For Quick Alerts
ALLOW NOTIFICATIONS  
For Daily Alerts

ಚಿನ್ನ 10 ಗ್ರಾಮ್ ಗೆ 41,000, ಪೆಟ್ರೋಲ್ ಬ್ಯಾರೆಲ್ ಗೆ 70 ಡಾಲರ್, ಒಂದು ಡಾಲರ್ ಗೆ 72.04 ರುಪಾಯಿ

|

ಇರಾನ್ ಅಮೆರಿಕಾ ನಡುವಿನ ಯುದ್ಧಭೀತಿಯ ವಾತಾವರಣವು ಅಂತರಾಷ್ಟ್ರೀಯ ಮಾರು ಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಇರಾಕ್‌ನ ಬಾಗ್ದಾದ್‌ನಲ್ಲಿ ಇರಾನ್ ಸೇನಾಧಿಕಾರಿಯನ್ನು ಅಮೆರಿಕಾ ