇರಿಸಿಕೊಳ್ಳಲು ಮತ್ತು ತೆರಿಗೆ ಅನುಕೂಲ ಪಡೆಯಲು ಹತ್ತಿರ ಹತ್ತಿರ ನಾಲ್ಕನೇ ಮೂರು ಭಾಗದಷ್ಟು ಮೊತ್ತವನ್ನು ರೈಟ್ ಆಫ್ ಮಾಡಲಾಗಿದೆ. ಆದರೆ ಸಾಲ ಬಾಕಿ ಉಳಿಸಿಕೊಂಡವರ ವಿವರ ಆರ್ ಬಿಐ ಆಂತರಿಕ CRILC ಡೇಟಾಬೇಸ್ ನಲ್ಲಿ ಕಾಣಿಸುತ್ತದೆ. ಅವರು ಸಾಲ ತೀರಿಸುವ ತನಕ ಹೀಗೇ ಇರುತ್ತದೆ ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

ದೇಶದ ಟಾಪ್ 50 ಉದ್ದೇಶಪೂರ್ವಕ ಸುಸ್ತಿದಾರರ 68,607 ಕೋಟಿ ರೈಟ್ ಆಫ್ದೇಶದ ಟಾಪ್ 50 ಉದ್ದೇಶಪೂರ್ವಕ ಸುಸ್ತಿದಾರರ 68,607 ಕೋಟಿ ರೈಟ್ ಆಫ್

ಟಾಪ್ 100 ಉದ್ದೇಶಪೂರ್ವಕ ಸುಸ್ತಿದಾರರ ಬಾಕಿ ಮೊತ್ತ FY20ರಲ್ಲಿ 5.34% ಮೇಲೇರಿದೆ. 2019ರ ಮಾರ್ಚ್ ನಲ್ಲಿ ಇದು ರು. 80,344 ಕೋಟಿ ಇತ್ತು ಎಂದು ಆರ್ ಟಿಐ ಅಡಿಯಲ್ಲಿ ಕೇಳಿದ ಮಾಹಿತಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉತ್ತರ ನೀಡಿದೆ.

ಟಾಪ್ 100 ಸಾಲಗಾರರು ಹಿಂತಿರುಗಿಸದ ಮೊತ್ತ ರು. 84,632 ಕೋಟಿ

ದೊಡ್ಡ ಮೊತ್ತದ ಬಾಕಿ ಉಳಿಸಿಕೊಂಡ ಟಾಪ್ ಟೆನ್ ಪಟ್ಟಿ ಹೀಗಿದೆ:
ಗೀತಾಂಜಲಿ ಜೆಮ್ಸ್ 5693 ಕೋಟಿ ರುಪಾಯಿ

REI ಆಗ್ರೋ 4403 ಕೋಟಿ ರುಪಾಯಿ

ವಿನ್ಸಮ್ ಡೈಮಂಡ್ಸ್ 3375 ಕೋಟಿ ರುಪಾಯಿ

ಕುಡೋಸ್ ಕೆಮಿ 2326 ಕೋಟಿ ರುಪಾಯಿ

ರೊಟೊಮ್ಯಾಕ್ ಗ್ಲೋಬಲ್ 2,028 ಕೋಟಿ ರುಪಾಯಿ

ಝೂಮ್ ಡೆವಲಪರ್ಸ್ 1927 ಕೋಟಿ ರುಪಾಯಿ

ಎಬಿಜಿ ಶಿಪ್ ಯಾರ್ಡ್ 1875 ಕೋಟಿ ರುಪಾಯಿ

ಫ್ರಾಸ್ಟ್ ಇಂಟರ್ ನ್ಯಾಷನಲ್ 1840 ಕೋಟಿ ರುಪಾಯಿ

ಫಾರೆವರ್ ಪ್ರಿಷಿಯಸ್ ಜ್ಯುವೆಲ್ಲರಿ 1715 ಕೋಟಿ ರುಪಾಯಿ

ಕಿಂಗ್ ಫಿಶರ್ ಏರ್ ಲೈನ್ಸ್ 1,663 ಕೋಟಿ ರುಪಾಯಿ

ಇನ್ನು ಸಾಲ ಬಾಕಿ ಉಳಿಸಿಕೊಂಡವರಿಂದ ಯಾವ್ಯಾವ ಬ್ಯಾಂಕ್ ಗೆ ಎಷ್ಟು ಪ್ರಮಾಣದಲ್ಲಿ ಹಣ ರೈಟ್ ಆಫ್ ಮಾಡಿದೆ ಅಂತ ನೋಡಿದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ರು. 4644 ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರು. 1875 ಕೋಟಿ, ಯುಕೋ ಬ್ಯಾಂಕ್ ಗೆ 1970 ಕೋಟಿ ರುಪಾಯಿ ಎಂದು ಗೊತ್ತಾಗುತ್ತದೆ.

ಭಾರತದ ಈಶಾನ್ಯ ರಾಜ್ಯಗಳ ಬಜೆಟ್ ಗಮನಿಸಿದರೆ ಟಾಪ್ ನೂರು ಮಂದಿ ಸಾಲಗಾರರು ಬಾಕಿ ಉಳಿಸಿಕೊಂಡ ರು. 84,632 ಕೋಟಿಗಿಂತ ಕಡಿಮೆ ಇರುವುದು ಕಂಡುಬರುತ್ತದೆ.

English summary

India's Top 100 Willful Defaulters Owe Lenders Amount Of Rs 84632 Crore

According to RBI data, India's top 100 willful defaulters owe lenders amount of Rs 84,632 crore as on March 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X