For Quick Alerts
ALLOW NOTIFICATIONS  
For Daily Alerts

Stock market holiday: ಸೋಮವಾರ ಉತ್ತಮ ವಹಿವಾಟು ಕಂಡ ಷೇರುಪೇಟೆಗಳಿಗೆ ಇಂದು ರಜಾ ದಿನ

|

ಮುಂಬೈ, ನ. 8: ಗುರುನಾನಕ್ ಜಯಂತಿ ನಿಮಿತ್ತ ಇಂದು ಮಂಗಳವಾರ ಭಾರತೀಯ ಷೇರುಪೇಟೆಗಳು ಬಂದ್ ಆಗಿವೆ. ಸೆನ್ಸೆಕ್ಸ್, ನಿಫ್ಟಿ, ಫೋರೆಕ್ಸ್ ಇತ್ಯಾದಿ ಮಾರುಕಟ್ಟೆಗಳು ಮುಚ್ಚಿರಲಿವೆ. ಬುಧವಾರ ಬೆಳಗ್ಗೆ ಇಲ್ಲಿ ಮತ್ತೆ ವಹಿವಾಟು ಆರಂಭವಾಗುತ್ತದೆ.

 

ಕೃಷಿ ವಸ್ತುಗಳ ವಿನಿಯಮ ಮಾರುಕಟ್ಟೆ ಎನ್‌ಸಿಡಿಇಎಕ್ಸ್ ಮಂಗಳವಾರ ಇಡೀ ದಿನ ಬಾಗಿಲು ಮುಚ್ಚಿದರೆ, ಕೃಷಿಯೇತರ ವಸ್ತುಗಳ ಸೂಚಿಯಾದ ಎಂಸಿಎಕ್ಸ್ ವಿನಿಮಯ ಮಾರುಕಟ್ಟೆ ಅರ್ಧದಿನ ತೆರೆದಿರಲಿದೆ. ಎಂಸಿಎಕ್ಸ್‌ನಲ್ಲಿ (ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್) ಬೆಳಗ್ಗೆ 9ರಿಂದ ಸಂಜೆ 5ರವರೆಗಿನ ಮೊದಲ ಸೆಷನ್‌ನಲ್ಲಿ ವಹಿವಾಟು ಇರುವುದಿಲ್ಲ. ಸಂಜೆ 5ರಿಂದ ಮಧ್ಯರಾತ್ರಿಯವರೆಗಿನ ಎರಡನೇ ಸೆಷೆನ್‌ನಲ್ಲಿ ವಹಿವಾಟು ಆಗಲಿದೆ ಎಂದು ಹೇಳಲಾಗಿದೆ.

ನವೆಂಬರ್ 7ರಂದು ಬಂಗಾರ, ಬೆಳ್ಳಿ ದರ ಇಳಿಕೆ, ನಿಮ್ಮ ನಗರದಲ್ಲೆಷ್ಟಿದೆ?ನವೆಂಬರ್ 7ರಂದು ಬಂಗಾರ, ಬೆಳ್ಳಿ ದರ ಇಳಿಕೆ, ನಿಮ್ಮ ನಗರದಲ್ಲೆಷ್ಟಿದೆ?

ಮತ್ತೆ ರಜೆ ಇಲ್ಲ

ಮತ್ತೆ ರಜೆ ಇಲ್ಲ

ಒಂದು ವರ್ಷದಲ್ಲ ಷೇರು ಮಾರುಕಟ್ಟೆಗಳು ವೀಕೆಂಡ್ ಹೊರತುಪಡಿಸಿ 13 ದಿನ ರಜೆ ಹೊಂದಿರುತ್ತವೆ. ಈ ಕ್ಯಾಲೆಂಡರ್ ವರ್ಷದಲ್ಲಿ ಗುರುನಾನಕ್ ಜಯಂತಿ ಕೊನೆಯ ರಜಾ ದಿನವಾಗಿದೆ. ಡಿಸೆಂಬರ್ 31ರವರೆಗೂ ಮತ್ತೆ ಯಾವುದೇ ರಜೆ ಇಲ್ಲ. ವೀಕೆಂಡ್ ಮಾತ್ರ ಬಂದ್ ಅಗಿರುತ್ತವೆ.

