4 ದಶಕಗಳಲ್ಲೇ ಭಾರೀ ಕುಸಿತ ಕಂಡ ಭಾರತದ ಜಿಡಿಪಿ ದರ!

ಕೊರೊನಾ ಬಿಕ್ಕಟ್ಟಿನ ನಡುವೆ ದೇಶದ ನಿವ್ವಳ ಉತ್ಪನ್ನ ದರ (ಜಿಡಿಪಿ) ಕಳೆದ ನಾಲ್ಕು ದಶಕಗಳಲ್ಲೇ ಭಾರಿ ಕುಸಿತ ಕಂಡಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಭಾರತದ ಜಿಡಿಪಿ ದರವು 2020-21ರ ಹಣಕಾಸು ವರ್ಷದಲ್ಲಿ ಶೇಕಡಾ 7.3 ಕುಸಿತ ದಾಖಲಿಸಿದೆ.

ಇಂದು (ಸೋಮವಾರ) ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 1.6ರಷ್ಟು ಬೆಳವಣಿಗೆ ದಾಖಲಿಸಿದೆ. ಹೀಗಿದ್ದರೂ ಒಟ್ಟಾರೆ ಜಿಡಿಪಿ ದರವು ಶೇ. 7.3ರಷ್ಟು ಕುಸಿತಗೊಂಡಿದೆ.

4 ದಶಕಗಳಲ್ಲೇ ಭಾರೀ ಕುಸಿತ ಕಂಡ ಭಾರತದ ಜಿಡಿಪಿ ದರ!

2019-20ರಲ್ಲಿ ದೇಶದ ಜಿಡಿಪಿ ಕೇವಲ ಶೇ. 4ರಷ್ಟು ಬೆಳವಣಿಗೆ ಕಂಡಿತ್ತು. ಅದು 11 ವರ್ಷಗಳಲ್ಲೇ ಕನಿಷ್ಠ ಬೆಳವಣಿಗೆಯಾಗಿತ್ತು. ನಂತರ ಕೊರೊನಾ ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್‌ನಿಂದಾಗಿ 2020-21ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಕಂಡು ಕೇಳರಿಯದ ಶೇ. 24.38ರಷ್ಟು ಭಾರಿ ಕುಸಿತಕ್ಕೆ ಒಳಗಾಗಿತ್ತು. ನಂತರ ನಿಧಾನಕ್ಕೆ ಚೇತರಿಕೆ ಕಂಡಿತಾದರೂ ಋಣಾತ್ಮಕತೆಯಿಂದ ಹೊರಬರುವುದು ಸಾಧ್ಯವಾಗಿಲ್ಲ.

ಇನ್ನು 2020-21 ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್‌ನಿಂದ- ಡಿಸೆಂಬರ್ 2020 ರವರೆಗೆ) ಜಿಡಿಪಿ ಶೇಕಡಾ 0.4 ರಷ್ಟು ಏರಿಕೆಯಾಗಿತ್ತು. ಈ ಮೂಲಕ ಕೋವಿಡ್-19 ಬಳಿಕ ಮೊದಲ ಬಾರಿಗೆ ಜಿಡಿಪಿ ಕೊಂಚ ಹಾದಿಗೆ ಮರಳಿತ್ತು.

ಆದರೆ ಈಗ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 1.6ರಷ್ಟು ಏರಿಕೆ ಕಂಡಿರುವುದರಿಂದ ಒಟ್ಟಾರೆ ಹಣಕಾಸು ವರ್ಷದ ಜಿಡಿಪಿ ದರವು ಶೇಕಡಾ 7.3ಕ್ಕೆ ಸಂಕುಚಿತಗೊಂಡಿದೆ. ಕೇಂದ್ರ ಸಾಂಖ್ಯಿಕ ಇಲಾಖೆ 2021ರಲ್ಲಿ ಜಿಡಿಪಿ ಶೇ. 8ರಷ್ಟು ಕುಸಿತವಾಗಲಿದೆ ಎಂದು ಅಂದಾಜಿಸಿತ್ತು. ಆದರೆ ನಿರೀಕ್ಷೆಗಿಂತ ಕೊಂಚ ಕಡಿಮೆಯಾಗಿರುವುದು ಸಮಾಧಾನ ತರಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+