For Quick Alerts
ALLOW NOTIFICATIONS  
For Daily Alerts

ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಗೋಲ್ಡ್‌ಮ್ಯಾನ್ ಸಾಚ್ಸ್ ಅಂದಾಜು

|

ನವದೆಹಲಿ, ನ. 21: ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ ಎಂದು ಅಂತಾರಾಷ್ಟ್ರೀಯ ಹಣಕಾಸು ಸೇವೆ ಮತ್ತು ಹೂಡಿಕೆ ಸಂಸ್ಥೆ ಗೋಲ್ಡ್‌ಮ್ಯಾನ್ ಸಾಚ್ಸ್ ಅಭಿಪ್ರಾಯಪಟ್ಟಿದೆ. 2023ರ ಕ್ಯಾಲೆಂಡರ್ ವರ್ಷದಲ್ಲಿ ಶೇ. 6.9ರಷ್ಟು ಜಿಡಿಪಿ ವೃದ್ಧಿಸಬಹುದು ಎಂದು ಈ ಹಿಂದಿನ ವರದಿಯಲ್ಲಿ ಅಂದಾಜಿಸಿದ್ದ ಗೋಲ್ಡ್‌ಮ್ಯಾನ್ ಸಾಚ್ಸ್ ಈಗ ತನ್ನ ನಿರೀಕ್ಷೆಯನ್ನು ತಗ್ಗಿಸಿದೆ. ಮುಂದಿನ ವರ್ಷ ಭಾರತದ ಜಿಡಿಪಿ ಶೇ. 5.9ರಷ್ಟು ಇರಬಹುದು ಎಂದು ಹೇಳಿದೆ. ಗೋಲ್ಡ್‌ಮ್ಯಾನ್ ಸಾಚ್ಸ್ ಕಂಪನಿಯ ವಿವಿಧ ಆರ್ಥಿಕ ತಜ್ಞರು ಸೇರಿ ಈ ಹೊಸ ಅಂದಾಜು ಮಾಡಿದ್ದಾರೆ.

ಅಧಿಕ ಖರೀದಿ ವೆಚ್ಚದಿಂದಾಗಿ ಮುಂದಿನ ವರ್ಷ ಗ್ರಾಹಕೀಯ ಬೇಡಿಕೆ ಕಡಿಮೆ ಆಗಿರುತ್ತದೆ. ಇದು ಆರ್ಥಿಕ ಚಟುವಟಿಕೆ ಮಂದಗೊಳ್ಳುವಂತೆ ಮಾಡಬಹುದು. ಅಲ್ಲದೇ, ಕೋವಿಡ್ ನಂತರ ಆರ್ಥಿಕತೆ ಗರಿಗೆದರಿದ ಪರಿಣಾಮಗಳು ಕ್ಷೀಣಗೊಳ್ಳುತ್ತಿವೆ. ಇದೂ ಕೂಡ ಜಿಡಿಪಿ ಬೆಳವಣಿಗೆಗೆ ಹಿನ್ನಡೆಯಾಗಬಹುದು ಎಂಬುದು ಗೋಲ್ಡ್‌ಮ್ಯಾನ್ ಸಾಚ್ಸ್‌ನ ಆರ್ಥಿಕ ತಜ್ಞರ ಅಭಿಪ್ರಾಯ.

ಆದಾಯ ತೆರಿಗೆ, ಜಿಎಸ್‌ಟಿ ಅಪರಾಧ ಕಾನೂನು ಬದಲಾವಣೆ: ಆರ್ಥಿಕ ಚೇತರಿಕೆಗೆ ಸಿಐಐ ನೀಡಿದ ಸಲಹೆಗಳೇನು?ಆದಾಯ ತೆರಿಗೆ, ಜಿಎಸ್‌ಟಿ ಅಪರಾಧ ಕಾನೂನು ಬದಲಾವಣೆ: ಆರ್ಥಿಕ ಚೇತರಿಕೆಗೆ ಸಿಐಐ ನೀಡಿದ ಸಲಹೆಗಳೇನು?

ಎರಡು ವೈರುದ್ಧ್ಯದ ಅವಧಿಗಳು

ಎರಡು ವೈರುದ್ಧ್ಯದ ಅವಧಿಗಳು

ಮುಂದಿನ ವರ್ಷದ ಮೊದಲಾರ್ಧದಲ್ಲಿ ಆರ್ಥಿಕತೆಯ ವೇಗ ಕುಂಠಿತಗೊಂಡರೆ ಎರಡನೇ ಅವಧಿಯಲ್ಲಿ ಆರ್ಥಿಕತೆ ತುಸು ಚೇತರಿಸಿಕೊಳ್ಳಬಹುದು ಎಂಬುದು ಅವರ ಅಂದಾಜು.

