For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್‌ನಲ್ಲಿ ರಫ್ತು ಭಾರೀ ಇಳಿಕೆ; ವ್ಯಾಪಾರ ಅಂತರ ಇನ್ನೂ ಅಧ್ವಾನ

|

ನವದೆಹಲಿ, ನ. 16: ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ ವ್ಯಾಪಾರ ಅಂತರ (ಟ್ರೇಡ್ ಡೆಫಿಸಿಟ್) ಬರೋಬ್ಬರಿ 26.91 ಬಿಲಿಯನ್ ಡಾಲರ್ ಇದೆ. ಅಂದರೆ ಕಳೆದ ತಿಂಗಳು ಭಾರತದ ರಫ್ತು ಮತ್ತು ಆಮದು ನಡುವಿನ ಅಂತರ 2.19 ಲಕ್ಷ ಕೋಟಿ ರೂಪಾಯಿ ಇದೆ. ಇದು ಕೇಂದ್ರ ಸರ್ಕಾರವೇ ನಿನ್ನೆ ನವೆಂಬರ್ 15ರಂದು ಬಿಡುಗಡೆ ಮಾಡಿದ ಮಾಹಿತಿಯಿಂದಲೇ ತಿಳಿದುಬಂದಿದೆ.

 

ಸೆಪ್ಟೆಂಬರ್ ತಿಂಗಳಲ್ಲಿ ಟ್ರೇಡ್ ಡೆಫಿಸಿಟ್ 25.71 ಬಿಲಿಯನ್ ಡಾಲರ್ ಇತ್ತು. ಈಗ ಈ ಪ್ರಮಾಣ 26.91 ಬಿಲಿಯನ್ ಡಾಲರ್ ಆಗಿದೆ. ಸೆಪ್ಟೆಂಬರ್‌ಗಿಂತ ಅಕ್ಟೋಬರ್‌ನಲ್ಲಿ ಟ್ರೇಡ್ ಡೆಫಿಸಿಟ್ 1.2 ಬಿಲಿಯನ್ ಡಾಲರ್‌ನಷ್ಟು ಏರಿಕೆ ಆಗಿದೆ.

ಸ್ವತ್ತು ಮಾರಾಟದಿಂದ ಬರುವ ಲಾಭಕ್ಕೆ ತೆರಿಗೆ; ಮಾರ್ಪಾಡಿಗೆ ಸರ್ಕಾರ ಚಿಂತನೆಸ್ವತ್ತು ಮಾರಾಟದಿಂದ ಬರುವ ಲಾಭಕ್ಕೆ ತೆರಿಗೆ; ಮಾರ್ಪಾಡಿಗೆ ಸರ್ಕಾರ ಚಿಂತನೆ

ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ರಫ್ತು (ಸೇವೆ ಹೊರತುಪಡಿಸಿದ ವಸ್ತುಗಳು) 35.45 ಬಿಲಿಯನ್ ಡಾಲರ್ ಇತ್ತು. ಅಕ್ಟೋಬರ್ ತಿಂಗಳಲ್ಲಿ ರಫ್ತು 29.78 ಬಿಲಿಯನ್ ಡಾಲರ್ ಆಗಿದೆ. ಅಂದರೆ 2.46 ಲಕ್ಷ ಕೋಟಿ ರೂಪಾಯಿಯಷ್ಟು ರಫ್ತು ಆಗಿರುವುದು ತಿಳಿದುಬಂದಿದೆ. ಒಂದು ತಿಂಗಳಲ್ಲಿ ರಫ್ತು ಪ್ರಮಾಣ 5.67 ಬಿಲಿಯನ್ ಡಾಲರ್ (46 ಸಾವಿರ ಕೋಟಿ ರೂಪಾಯಿ) ಕಡಿಮೆ ಆಗಿದೆ. ಇನ್ನು, 2021ರ ಅಕ್ಟೋಬರ್ ತಿಂಗಳಲ್ಲಿ ರಫ್ತು 35.73 ಬಿಲಿಯನ್ ಡಾಲರ್ ಇತ್ತು. ಅದಕ್ಕೆ ಹೋಲಿಸಿದರೂ ಈ ಅಕ್ಟೋಬರ್ ತಿಂಗಳಲ್ಲಿ ರಫ್ತು ಸಾಕಷ್ಟು ಇಳಿದಿದೆ.

