For Quick Alerts
ALLOW NOTIFICATIONS  
For Daily Alerts

25,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಇನ್ಫೋಸಿಸ್

|

ಕೊರೊನಾವೈರಸ್ ಆತಂಕದ ನಡುವೆ ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್, 2021-22ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 25,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಎಂದು ಪ್ರಕಟಿಸಿದೆ.

 

ಇನ್ಫೋಸಿಸ್ ಷೇರುದಾರರಿಗೆ ಬಂಪರ್ ಅವಕಾಶ: ಕೆಲವೇ ದಿನಗಳಲ್ಲಿ ಉತ್ತಮ ಲಾಭ!

ಮಾರ್ಚ್ 31, 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಇನ್ಫೋಸಿಸ್ 5,076 ಕೋಟಿ ರೂ. ಲಾಭಗಳಿಸಿದೆ. ಆದರೆ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಇದರ ಲಾಭವು ಶೇಕಡಾ 2.3 ರಷ್ಟು ಕುಸಿಯಿತು.

25,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಇನ್ಫೋಸಿಸ್

ಇನ್ಫೋಸಿಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಲೀಲ್ ಪರೇಖ್ ಅವರು ಸಂಬಳ ಏರಿಕೆ ಸುದ್ದಿಯನ್ನು ಖಚಿತಪಡಿಸಿದ್ದು, ಇದರ ನಡುವೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ನೇಮಕಾತಿ ಕುರಿತು ತಿಳಿಸಿದ್ದಾರೆ ಮತ್ತು ಕ್ಯಾಂಪಸ್ ಸೆಲೆಕ್ಷನ್ ಮೂಲಕ 25,000 ಹೊಸ ಉದ್ಯೋಗಿಗಳನ್ನು ಇನ್ಫೋಸಿಸ್ ನೇಮಕ ಮಾಡಿಕೊಳ್ಳಲಿದೆ.

2020-21ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್‌ 21,000 ಫ್ರೆಶರ್ಸ್ ನೇಮಕ ಮಾಡಿಕೊಂಡಿತ್ತು ಹಾಗೂ ಇದರಲ್ಲಿ 19,000 ಭಾರತೀಯರಾಗಿದ್ದಾರೆ. ಆದ್ರೆ ಈ ವರ್ಷ 25,000 ಹೊಸ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ 24,000 ಜನರು ಭಾರತದಿಂದಲೇ ಆಯ್ಕೆ ಮಾಡಲಾಗುವುದು ಮತ್ತು 1,000 ವಿದೇಶಿ ಉದ್ಯೋದಿಗಳ ನೇಮಕಾತಿಯಾಗಲಿದೆ.

ಇನ್ಫೋಸಿಸ್ ಮಾರ್ಚ್‌ 31, 2021ರ ಕೊನೆಗೆ ಒಟ್ಟಾರೆಯಾಗಿ 2,59,619 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ ಶೇಕಡಾ 38.6ರಷ್ಟು ಮಹಿಳೆಯರಿದ್ದಾರೆ.

English summary

Infosys to Hire 25,000 From Campus In FY22

For FY22 the company will give offer letter to around 24,000 freshers and 1,000 will be hired through overseas campuses.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X