For Quick Alerts
ALLOW NOTIFICATIONS  
For Daily Alerts

ಬ್ರಿಟನ್‌ನಲ್ಲಿ 41 ವರ್ಷದ ಗರಿಷ್ಠ ಮಟ್ಟ ಮುಟ್ಟಿದ ಹಣದುಬ್ಬರ

|

ಲಂಡನ್, ನ. 16: ಬ್ರಿಟನ್‌ನ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಶೇ. 11.1ರಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಯುಕೆಯಲ್ಲಿ ಗ್ರಾಹಕ ಬೆಲೆಗಳು 11.1 ಪ್ರತಿಶತ ಹೆಚ್ಚಾಗಿದೆ. ಇದು ಕಳೆದ 41 ವರ್ಷದಲ್ಲಿ ಬ್ರಿಟನ್ ಕಂಡ ಅತಿ ಹೆಚ್ಚು ಹಣದುಬ್ಬರ ದರ ಎನಿಸಿದೆ. 1981ರ ನಂತರ ಇದು ಗರಿಷ್ಠ ಹಣದುಬ್ಬರ.

 

ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 10.1 ಇತ್ತು. ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಶೇ. 10.7 ಆಗಬಹುದು ಎಂಬುದು ಕೆಲ ಆರ್ಥಿಕ ತಜ್ಞರ ಎಣಿಕೆಯಾಗಿತ್ತು. ಆದರೆ, ನಿರೀಕ್ಷೆ ಮೀರಿ ಹಣದುಬ್ಬರ ಶೇ. 11.1 ಮಟ್ಟ ತಲುಪಿದೆ.

 

ಸಾಲಕ್ಕೆ ಆಯ್ಕೆಗಳು; ಬ್ಯಾಂಕ್‌ಗಿಂತ ಎನ್‌ಬಿಎಫ್‌ಸಿ ಉತ್ತಮವಾ?ಸಾಲಕ್ಕೆ ಆಯ್ಕೆಗಳು; ಬ್ಯಾಂಕ್‌ಗಿಂತ ಎನ್‌ಬಿಎಫ್‌ಸಿ ಉತ್ತಮವಾ?

ಬ್ರಿಟನ್‌ನ ಆಫೀಸ್ ಫಾರ್ ನ್ಯಾಷನಲ್ ಸ್ಟಾಟಿಸ್ಟಿಕ್ಸ್ (ಒಎನ್‌ಎಸ್) ಕಚೇರಿಯಿಂದ ಇನ್‌ಫ್ಲೇಷನ್ ಅಂಕಿ ಅಂಶ ಪ್ರಕಟವಾಗಿದೆ. ಒಎನ್‌ಎಸ್ ಅನಿಸಿಕೆ ಪ್ರಕಾರ ಸರ್ಕಾರವೇನಾದರೂ ಗೃಹಬಳಕೆಯ ವಿದ್ಯುತ್ ಬಿಲ್ ಅನ್ನು ವರ್ಷಕ್ಕೆ 2,500 ಪೌಂಡ್‌ಗೆ (2.4 ಲಕ್ಷ ರೂಪಾಯಿ) ಮಿತಿಗೊಳಿಸಲು ಕ್ರಮ ಕೈಗೊಳ್ಳದೇ ಇದ್ದಿದ್ದರೆ ಹಣದುಬ್ಬರ ಶೇ. 13.8 ತಲುಪುತ್ತಿತ್ತು.

 ಬ್ರಿಟನ್‌ನಲ್ಲಿ 41 ವರ್ಷದ ಗರಿಷ್ಠ ಮಟ್ಟ ಮುಟ್ಟಿದ ಹಣದುಬ್ಬರ

ಆಹಾರ ವಸ್ತುಗಳು ಮತ್ತು ಇಂಧನದ ಬೆಲೆ ಈ ಅವಧಿಯಲ್ಲಿ ಅತಿ ಹೆಚ್ಚಳವಾಗಿದೆ. ಈ ಆಹಾರವಸ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಕೆಳಗಿನ ಹಂತದ ಜನರಿಗೆ ಹಣದುಬ್ಬರವು ಹೆಚ್ಚು ಹೆಚ್ಚು ಪೆಟ್ಟುಕೊಟ್ಟಿದೆ. ಹೆಚ್ಚು ಆದಾಯದ ಜನರಿಗೆ ಬೆಲೆ ಏರಿಕೆ ಶೇ. 10.5 ಇದ್ದರೆ ಕಡಿಮೆ ಆದಾಯದ ಜನರಿಗೆ ಶೇ. 11.9 ಹಣದುಬ್ಬರದ ಬಿಸಿ ಇದೆ.