20 ತಿಂಗಳಲ್ಲಿ ಇದೇ ಮೊದಲು

20 ತಿಂಗಳಲ್ಲಿ ಇದೇ ಮೊದಲು

ಕಳೆದ 20 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಒಂದು ತಿಂಗಳಲ್ಲಿ ಭಾರತದ ರಫ್ತು 30 ಬಿಲಿಯನ್ ಡಾಲರ್ ಮಟ್ಟಕ್ಕಿಂತ ಕೆಳಗೆ ಇಳಿದಿದೆ ಎನ್ನಲಾಗಿದೆ. ಆದರೆ, ಗಮನಿಸಬೇಕಾದ ಮತ್ತು ಕಳವಳಪಡಬೇಕಾದ ಅಂಶ ಎಂದರೆ ಪೆಟ್ರೋಲಿಯಂ, ಒಡವೆ ಮತ್ತು ಹವಳ ಉದ್ಯಮ ಹೊರತಪಡಿಸಿದ ಪ್ರಮುಖ ರಫ್ತುಗಳು ಶೇ. 17ರಷ್ಟು ಕಡಿಮೆ ಅಗಿವೆ.

ಇನ್ನು, ಆಮದು ಕೂಡ ಇಳಿದಿದೆಯಾದರೂ ರಫ್ತು ಇಳಿದಷ್ಟು ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆಮದು 61.16 ಬಿಲಿಯನ್ ಡಾಲರ್ (4.98 ಲಕ್ಷ ಕೋಟಿ ರೂಪಾಯಿ) ಇತ್ತು. ಈ ಅಕ್ಟೋಬರ್ ತಿಂಗಳಲ್ಲಿ ಅದು 56.69 ಬಿಲಿಯನ್ ಡಾಲರ್ (ಸುಮಾರು 4.62 ಲಕ್ಷ ಕೋಟಿ ರೂಪಾಯಿ) ಮೊತ್ತಕ್ಕೆ ಇಳಿದಿದೆ. ಆಮದು ಇಳಿಯಲು ಜಾಗತಿಕ ವಸ್ತು ಬೆಲೆಗಳು ತುಸು ಇಳಿಕೆಯಾಗಿದ್ದು ಕಾರಣ ಇರಬಹುದು ಎಂಬುದು ಕೆಲ ತಜ್ಞರ ಅನಿಸಿಕೆ.

ಇನ್ನು, ಈ ಹಣಕಾಸು ವರ್ಷದ ಮೊದಲಾರ್ಧದ ಅಂಕಿ ಅಂಶ ಪರಿಗಣಿಸಿದಾಗಲೂ ಹಿಂದಿನ ವರ್ಷದಕ್ಕಿಂತ ಟ್ರೇಡ್ ಡೆಫಿಸಿಟ್ ಹೆಚ್ಚಾಗಿದೆ. 2021ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 94.16 ಬಿಲಿಯನ್ ಡಾಲರ್ ಇದ್ದ ವ್ಯಾಪಾರ ಅಂತರ 2022ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 173.46 ಬಿಲಿಯನ್ ಡಾಲರ್‌ಗೆ ಏರಿರುವುದು ತಿಳಿದುಬಂದಿದೆ.

 ಮತ್ತೆ ಎಂಸಿಎಲ್‌ಆರ್ ಏರಿಸಿದ ಎಸ್‌ಬಿಐ, ಪರಿಣಾಮವೇನು? ಮತ್ತೆ ಎಂಸಿಎಲ್‌ಆರ್ ಏರಿಸಿದ ಎಸ್‌ಬಿಐ, ಪರಿಣಾಮವೇನು?

ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾಲು
 

ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾಲು

ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಮಾಡಿರುವ ಅಂದಾಜಿನ ಪ್ರಕಾರ ಮುಂಬರುವ ದಿನಗಳಲ್ಲಿ ವ್ಯಾಪಾರ ಗಣನೀಯವಾಗಿ ಕುಗ್ಗಬಹುದು. 2022ರಲ್ಲಿ ಜಾಗತಿಕ ವ್ಯಾಪಾರ ಶೇ. 3.5ರಷ್ಟು ಏರುತ್ತದೆಯಾದರೂ 2023ರಲ್ಲಿ ಬೆಳವಣಿಗೆ ದರ ಕೇವಲ ಒಂದು ಪ್ರತಿಶತ ಮಾತ್ರ ಎಂದು ಡಬ್ಲ್ಯೂಟಿಒ ಹೆಳಿದೆ.