ಸೆನ್ಸೆಕ್ಸ್ 234.79 ಅಂಕ ಹೆಚ್ಚಳ

ಸೆನ್ಸೆಕ್ಸ್ 234.79 ಅಂಕ ಹೆಚ್ಚಳ

ನಿನ್ನೆ ಸೋಮವಾರ ಷೇರುಪೇಟೆಗಳು ಹಲವು ಏರಿಳಿತಗಳನ್ನು ಕಂಡು ಅಂತಿಮವಾಗಿ ಸಕಾರಾತ್ಮಕವಾಗಿ ವಹಿವಾಟು ಮುಗಿಸಿದ್ದವು. ಬೆಳಗ್ಗೆ ಉತ್ತಮವಾಗಿ ಆರಂಭಗೊಂಡ ಸೆನ್ಸೆಕ್ಸ್, ನಂತರದ ಅವಧಿಯಲ್ಲಿ ಕುಸಿತ ಕಂಡು ಕೊನೆಯ ಒಂದು ಗಂಟೆ ಇರುವಾಗ ಚೇತರಿಸಿಕೊಂಡಿತು. ಅಂತಿಮವಾಗಿ ಬಿಎಸ್‌ಇ ಸೆನ್ಸೆಕ್ಸ್ 234.79 ಅಂಕಗಳಷ್ಟು ಹೆಚ್ಚು ಮಟ್ಟದಲ್ಲಿ ದಿನ ಮುಗಿಸಿತು. ಶೇ. 0.39ರಷ್ಟು ಹೆಚ್ಚಳ ಕಂಡ ಸೆನ್ಸೆಕ್ಸ್ ಸೋಮವಾರ ದಿನಾಂತ್ಯದಲ್ಲಿ ಒಟ್ಟು 61,185.15 ಅಂಕಗಳಲ್ಲಿ ಇದೆ.

ಸೆನ್ಸೆಕ್ಸ್‌ನ ಅಗ್ರ 30 ಕಂಪನಿ ಷೇರುಗಳ ಪೈಕಿ 19 ಷೇರುಗಳ ಬೆಲೆ ವೃದ್ಧಿಸಿದರೆ 11 ಷೇರುಗಳು ನಷ್ಟ ಕಂಡಿವೆ.

ನಿಫ್ಟಿ ಕೂಡ ಹೆಚ್ಚಳ
 

ನಿಫ್ಟಿ ಕೂಡ ಹೆಚ್ಚಳ

ಎನ್‌ಎಸ್‌ಇ ನಿಫ್ಟಿ ಮಾರುಕಟ್ಟೆ ಕೂಡ ನಿನ್ನೆ ಶೇ. 0.47ರಷ್ಟು ಹೆಚ್ಚಳ ಕಂಡಿದೆ. 85.65 ಅಂಕಗಳಷ್ಟು ಹೆಚ್ಚಳವಾಗಿ 18,202.80 ಅಂಕಗಳಿಗೆ ಸೋಮವಾರದ ದಿನ ಮುಗಿಸಿದೆ.

ಬ್ರಿಟಾನಿಯಾ ಇಂಡಸ್ಟ್ರೀಸ್ ಶೇ. 8ರಷ್ಟು ವೃದ್ಧಿಸಿದೆ. ಬ್ರಿಟಾನಿಯಾ ಜೊತೆ, ಎಸ್‌ಬಿಐ ಮತ್ತು ಬಿಪಿಸಿಎಲ್ ಸಂಸ್ಥೆಯ ಷೇರುಗಳು ಅತಿ ಹೆಚ್ಚು ಲಾಭ ಮಾಡಿವೆ.

ಇನ್ನು, ದೀವಿಸ್ ಲ್ಯಾಬ್‌ನ ಷೇರು ಅತಿ ಹೆಚ್ಚು ಕುಸಿತ ಕಂಡರೆ, ಏಷ್ಯನ್ ಪೇಂಟ್ಸ್, ಸಿಪ್ಲಾ ಮತ್ತು ಸನ್ ಫಾರ್ಮಾಸ್ಯೂಟಿಕಲ್ ಕಂಪನಿಗಳ ಷೇರುಗಳೂ ಕೂಡ ತುಸು ಮೌಲ್ಯ ಕಳೆದುಕೊಂಡಿವೆ.

ಇದು ನಿಫ್ಟಿ 50 ಸೂಚಿಯದ್ದಾದರೆ ನಿಫ್ಟಿಯ ವಿಸ್ತೃತ ಮಾರುಕಟ್ಟೆಯಲ್ಲೂ ಸೋಮವಾರ ಉತ್ತಮ ವಹಿವಾಟು ನಡೆದಿದೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚಿ ಶೇ. 0.81ರಷ್ಟು ಹೆಚ್ಚಳ ಕಂಡು 31,963.60 ಅಂಕಗಳೊಂದಿಗೆ ಸೋಮವಾರದ ದಿನ ಮುಗಿಸಿತು. ಇನ್ನು, ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚಿ ಕೂಡ ಶೇ. 0.83ರಷ್ಟು ಹೆಚ್ಚಳ ಕಂಡು 9,836.30 ಅಂಕಗಳಲ್ಲಿ ಇದೆ.

English summary

Indian Stock Markets Closed On Tuesday, Last Holiday Of The Year

Stock markets of India are closed on November 8th due to the festival of Guru Nanak Jayanthi. Sensex and Nifty had gained in the trading on Monday and ended on positive note.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X