ಷೇರುಪೇಟೆ ಅಲುಗಾಟದ ಮಧ್ಯೆ ಮೇದಾಂತ, ಬಿಕಾಜಿ ಭರ್ಜರಿ ಓಪನಿಂಗ್ಷೇರುಪೇಟೆ ಅಲುಗಾಟದ ಮಧ್ಯೆ ಮೇದಾಂತ, ಬಿಕಾಜಿ ಭರ್ಜರಿ ಓಪನಿಂಗ್

ಮುಂದೇನು?

ಬ್ರಿಟನ್ ದೇಶದ ಆರ್ಥಿಕತೆ ಬಹಳ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಸಿಗುತ್ತಿಲ್ಲದಿರುವುದು ಪ್ರಧಾನಿ ರಿಷಿ ಸುನಕ್ ಮತ್ತು ಹಣಕಾಸು ಸಚಿವ ಜೆರೆಮಿ ಹಂಟ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ನಾಳೆ ಗುರುವಾರ ಹಂಟ್ ಅವರು ಬಜೆಟ್ ಮಂಡಿಸಲಿದ್ದಾರೆ.

 ಬ್ರಿಟನ್‌ನಲ್ಲಿ 41 ವರ್ಷದ ಗರಿಷ್ಠ ಮಟ್ಟ ಮುಟ್ಟಿದ ಹಣದುಬ್ಬರ

ಅಮೆರಿಕದಲ್ಲಿ ಅಲ್ಲಿನ ಫೆಡರಲ್ ರಿಸರ್ವ್ ಬ್ಯಾಂಕ್ ನಿರಂತರವಾಗಿ ಹೆಚ್ಚು ಮಟ್ಟದಲ್ಲಿ ಬಡ್ಡಿ ದರ ಏರಿಸಿ ಹಣದುಬ್ಬರ ದರ ಹೆಚ್ಚಳದ ವೇಗವನ್ನು ತಗ್ಗಿಸಿದ ರೀತಿಯಲ್ಲಿ ಬ್ಯಾಂಕ್ ಅಫ್ ಇಂಗ್ಲೆಂಡ್ ಕೂಡ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಬಡ್ಡಿ ದರ ಏರಿಸದೇ ಬೇರೆ ದಾರಿ ಇಲ್ಲ ಎಂಬುದು ಬಹುತೇಕ ಅರ್ಥಜ್ಞರ ಅಭಿಪ್ರಾಯ. ಹಣದುಬ್ಬರಕ್ಕೆ ಕಡಿವಾಣ ಹಾಕಲು ಸದ್ಯಕ್ಕೆ ಎಲ್ಲರ ಬಳಿ ಇರುವ ಏಕೈಕ ಬ್ರಹ್ಮಾಸ್ತ್ರ ಅದು.

ನಾಳೆಯ ಬಜೆಟ್‌ನಲ್ಲಿ ಹಂಟ್ ಅವರು ಕೆಲವೊಂದಿಷ್ಟು ಬಿಗಿ ಹಣಕಾಸು ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ. ಸರ್ಕಾರದಿಂದ ವಿವಿಧ ವಲಯಗಳಿಗೆ ಸಹಾಯಧನ ಬಿಡುಗಡೆ ಆಗುವುದು ನಿಲ್ಲಬಹುದು. ವಿವಿಧ ತೆರಿಗೆಗಳನ್ನು ಏರಿಸಬಹುದು. ಬಡ್ಡಿ ದರ ಹೆಚ್ಚಿಸುವುದನ್ನು ಮುಂದುವರಿಸುವಂತೆ ಬ್ಯಾಂಕ್ ಆಫ್ ಇಂಗ್ಲೆಂಡ್ ಮೇಲೆ ಹಂಟ್ ಒತ್ತಡ ಹೇರಬಹುದು ಎಂದು ಹೇಳಲಾಗುತ್ತಿದೆ.

English summary

Inflation In Britain Raises To Highest Since 1981 Year

UK has seen biggest rise in inflation rate since 1981. Inflation in October is 11.1%, compared to 10.1 in September. Raise in Food prices and household energy bills reason for latest inflation level.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X