"ವರ್ಷದ ಮೊದಲಾರ್ಧದಲ್ಲಿ ಆರ್ಥಿಕ ಚೇತರಿಕೆಯ ಅಂಶಗಳು ದುರ್ಬಲಗೊಳ್ಳುವುದನ್ನು ಕಾಣಬಹುದು. ಹಾಗೆಯೇ, ಹಣಕಾಸು ಬಿಗಿ ಕ್ರಮದಿಂದಾಗಿ (ಬಡ್ಡಿ ಏರಿಕೆ ಇತ್ಯಾದಿ) ಬೇಡಿಕೆ ತಗ್ಗಬಹುದು. ಎರಡನೇ ಅವಧಿಯಲ್ಲಿ ಜಾಗತಿಕ ಆರ್ಥಿಕತೆ ಚೇತರಿಕೆ ತೋರುತ್ತದೆ. ಭಾರತದ ರಫ್ತು ಕ್ಷೇತ್ರ ಬೆಳವಣಿಗೆತೋರಬಹುದು. ಹೂಡಿಕೆ ಹೆಚ್ಚಬಹುದು. ಇದರಿಂದ ಭಾರತದ ಆರ್ಥಿಕತೆ ಮತ್ತೆ ಹಳಿಗೆ ಬರಬಹುದು" ಎಂದು ಗೋಲ್ಡ್‌ಮ್ಯಾನ್ ಸಾಚ್ಸ್ ತನ್ನ ವರದಿಯಲ್ಲಿ ವಿಶ್ಲೇಷಣೆ ಮಾಡಿದೆ.

2023ರ ವರ್ಷದ ದ್ವಿತೀಯಾರ್ಧದಲ್ಲಿ ಭಾರತದ ಜಿಡಿಪಿ ಸಕಾರಾತ್ಮಕ ಸ್ಥಿತಿಗೆ ಬರಬಹುದೆಂದು ಶುಭ ಭವಿಷ್ಯ ನುಡಿದಿರುವ ಗೋಲ್ಡ್‌ಮ್ಯಾನ್ ಸಾಚ್ಸ್‌ನ ಎಕನಾಮಿಸ್ಟ್‌ಗಳು, ಭಾರತದ ರೂಪಾಯಿ ಚೇತರಿಕೆ, ಹಣದುಬ್ಬರ ಇಳಿಕೆಯ ಬೆಳವಣಿಗೆಯನ್ನು ಉಲ್ಲೇಖಿಸಿದ್ದಾರೆ.

 

ಸಕಾರಾತ್ಮಕ ಅಂಶಗಳು
 

ಸಕಾರಾತ್ಮಕ ಅಂಶಗಳು

ಅಮೆರಿಕನ್ ಡಾಲರ್ ಎದುರು ತುಸು ಮೌಲ್ಯ ಕುಂದಿದರೂ ರೂಪಾಯಿಯು ಉತ್ತಮ ಪ್ರದರ್ಶನ ತೋರಿದೆ. ಈ ವರ್ಷ ಶೇ. 6.8ರಷ್ಟು ಇರಲಿರುವ ಹಣದುಬ್ಬರ ಮುಂದಿನ ವರ್ಷ ಶೇ. 6.1ಕ್ಕೆ ಇಳಿಯಬಹುದು ಎಂದೂ ಅವರು ಅಂದಾಜು ಮಾಡಿದ್ದಾರೆ.

ಹಣದುಬ್ಬರ ದರದ ಗರಿಷ್ಠ ಮಟ್ಟ ಶೇ. 6ರಲ್ಲಿ ಇರಬೇಕು ಎಂದು ಆರ್‌ಬಿಐ ಗುರಿ ಇಟ್ಟಿದೆ. ಆದರೆ, ಹಣದುಬ್ಬರ ಆ ಮಟ್ಟ ಮೇರಿ ತುಸು ಮೇಲೆಯೇ ಇರಲಿರುವುದರಿಂದ ಆರ್‌ಬಿಐನ ಬಡ್ಡಿ ಏರಿಕೆ ಕ್ರಮ ಮುಂದುವರಿಯಬಹುದು, ಡಿಸೆಂಬರ್‌ನಲ್ಲಿ ಆರ್‌ಬಿಐ ರೆಪೋ ದರವನ್ನು 50 ಮೂಲಾಂಕಗಳಷ್ಟು ಏರಿಕೆ ಮಾಡಬಹುದು. ಫೆಬ್ರವರಿಯಲ್ಲಿ ಇನ್ನೂ 35 ಪಾಯಿಂಟ್ಸ್ ಹೆಚ್ಚಿಸಬಹುದು. ಈಗ ಶೇ. 5.9 ಇರುವ ರೆಪೋ ದರ ಕೆಲ ತಿಂಗಳಲ್ಲಿ ಶೇ 6.75ಕ್ಕೆ ಹೋಗಿ ನಿಲ್ಲಬಹುದು ಎಂದೂ ಗೋಲ್ಡ್‌ಮ್ಯಾನ್ ಸಾಚ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