ಜಾಗತಿಕ ವ್ಯಾಪಾರ ವಹಿವಾಟಿನಲ್ಲಿ ಭಾರತದ ಪಾಲು ಶೇ.. 1.8ರಷ್ಟಿದೆ. ಜಾಗತಿಕ ಸೇವೆಗಳಲ್ಲಿ ಭಾರತದ ಪಾಲು ಶೇ. 4 ಇದೆ.

"ಬಾಹ್ಯ ಮಾರುಕಟ್ಟೆಗಳಲ್ಲಿ ಬೇಡಿಕೆ ಕಡಿಮೆ ಆಗುತ್ತಿರುವುದು ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಹೊರೆ ಹೆಚ್ಚಿಸಬಹುದು. ವ್ಯಾಪಾರ ಅಂತರ ಹೆಚ್ಚಾಗುತ್ತಿರುವುದರಿಂದ ಭಾರತದ ಜಿಡಿಪಿಗೆ ಸಂಚಕಾರಾಗುವ ಸಾಧ್ಯತೆ ಇದೆ" ಎಂದು ಕೇರ್ ಎಡ್ಜ್ ಸಂಸ್ಥೆಯ ಚೀಫ್ ಎಕನಾಮಿಸ್ಟ್ ರಜನಿ ಸಿನ್ಹಾ ಹೇಳಿದ್ದಾರೆ.

 

ಒಟ್ಟಾರೆ ರಫ್ತು ಹೆಚ್ಚಳ

ಒಟ್ಟಾರೆ ರಫ್ತು ಹೆಚ್ಚಳ

ಸಕಾರಾತ್ಮಕ ಸಂಗತಿ ಎಂದರೆ 2022ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಸರ್ವಿಸ್ ವಲಯ ಸೇರಿ ಒಟ್ಟಾರೆ ರಫ್ತುಗಳು 444.74 ಬಿಲಿಯನ್ ಡಾಲರ್ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಫ್ತು ಶೇ. 19.56ರಷ್ಟು ಹೆಚ್ಚಾಗಿದೆ. ಒಟ್ಟು ರಫ್ತು ಇದೇ ಅವಧಿಯಲ್ಲಿ 543.26 ಬಿಲಿಯನ್ ಡಾಲರ್ ಇದೆ.

ಅಕ್ಟೋಬರ್ ತಿಂಗಳಲ್ಲಿ ಒಟ್ಟು ರಫ್ತು 58.36 ಬಿಲಿಯನ್ ಡಾಲರ್‌ಗೆ ಏರಿದೆ. ಒಟ್ಟು ಆಮದು 73 ಬಿಲಿಯನ್ ಡಾಲರ್ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಫ್ತು ಶೇ. 4.03ರಷ್ಟು ಹೆಚ್ಚಾದರೆ ಆಮದು ಶೇ. 11.82ರಷ್ಟು ಏರಿಕೆ ಆಗಿದೆ.

 

ಕಾರಣಗಳೇನು?

ಕಾರಣಗಳೇನು?

ಒಡವೆ, ಎಂಜಿನಿಯರಿಂಗ್ ಮತ್ತು ಜವಳಿ ಕ್ಷೇತ್ರದ ಸರಕುಗಳ ರಫ್ತು ಬಹಳ ಕಡಿಮೆ ಆಗಿದೆ. ರಾಸಾಯನಿಕ, ಪೆಟ್ರೋಲಿಯಂ ಉತ್ಪನ್ನ, ಫಾರ್ಮಾ, ಲೆದರ್, ಸಾಗರೋತ್ಪನ್ನ ವಸ್ತುಗಳ ರಫ್ತು ಕೂಡ ಈ ಬಾರಿ ತಗ್ಗಿದೆ.

ಇದರ ಜೊತೆಗೆ ಭಾರತದಿಂದ ತೈಲ ಆಮದು ಶೇ. 29.1ರಷ್ಟು ಹೆಚ್ಚಾಗಿದೆ. ಈ ಅಂಶಗಳು ಭಾರತದಲ್ಲಿ ಟ್ರೇಡ್ ಡೆಫಿಸಿಟ್ ಹೆಚ್ಚಲು ಕಾರಣವಾಗಿರುವ ಸಾಧ್ಯತೆ ಇದೆ.

 

English summary

India's October Data; Exports Declines, Trade Deficit Widens, See Details

Indian Export-Import Data in October 2022: India's October merchandise trade deficit widened to $26.91 billion from $25.71 billion in September, according to export and import data released by the government.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X