For Quick Alerts
ALLOW NOTIFICATIONS  
For Daily Alerts

ಇಡೀ ದೇಶವೇ ಕೊರೊನಾ ಅಂತಿದ್ರೂ, ಲಕ್ಷಾಂತರ ಕೋಟಿ ರೂ. ಹೂಡಿಕೆ ಆಕರ್ಷಿಸಿದ ಮುಕೇಶ್ ಅಂಬಾನಿ

|

ನವದೆಹಲಿ, ಡಿಸೆಂಬರ್ 12: ಈ ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಇಡೀ ದೇಶವೇ ತತ್ತರಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ದೇಶದ ಅನೇಕ ಕ್ಷೇತ್ರಗಳು ಕೊರೊನಾದಿಂದ ಸಾಕಷ್ಟು ನಷ್ಟ ಅನುಭವಿಸಿವೆ. ಕೆಲವು ಉದ್ಯಮಗಳು ಲಾಕ್‌ಡೌನ್‌ ವೇಳೆ ಶೂನ್ಯ ಉತ್ಪಾದನೆಯನ್ನು ಕೂಡ ದಾಖಲಿಸಿವೆ.

ಜಗತ್ತಿನಲ್ಲಿ ಕೊರೊನಾ ಪರಿಣಾಮದಿಂದ ಕೋಟ್ಯಾಂತದ ಉದ್ಯೋಗ ನಷ್ಟ, ಕಂಪನಿಗಳಿಗೆ ಆರ್ಥಿಕ ನಷ್ಟ ಹೀಗೆಲ್ಲ ಸುದ್ದಿಯನ್ನು ಕೇಳಿದ್ದೀರಿ. ಇದರ ಜೊತೆಗೆ 2020ರಲ್ಲಿ ಭಾರತದ ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕಡೆಗೆ ಇಡೀ ಜಗತ್ತೇ ಹುಬ್ಬೇರಿಸಿ ನೋಡಿತು. ಇದಕ್ಕೆ ಕಾರಣ ಆರ್‌ಐಎಲ್ ಒಡೆತನದ ಜಿಯೋ ಪ್ಲಾಟ್‌ಫಾರ್ಮ್‌ ಕಡೆಗೆ ಹರಿದು ಬಂದ ಲಕ್ಷಾಂತರ ಕೋಟಿ ರೂಪಾಯಿ ಹಣ.

ಫ್ಯೂಚರ್ ಜೊತೆ ಡೀಲ್, ಮಧ್ಯಂತರ ಆದೇಶದ ಬಗ್ಗೆ RIL ಪ್ರತಿಕ್ರಿಯೆ

ಜಿಯೋದಲ್ಲಿ ಹಣ ಹೂಡಿಕೆಗೆ ಮುಗಿಬಿದ್ದ ಕಂಪನಿಗಳು
 

ಜಿಯೋದಲ್ಲಿ ಹಣ ಹೂಡಿಕೆಗೆ ಮುಗಿಬಿದ್ದ ಕಂಪನಿಗಳು

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡಲು ವಿಶ್ವದ ಅನೇಕ ಕಂಪನಿಗಳು ನಾ ಮುಂದು, ತಾ ಮುಂದು ಈ ವರ್ಷ ಮುಗಿಬಿದ್ದವು. ಮುಕೇಶ್ ಅಂಬಾನಿ ಒಡೆತನದ ಆರ್‌ಐಎಲ್‌ನಲ್ಲಿ ಏಪ್ರಿಲ್ 22, 2020ರಿಂದ ಪ್ರಾರಂಭವಾದ ಹೂಡಿಕೆಯು ನಿರಂತರವಾಗಿ ಸಾಗಿ ಲಕ್ಷ ಕೋಟಿಯನ್ನೇ ದಾಟಿ ಬಿಟ್ಟಿತು.

ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಹತ್ತಾರು ಕಂಪನಿಗಳಿಂದ ಹೂಡಿಕೆ

ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಹತ್ತಾರು ಕಂಪನಿಗಳಿಂದ ಹೂಡಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೋ ಪ್ಲಾಟ್‌ಫಾರ್ಮ್ ಕೇವಲ 11 ವಾರಗಳಲ್ಲಿ ವಿಶ್ವದ ಬೃಹತ್ ಕಂಪನಿಗಳಿಂದ ಹೂಡಿಕೆಯನ್ನು ಪಡೆಯಿತು. ಫೇಸ್​ಬುಕ್, ಸಿಲ್ವರ್ ಲೇಕ್ ಪಾರ್ಟ್ನರ್ಸ್, ಕೆಕೆಆರ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್, ಇಂಟೆಲ್ ಮೊದಲಾದ ಸಂಸ್ಥೆಗಳು ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಹೂಡಿಕೆ ಮಾಡಿವೆ. ಈ 13 ಒಪ್ಪಂದಗಳಿಂದಲೇ ಜಿಯೋಗೆ 1,18,318.45 ಕೋಟಿ ರೂಪಾಯಿ ಹರಿದುಬಂತು. ಅಂತಿಮವಾಗಿ ಜಿಯೋಗೆ ಗೂಗಲ್‌ನಿಂದ 33,737 ಕೋಟಿ ಹರಿವಿನಿಂದ ಒಟ್ಟಾರೆಯಾಗಿ 1.52ಲಕ್ಷ ಕೋಟಿ (20 ಬಿಲಿಯನ್ ಡಾಲರ್) ಆಕರ್ಷಿಸಿದೆ.

ಏಷ್ಯಾದ ಶ್ರೀಮಂತ ಕುಟುಂಬಕ್ಕೆ ಹೊಸ ಸದಸ್ಯನ ಎಂಟ್ರಿ: ಗಂಡು ಮಗುವಿನ ತಂದೆಯಾದ ಆಕಾಶ್ ಅಂಬಾನಿ

ಜಿಯೋ ವೇದಿಕೆಯಲ್ಲಿ ಯಾವ ಕಂಪನಿ ಎಷ್ಟು ಹಣ ಹೂಡಿದೆ? ಎಷ್ಟು ಪಾಲು?
 

ಜಿಯೋ ವೇದಿಕೆಯಲ್ಲಿ ಯಾವ ಕಂಪನಿ ಎಷ್ಟು ಹಣ ಹೂಡಿದೆ? ಎಷ್ಟು ಪಾಲು?

1) ಫೇಸ್‌ಬುಕ್ 43,573.62 ಕೋಟಿ ರೂಪಾಯಿ (9.99%)

2)ಸಿಲ್ವರ್ ಲೇಕ್‌ 5,655.75 ಕೋಟಿ ರೂಪಾಯಿ (1.15%)

3) ವಿಸ್ಟಾ 11,367 ಕೋಟಿ ರೂಪಾಯಿ (2.32%)

4) ಜನರಲ್ ಅಟ್ಲಾಂಟಿಕ್ 6,598.38 ಕೋಟಿ ರೂಪಾಯಿ (1.34%)

5) ಕೆಕೆಆರ್ 11,367 ಕೋಟಿ ರೂಪಾಯಿ (2.32%)

6) ಮುಬದಲಾ 9,093 ಕೋಟಿ ರೂಪಾಯಿ (1.85%)

7) ಸಿಲ್ವರ್ ಲೇಕ್ 4,546 ಕೋಟಿ ರೂಪಾಯಿ (0.93%)

8) ಎಡಿಐಎ 5,683.50 ಕೋಟಿ ರೂಪಾಯಿ (1.16%)

9) ಟಿಪಿಜಿ 4,546.80 ಕೋಟಿ ರೂಪಾಯಿ (0.93%)

10) ಎಲ್‌. ಕ್ಯಾಟರ್‌ಟನ್ 1,894.50 ಕೋಟಿ ರೂಪಾಯಿ (0.39%)

11) ಪಿಐಎಫ್‌ 11,367 ಕೋಟಿ ರೂಪಾಯಿ (2.32%)

12) ಇಂಟೆಲ್ 1,894.50 ಕೋಟಿ ರೂಪಾಯಿ (0.39%)

13) ಕ್ವಾಲ್‌ಕಂ 730 ಕೋಟಿ ರೂಪಾಯಿ (0.15%)

14) ಗೂಗಲ್ 33,737 ಕೋಟಿ ರೂಪಾಯಿ (7.73%)

