For Quick Alerts
ALLOW NOTIFICATIONS  
For Daily Alerts

ಕೊರೊನಾದ ಆರ್ಥಿಕ ಬಿಕ್ಕಟ್ಟಿಗೆ ಇನ್ಫಿ ನಾರಾಯಣ ಮೂರ್ತಿ ಪರಿಹಾರ ಏನು ಗೊತ್ತಾ?

|

ಭಾರತದ ಜಿಡಿಪಿ ಬೆಳವಣಿಗೆ ದರವು ಸ್ವಾತಂತ್ರ್ಯಾ ನಂತರದಲ್ಲೇ (1947) ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಬಹುದು ಎಂಬ ಆತಂಕವನ್ನು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ವ್ಯಕ್ತಪಡಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಭಾರತದ ಆರ್ಥಿಕತೆಗೆ ಸಮಸ್ಯೆಗಳು ಮುಂದುವರಿಯಲಿವೆ ಎಂದು ಹೇಳಿದ್ದಾರೆ.

ಸುದೀರ್ಘ ಲಾಕ್‌ಡೌನ್ ಆದರೆ ಕೊರೊನಾಗಿಂತ ಹೆಚ್ಚಿನ ಜನರು ಹಸಿವಿನಿಂದ ಸಾಯುತ್ತಾರೆ: N.R.Nಸುದೀರ್ಘ ಲಾಕ್‌ಡೌನ್ ಆದರೆ ಕೊರೊನಾಗಿಂತ ಹೆಚ್ಚಿನ ಜನರು ಹಸಿವಿನಿಂದ ಸಾಯುತ್ತಾರೆ: N.R.N

ಇದನ್ನು ತಡೆಯಬೇಕು ಎಂದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಉಪಾಯವೊಂದನ್ನು ಸಹ ಹೇಳಿದ್ದಾರೆ. ಎನ್ ಆರ್ ಎನ್ ಪ್ರಕಾರ, ಎಲ್ಲ ವಲಯಗಳಲ್ಲಿನ ಪ್ರತಿಯೊಂದು ಸಂಸ್ಥೆಯೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವಂತೆ ಸರ್ಕಾರವು ಹೊಸ ಯೋಜನೆಯನ್ನು ರೂಪಿಸಬೇಕು. ಅದಕ್ಕೆ ಅಗತ್ಯ ಇರುವ ಎಲ್ಲ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಕೊರೊನಾದ ಆರ್ಥಿಕ ಬಿಕ್ಕಟ್ಟಿಗೆ ಇನ್ಫಿ ನಾರಾಯಣ ಮೂರ್ತಿ ಪರಿಹಾರ ಏನು?

ಲಸಿಕೆ ಮತ್ತು ಪರಿಹಾರ ಇಲ್ಲದ ಸನ್ನಿವೇಶದಲ್ಲಿ ಜನರು ಕೊರೊನಾದ ಜತೆಗೇ ಬದುಕಬೇಕು. ಆರ್ಥಿಕ ಚಟುವಟಿಕೆಗಳನ್ನಂತೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಚರ್ಚೆಯೊಂದರಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದ ಅವರು, ಆರ್ಥಿಕ ಪ್ರಗತಿಯ ಹಳಿ ತಪ್ಪಿರುವುದು ಭಾರತದಲ್ಲಿ ಮಾತ್ರ ಅಲ್ಲ. ಜಾಗತಿಕ ಮಟ್ಟದಲ್ಲೇ ವಾಣಿಜ್ಯ ಚಟುವಟಿಕೆಗಳು ಕುಗ್ಗಿವೆ. ಜಾಗತಿಕ ಪ್ರವಾಸೋದ್ಯಮ ಕಣ್ಮರೆಯಾಗಿದೆ. ಇನ್ನು ಜಾಗತಿಕ ಜಿಡಿಪಿ 5ರಿಂದ 10% ಕುಗ್ಗಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

English summary

Infosys Co Founder Narayana Murthy Advice To Government To Come Out of Economic Crisis

Infosys co founder N.R. Narayana Murthy advice to central government to come out economic crisis caused by corona pandemic.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X