For Quick Alerts
ALLOW NOTIFICATIONS  
For Daily Alerts

ಇಂಡಿಗೋ ವಿಮಾನಯಾನ ಟಿಕೆಟ್ ದರದಲ್ಲಿ ಆಫರ್: 899 ರು. ಆರಂಭ

|

ಇಂಡಿಗೋ ವಿಮಾನಯಾನ ಸಂಸ್ಥೆ 'ದಿ ಬಿಗ್ ಫ್ಯಾಟ್ ಇಂಡಿಗೋ ಸೇಲ್' ಹೆಸರಿನಲ್ಲಿ ವರ್ಷಾಂತ್ಯದಲ್ಲಿ ಪ್ರಯಾಣಿಕರಿಗೆ ಬಂಪರ್ ಆಫರ್ ನೀಡಿದೆ. ದೇಸಿ ಮತ್ತು ಅಂತಾರಾಷ್ಟ್ರೀಯ ಟಿಕೆಟ್‌ಗಳ ದರದಲ್ಲಿ ಭಾರೀ ರಿಯಾಯಿತಿ ಘೋಷಿಸಿದೆ.

 

2019 ವರ್ಷ ಮುಗಿಯುವ ಹಂತಕ್ಕೆ ಬಂದಿದೆ. ವರ್ಷದ ಕೊನೆಯಲ್ಲಿ ಪ್ರವಾಸ ಮಾಡಬೇಕು ಎಂದು ಯೋಜನೆ ಹಾಕಿಕೊಂಡವರಿಗೆ ಇದು ಸುವರ್ಣಾವಕಾಶ ಅಂದರೆ ತಪ್ಪಾಗಲಾರದು. ಇಂಡಿಗೋದ ದೇಶೀಯ ವಿಮಾನಯಾನ ಪ್ರಯಾಣ ಟಿಕೆಟ್ ದರ 899 ರುಪಾಯಿ ಆಗಿದೆ. ಮತ್ತು ಅಂತರಾಷ್ಟ್ರೀಯ ವಿಮಾನಯಾನ ದರವನ್ನು 2999 ರುಪಾಯಿಗೆ ಇಳಿಸಿದೆ.

ಇಂಡಿಗೋ ವಿಮಾನಯಾನ ಟಿಕೆಟ್ ದರದಲ್ಲಿ ಆಫರ್: 899 ರು. ಆರಂಭ

ಡಿಸೆಂಬರ್ 23 ರಿಂದ ಈ ಆಫರ್‌ಗಳು ಅನ್ವಯವಾಗಲಿದ್ದು, ನಾಲ್ಕು ದಿನಗಳ ಕಾಲ ಈ ಆಫರ್ ಇರಲಿದೆ. ಅಂದರೆ ಡಿಸೆಂಬರ್ 25 ಕ್ರಿಸ್‌ಮಸ್ ದಿನ ಸೇರಿದಂತೆ ಡಿಸೆಂಬರ್ 26ರವರೆಗೆ ಪ್ರಯಾಣಿಕರಿಗೆ ಆಫರ್ ದೊರೆಯಲಿದೆ ಎಂದು ಇಂಡಿಗೋ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಈ ಆಫರ್ ಬಳಸಿಕೊಂಡು ಜನವರಿ 15ರಿಂದ ಏಪ್ರಿಲ್ 15, 2020ರ ಮಧ್ಯೆ ಪ್ರಯಾಣ ಮಾಡಬಹುದು. ಆದರೆ ಡಿಸೆಂಬರ್ 23 ರಿಂದ 26ರ ಒಳಗೆ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಈ ಆಫರ್ ಅನ್ವಯವಾಗುವುದು. ಇನ್ನು ಈ ಆಫರ್‌ನಲ್ಲಿ ಎಷ್ಟು ಸೀಟುಗಳು ಲಭ್ಯವಿದೆ ಎಂಬ ಮಾಹಿತಿಯನ್ನು ಸಂಸ್ಥೆಯು ತಿಳಿಸಿಲ್ಲ

English summary

Indigo Flight Tickets Offer From 899 Rupees

Indigo offer flight tickets for as low as 899 rupees for domestic and 2,999 Rs. For international flights
Story first published: Wednesday, December 25, 2019, 12:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X