ರಿಲಯನ್ಸ್ ರಿಟೇಲ್‌ನಲ್ಲೂ ಭರ್ಜರಿ ವಿದೇಶಿ ಹೂಡಿಕೆ

ರಿಲಯನ್ಸ್ ರಿಟೇಲ್‌ನಲ್ಲೂ ಭರ್ಜರಿ ವಿದೇಶಿ ಹೂಡಿಕೆ

ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಲಕ್ಷಾಂತರ ಕೋಟಿ ವಿದೇಶಿ ಹೂಡಿಕೆ ಜೊತೆಗೆ ಆರ್ಐಎಲ್ ಒಡೆತನದ ರಿಲಯನ್ಸ್ ರಿಟೇಲ್ ರಿಟೇಲ್‌ ವೆಂಚರ್ಸ್ ಲಿಮಿಟೆಡ್ (ಆರ್ಆರ್‌ವಿಎಲ್‌) ನಲ್ಲೂ ಸಾಕಷ್ಟು ಹೂಡಿಕೆ ದಾಖಲಾಯಿತು.

ಸಿಲ್ವರ್ ಲೇಕ್, ಕೆಕೆಆರ್, ಜನರಲ್ ಅಟ್ಲಾಂಟಿಕ್, ಮುಬಡಾಲಾ, ಜಿಐಸಿ, ಟಿಪಿಜಿ ಮತ್ತು ಎಡಿಐಎ ಸೇರಿದಂತೆ ನಾಲ್ಕು ವಾರಗಳಲ್ಲಿ ರಿಲಯನ್ಸ್ ರಿಟೇಲ್ ಜಾಗತಿಕವಾಗಿ ಬಲಿಷ್ಠ ಕಂಪನಿಗಳಿಂದ ಹೂಡಿಕೆಯನ್ನು ಪಡೆದಿದೆ. ಆರ್‌ಆರ್‌ವಿಎಲ್ 10.09% ಪಾಲುಗಳ ಮಾರಾಟಕ್ಕೆ 47,265 ಕೋಟಿ ರೂಪಾಯಿ ನಿಧಿ ಸಂಗ್ರಹಿಸಿದೆ.

RRVLನಲ್ಲಿ ಯಾವ ಕಂಪನಿ ಎಷ್ಟು ಹಣ ಹೂಡಿಕೆ ಮಾಡಿವೆ? ಎಷ್ಟು ಪಾಲು?

RRVLನಲ್ಲಿ ಯಾವ ಕಂಪನಿ ಎಷ್ಟು ಹಣ ಹೂಡಿಕೆ ಮಾಡಿವೆ? ಎಷ್ಟು ಪಾಲು?

1) ಸಿಲ್ವರ್ ಲೇಕ್‌ ಪಾರ್ಟ್‌ನರ್ಸ್‌ 7,500 ಕೋಟಿ ರೂಪಾಯಿ (1.60%)

2) ಸಿಲ್ವರ್ ಲೇಕ್ ಪಾರ್ಟ್‌ನರ್ಸ್ ಕೋ ಇನ್ವೆಸ್ಟರ್ಸ್ 1,875 ಕೋಟಿ ರೂಪಾಯಿ (0.40%)

3) ಕೆಕೆಆರ್ 5,550 ಕೋಟಿ ರೂಪಾಯಿ (1.19%)

4) ಮುಬದಲಾ 6,247.50 ಕೋಟಿ ರೂಪಾಯಿ (1.33%)

5) ಎಡಿಐಎ 5,512.50 ಕೋಟಿ ರೂಪಾಯಿ (1.18%)

6) ಜಿಐಸಿ 5,512.50 ಕೋಟಿ ರೂಪಾಯಿ (1.18%)

7) ಟಿಪಿಜಿ 1,837.50 ಕೋಟಿ ರೂಪಾಯಿ (0.39%)

8) ಜನರಲ್ ಅಟ್ಲಾಂಟಿಕ್ 3,675 ಕೋಟಿ ರೂಪಾಯಿ (0.78%)

9) ಪಿಐಎಫ್‌ 9,555 ಕೋಟಿ ರೂಪಾಯಿ (2.04%)

ಒಟ್ಟು 47,265 ಕೋಟಿ ರೂಪಾಯಿ (10.09%)

English summary

Investments In Jio Platforms: Worth Rs 1.52 Lakh Crore

Reliance Arm Jio platforms attracted worth Rs 1.52 lakh crore investment from many big companies in 2020. Know more
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X