For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್ ನಂತರದ ಆರ್ಥಿಕತೆ; ತೀವ್ರ ಆತಂಕ ವ್ಯಕ್ತಪಡಿಸಿದ ಮಾಜಿ ಹಣಕಾಸು ಕಾರ್ಯದರ್ಶಿ

|

ನದೆದೆಹಲಿ, ಜೂನ್ 3: ''ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 10 ರಷ್ಟು ಅಥವಾ 20 ಲಕ್ಷ ಕೋಟಿಗಳಷ್ಟು ಕುಗ್ಗಲಿದೆ'' ಎಂದು ಕೇಂದ್ರದ ಮಾಜಿ ಹಣಕಾಸು ಇಲಾಖೆಯ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.

ಈ ರೀತಿಯ ಪರಿಸ್ಥಿತಿ ಉದ್ಭವಿಸುತ್ತಿರುವುದು ನಲವತ್ತು ವರ್ಷಗಳ ನಂತರ ಮೊದಲ ಬಾರಿ ಎಂದು ಬ್ಲಾಗ್‌ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.

''ಲಾಕ್‌ಡೌನ್ ಪರಿಹಾರವಾಗಿ ಕೇಂದ್ರ ಸರ್ಕಾರ ಘೋಷಿಸಿರುವ 21 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ವಾಸ್ತವವಾಗಿ ಕೇವಲ 1.4-1.5 ಲಕ್ಷ ಕೋಟಿ ರುಪಾಯಿಯಾಗುತ್ತದೆ'' ಎನ್ನುತ್ತಾರೆ ಕೇಂದ್ರದ ಮಾಜಿ ಹಣಕಾಸು ಇಲಾಖೆಯ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್.

ಒಟ್ಟು ದೇಶೀಯ ಉತ್ಪನ್ನದ ಶೇಕಡಾ 0.7 ರಷ್ಟಿದೆ

ಒಟ್ಟು ದೇಶೀಯ ಉತ್ಪನ್ನದ ಶೇಕಡಾ 0.7 ರಷ್ಟಿದೆ

ಲಾಕ್‌ಡೌನ್ ಪರಿಹಾರವಾಗಿ ಕೇಂದ್ರ ಸರ್ಕಾರ ಘೋಷಿಸಿರುವ 21 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ದೇಶದ ಒಟ್ಟು ದೇಶೀಯ ಉತ್ಪನ್ನದ ಶೇಕಡಾ 0.7 ರಷ್ಟಿದೆ ಎಂದು ಕೇಂದ್ರದ ಮಾಜಿ ಹಣಕಾಸು ಇಲಾಖೆಯ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.

ಸಂಕುಚಿತಗೊಳ್ಳುವುದು ನಿಶ್ಚಿತ

ಸಂಕುಚಿತಗೊಳ್ಳುವುದು ನಿಶ್ಚಿತ

2020-21ರಲ್ಲಿ ಭಾರತದ ಜಿಡಿಪಿ 40 ವರ್ಷಗಳ ನಂತರ ಸಂಕುಚಿತಗೊಳ್ಳುವುದು ನಿಶ್ಚಿತ ಎಂದು ಅವರು ಬ್ಲಾಗ್‌ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. "ಇದು ಜಿಡಿಪಿಯ ಶೇಕಡಾ 10 ರಷ್ಟು ದೊಡ್ಡ ಕುಸಿತ ಅಥವಾ ನಷ್ಟ ಎಂದು ಸಾಕಷ್ಟು ಖಚಿತವಾಗಿ ಕಾಣುತ್ತದೆ ಎನ್ನುತ್ತಾರೆ.

ಇತಿಹಾಸದಲ್ಲಿ ಅತಿದೊಡ್ಡದು ಎನಿಸಿಕೊಳ್ಳುವ ಸಂಭವವಿದೆ

ಇತಿಹಾಸದಲ್ಲಿ ಅತಿದೊಡ್ಡದು ಎನಿಸಿಕೊಳ್ಳುವ ಸಂಭವವಿದೆ

ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ 2020-21ರ ಆರ್ಥಿಕತೆಯು ಕುಸಿಯುವುದು ಇತಿಹಾಸದಲ್ಲಿ ಅತಿದೊಡ್ಡದು ಎನಿಸಿಕೊಳ್ಳುವ ಸಂಭವವಿದೆ ಎಂದು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತವು ತನ್ನ ಮೂರು ದಶಕದ ಮಹೋನ್ನತ ಬೆಳವಣಿಗೆಯನ್ನು ಕೊರೊನಾವೈರಸ್ ಲಾಕ್‌ಡೌನ್ ಮರೆಮಾಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆರ್ಥಿಕತೆಯು ಕೇವಲ 4 ಪ್ರತಿಶತದಷ್ಟು ಬೆಳೆದಿದೆ

ಆರ್ಥಿಕತೆಯು ಕೇವಲ 4 ಪ್ರತಿಶತದಷ್ಟು ಬೆಳೆದಿದೆ

2019-20ರಲ್ಲಿ ಭಾರತವು ಆರ್ಥಿಕ ಆರೋಗ್ಯ ಕೆಂಪು ಬಣ್ಣದಲ್ಲಿ ಗೋಚರಿಸುತ್ತಿದೆ. ಈ ಷರ್ವದ ಆರ್ಥಿಕತೆಯು ಕೇವಲ 4 ಪ್ರತಿಶತದಷ್ಟು ಬೆಳೆದಿದೆ ಇದು ಕಳೆದ 11 ವರ್ಷಗಳಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯ ದರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary

Indian Economy Will Be 10 Per Cent Down Ahead Of Coronavirus Lockdown

Indian Economy Will Be 10 Per Cent Down Ahead Of Coronavirus Lockdown, says Former Union Financial Department Secretary Subhas Chandra Gurg said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X