5 ಲಕ್ಷ ಕೋಟಿ ರುಪಾಯಿ ಮಾರುಕಟ್ಟೆ ಬಂಡವಾಳ ಮೌಲ್ಯ ದಾಟಿದ ಭಾರತದ ಐದನೇ ಕಂಪೆನಿ ಎಂಬ ಶ್ರೇಯಕ್ಕೆ ಗುರುವಾರ (ಅಕ್ಟೋಬರ್ 15, 2020) ಬೆಂಗಳೂರು ಮೂಲದ ಇನ್ಫೋಸಿಸ್ ಲಿಮಿಟೆಡ್ ಪಾತ್ರವಾಗಿದೆ. ಈ ವರ್ಷ ಇಲ್ಲಿಯ ತನಕ ಷೇರಿನ ಬೆಲೆಯಲ್ಲಿ 61% ಹೆಚ್ಚಳ ಆಗಿದೆ. ದೇಶದಲ್ಲಿ ಈ ಸಾಧನೆ ಮಾಡಿದ ಎರಡನೇ ಐ.ಟಿ. ಕಂಪೆನಿ ಇನ್ಫೋಸಿಸ್.
ಬಿಎಸ್ ಇ ಸೂಚ್ಯಂಕದಲ್ಲಿ ಗುರುವಾರ ಪ್ರತಿ ಷೇರಿನ ಬೆಲೆ 1,185 ರುಪಾಯಿ ಮುಟ್ಟುವ ಮೂಲಕ ಇನ್ಫೋಸಿಸ್ ಹೊಸ ದಾಖಲೆ ಬರೆಯಿತು. ಹಿಂದಿನ ದಿನಕ್ಕಿಂತ ಷೇರಿನ ಬೆಲೆಯಲ್ಲಿ 4.3% ಹೆಚ್ಚಳವಾಯಿತು. ಆ ಮೂಲಕ ಮಾರುಕಟ್ಟೆ ಬಂಡವಾಳ ಮೌಲ್ಯವು 5.04 ಲಕ್ಷ ಕೋಟಿ ಆಯಿತು.

ಇದಕ್ಕೂ ಮುನ್ನ ಬುಧವಾರದಂದು ಬಂದ ಇನ್ಫೋಸಿಸ್ ನ ಸೆಪ್ಟೆಂಬರ್ ತ್ರೈಮಾಸಿಕದ ಫಲಿತಾಂಶ ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮವಾಗಿತ್ತು. ಸದ್ಯಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅತ್ಯಂತ ಮೌಲ್ಯಯುತ ಕಂಪೆನಿ. ಅದರ ಮಾರುಕಟ್ಟೆ ಬಂಡವಾಳ ಮೌಲ್ಯ 15.43 ಲಕ್ಷ ಕೋಟಿ ರುಪಾಯಿ ಇದೆ. ನಂತರದ ಸ್ಥಾನಗಳಲ್ಲಿ ಟಿಸಿಎಸ್ 10.42 ಲಕ್ಷ ಕೋಟಿ ರುಪಾಯಿ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ 6.62 ಲಕ್ಷ ಕೋಟಿ ರುಪಾಯಿ ಇದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications