For Quick Alerts
ALLOW NOTIFICATIONS  
For Daily Alerts

ಯುಎಸ್ ಡಾಲರ್ ಜಿಗಿತ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

|

ಷೇರು ಮಾರುಕಟ್ಟೆಯು ನಿರಂತರವಾಗಿ ಕುಸಿತವನ್ನು ಕಾಣುತ್ತಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಪಾತಾಳಕ್ಕೆ ಕುಸಿದಿದೆ. ಈ ನಡುವೆ ಸೋಮವಾರ ಯುಎಸ್‌ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದೆ.

ಚೀನಾದಲ್ಲಿ ಶಾಂಘೈನಲ್ಲಿ ಮತ್ತೆ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್‌ ಅನ್ನು ಕಠಿಣಗೊಳಿಸಲಾಗಿದೆ. ಈ ಬೆಳವಣಿಗೆಯು ಜಾಗತಿಕ ಆರ್ಥಿಕ ಅಭಿವೃದ್ದಿ ಮೇಲೆ ಪರಿಣಾಮ ಉಂಟು ಮಾಡಬಹುದು ಎಂದು ಹೂಡಿಕೆದಾರರು ಆತಂಕ ಹೊಂದಿದ್ದಾರೆ. ಈ ಬೆನ್ನಲ್ಲೇ ಏಷ್ಯಾದ ಷೇರುಗಳು ಪಾತಾಳಕ್ಕೆ ಇಳಿದಿದೆ.

ಯುಎಸ್ ಡಾಲರ್ ಎದುರು ಭಾರತೀಯ ರುಪಾಯಿ ಇಳಿಮುಖವೇಕೆ?ಯುಎಸ್ ಡಾಲರ್ ಎದುರು ಭಾರತೀಯ ರುಪಾಯಿ ಇಳಿಮುಖವೇಕೆ?

ಎನ್‌ಎಸ್‌ಸಿ ನಿಫ್ಟಿ 50 ಸೂಚ್ಯಂಕವು 1.34 ಶೇಕಡಾ ಅಥವಾ 218 ಪಾಯಿಂಟ್‌ಗಳನ್ನು ಕಡಿಮೆಯಾಗಿ 16,192.95 ಕ್ಕೆ ತಲುಪಿದೆ. ಇದರ ಜೊತೆ ಪ್ರಮುಖ ಎಲ್ಲಾ ಸೂಚ್ಯಂಕಗಳು ಕೂಡಾ ಇಳಿಕೆ ಕಾಣುತ್ತಿದೆ. ಈ ನಡುವೆ ಎಸ್‌ ಆಂಡ್‌ ಪಿ ಬಿಎಸ್‌ಇ ಸೆನ್ಸೆಕ್ಸ್ ಶೇಕಡ 1.34 ಅಥವಾ 736.07 ರಷ್ಟು ಕುಸಿದು 54,099.51 ಕ್ಕೆ ತಲುಪಿದೆ.

 ಯುಎಸ್ ಡಾಲರ್ ಜಿಗಿತ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

ಇನ್ನು ನಿಫ್ಟಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್, ಲೋಹ ಹಾಗೂ ಇಂಧನ ಇಂಡೆಕ್ಸ್ ಭಾರೀ ಕುಸಿತ ಕಂಡಿದೆ. ತಲಾ ಶೇಕಡ 2ಕ್ಕಿಂತ ಅಧಿಕ ಕುಸಿದಿದೆ. ಸೋಮವಾರ ಬೆಳಿಗ್ಗೆ ಸೂಚ್ಯಂಕವು ಸುಮಾರು 800 ಪಾಯಿಂಟ್‌ಗಳು ಅಥವಾ 1.5 ಶೇಕಡ ಕುಸಿದಿದ್ದರಿಂದ ಎಲ್ಲಾ ಸೆನ್ಸೆಕ್ಸ್ ಷೇರುಗಳು ನಷ್ಟ ಅನುಭವಿಸಿದೆ.

ರೂಪಾಯಿ ಮೌಲ್ಯ ಸಾರ್ವಕಾಲಿಕ ಪತನ

ರಾಯಿಟರ್ಸ್ ವರದಿಯ ಪ್ರಕಾರ ಸೋಮವಾರ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ 77.42 ಕ್ಕೆ ಕುಸಿದಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ಭಾರತದ ಅಧಿಕೃತ ಕರೆನ್ಸಿ ರೂಪಾಯಿ 51 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ರೂ 77.41 ಕ್ಕೆ ತಲುಪಿದೆ. ರೂಪಾಯಿಯು ಅಮೆರಿಕನ್ ಡಾಲರ್‌ ಎದುರು 77.17 ರೂಪಾಯಿಯಲ್ಲಿ ವಹಿವಾಟು ಆರಂಭ ಮಾಡಿತು. ಬಳಿಕ 52 ಪೈಸೆಯ ಕುಸಿತವನ್ನು ದಾಖಲಿಸಿತು. ಮಾರ್ಚ್‌ನಲ್ಲಿ ರೂಪಾಯಿ 76.98ರಷ್ಟು ಕುಸಿತ ಕಂಡಿತ್ತು. ಅದಕ್ಕೂ ಅಧಿಕ ರೂಪಾಯಿ ಮೌಲ್ಯ ಸೋಮವಾರ ಇಳಿದಿದೆ.

English summary

Indian Rupee hits all-time low of 77.40 against US dollar in early trade

Indian Rupee hits all-time low of 77.40 against US dollar in early trade.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X