For Quick Alerts
ALLOW NOTIFICATIONS  
For Daily Alerts

ಯುಎಸ್‌ ಡಾಲರ್ ಎದುರು ಕೊಂಚ ಚೇತರಿಕೆ ಕಂಡ ರೂಪಾಯಿ

|

ಯುಎಸ್‌ ಡಾಲರ್ ಎದುರಿನಲ್ಲಿ ರೂಪಾಯಿಯು ಕೊಂಚ ಚೇತರಿಕೆ ಕಂಡಿದೆ. ಸೋಮವಾರ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿಯು 12 ಪೈಸೆ ಏರಿಕೆ ಕಂಡು ರೂಪಾಯಿ 77.93ಕ್ಕೆ ತಲುಪಿದೆ.

ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಎದುರಲ್ಲಿ ಕೊಂಚ ಏರಿಕೆಯೊಂದಿಗೆಯೇ ಭಾರತೀಯ ರೂಪಾಯಿ ವಹಿವಾಟು ಆರಂಭ ಮಾಡಿದೆ. ಆರಂಭಿಕವಾಗಿ ರೂಪಾಯಿ 77.98ರಲ್ಲಿ ವಹಿವಾಟು ನಡೆಸಿದ್ದು ಬಳಿಕ 77.93ಕ್ಕೆ ತಲುಪಿದೆ.

ಡಾಲರ್ ಎದುರು ರೂಪಾಯಿ ದಾಖಲೆಯ ಮಟ್ಟ ಕುಸಿತ: ಕಾರಣವೇನು?ಡಾಲರ್ ಎದುರು ರೂಪಾಯಿ ದಾಖಲೆಯ ಮಟ್ಟ ಕುಸಿತ: ಕಾರಣವೇನು?

ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಾಣುತ್ತಿದೆ. ಕೊನೆಯ ವಹಿವಾಟಿನಲ್ಲಿ ಸುಮಾರು ಐದು ಪೈಸೆ ರೂಪಾಯಿ ಮೌಲ್ಯ ಇಳಿಕೆ ಕಂಡು ರೂಪಾಯಿ 78.05 ಆಗಿತ್ತು.

ಯುಎಸ್‌ ಡಾಲರ್ ಎದುರು ಕೊಂಚ ಚೇತರಿಕೆ ಕಂಡ ರೂಪಾಯಿ

ಜಾಗತಿಕ ತೈಲಬೆಲೆಯ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇಕಡ 0.26ರಷ್ಟು ಕುಸಿತ ಕಂಡು ಪ್ರತಿ ಡಾಲರ್‌ಗೆ 112.83 ಡಾಲರ್ ಇಳಿಕೆಯಾಗಿದೆ. ಇದು ರೂಪಾಯಿ ಬಲಗೊಳ್ಳಲು ಸಹಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಕಳೆದ ವಾರ ಡಾಲರ್ ಎದುರು ಭಾರೀ ಕುಸಿತ ಕಂಡಿದ್ದ ರೂಪಾಯಿ

ಕಳೆದ ಸೋಮವಾರ ಆರಂಭಿಕ ವಹಿವಾಟಿನಲ್ಲಿಯೇ ಯುಎಸ್ ಡಾಲರ್ ಎದುರು ರೂಪಾಯಿ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಈ ಹಿಂದಿನ ವಹಿವಾಟಿನಲ್ಲಿ 77.93ಕ್ಕೆ ತಲುಪಿ ವಹಿವಾಟು ಅಂತ್ಯ ಮಾಡಿದ್ದ ರೂಪಾಯಿ, ಸೋಮವಾರ ಡಾಲರ್ ಎದುರು 78ರ ಗಡಿ ದಾಟಿದೆ. ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಪತನವಾಗಿದೆ.

ಯುಎಸ್‌ ಹಣದುಬ್ಬರವು ನಾಲ್ಕು ದಶಕಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ ಬಳಿಕ ಭಾರತೀಯ ರೂಪಾಯಿಯ ಮೇಲೆ ಒತ್ತಡ ಉಂಟು ಮಾಡಿದೆ. ಕಳೆದ ಮಾರ್ಚ್ ತಿಂಗಳಿನಿಂದ ಯುಎಸ್ ಡಾಲರ್ ಎದುರು ರೂಪಾಯಿ ಪದೇ ಪದೇ ಹೊಸ ದಾಖಲೆ ಮಟ್ಟದ ಕುಸಿತವನ್ನು ಕಾಣುತ್ತಿದೆ.

English summary

Indian rupee rises 12 paise to 77.93 against US dollar

Indian rupee rises 12 paise to 77.93 against US dollar in early trade on june 20.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X