 

ಕೋವಿಡ್ ನಂತರದ ಸ್ಥಿತಿ

ಕೋವಿಡ್ ನಂತರದ ಸ್ಥಿತಿ

ಕೋವಿಡ್ ತೀವ್ರವಾಗಿದ್ದ ಕಾಲಘಟ್ಟದಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆ ದರ ಮೈನಸ್ ಅಂಕಿಗೆ ಹೋಗಿತ್ತು. ಕಳೆದ ವರ್ಷದಿಂದ ಚೇತರಿಕೆಯ ಹಾದಿಯಲ್ಲಿದೆ. ರಷ್ಯಾ ಯುದ್ಧದ ಪರಿಣಾಮವಾಗಿ ಜಾಗತಿಕ ಆರ್ಥಿಕತೆ ಹಳಿ ತಪ್ಪಿದೆ. ಇದು ಭಾರತದ ಮೇಲೂ ಪರಿಣಾಮ ಬೀರಿದ್ದು ಆರ್ಥಿಕತೆಯ ವೇಗ ನಿಧಾನಗೊಳ್ಳುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಜಾಗತಿಕವಾಗಿ ಭಾರತವೇ ಅತಿವೇಗದ ಆರ್ಥಿಕತೆ ಎಂಬ ಶ್ರೇಯಸ್ಸು ಪಡೆದಿತ್ತು. ಈ ಹಣಕಾಸು ವರ್ಷದಲ್ಲಿ ಅದು ಸಾಧ್ಯವಾಗದೇ ಹೋಗಬಹುದು. ಅಮೆರಿಕದ ಆರ್ಥಿಕ ದುಸ್ಥಿತಿ, ಅಲ್ಲಿನ ಬಡ್ಡಿ ದರ ಏರಿಕೆ, ದೇಶೀಯ ವಿತ್ತೀಯ ಕೊರತೆ ಇತ್ಯಾದಿ ಹಲವು ಸಮಸ್ಯೆಗಳು ಮತ್ತು ಸವಾಲುಗಳು ಭಾರತವನ್ನು ಬಾಧಿಸುತ್ತಿವೆ.

ಭಾರತ ಮಾತ್ರವಲ್ಲ ವಿಶ್ವದ ಹಲವು ದೇಶಗಳ ಆರ್ಥಿಕತೆಗಳೂ ಕೋವಿಡ್‌ನಂತರ ನಲುಗಿ ಹೋಗಿವೆ. ಅದರಲ್ಲೂ ಬಲಾಢ್ಯ ಆರ್ಥಿಕತೆಗಳೆನ್ನಲಾದ ಅಮೆರಿಕ, ಬ್ರಿಟನ್ ಹಾಗೂ ಹಲವು ಐರೋಪ್ಯ ದೇಶಗಳು ಚೇತರಿಸಿಕೊಳ್ಳಲು ಪ್ರಯಾಸ ಪಡುತ್ತಿವೆ. ಚೀನಾದ ಆರ್ಥಿಕತೆಯ ಬೆಳವಣಿಗೆ ಶೇ. 3ರ ಒಳಗೇ ಇರುತ್ತದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಂತೆ ಹಲವು ದೇಶಗಳಿಗೆ ಇದು ಸವಾಲಿನ ಸಂದರ್ಭವಾಗಿದೆ. ರಷ್ಯಾ ಉಕ್ರೇನ್ ಯುದ್ಧ ನಿಂತು ಜಗತ್ತು ಸ್ಥಿರತೆ ಸಾಧಿಸಿದರೆ ಹಲವು ಆರ್ಥಿಕತೆಗಳು ಹಳಿಗೆ ಬರಬಹುದು ಎಂಬ ಆಶಯ ಇದೆ.

 

English summary

Indian Economic Growth May Slow Down Than Expected, Says Goldman Sachs

Goldman Sachs Group Inc. lowered its forecast for India’s economic growth next year, citing a hit to consumer demand from higher borrowing costs and fading benefits from pandemic reopening.
Story first published: Monday, November 21, 2022, 16:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X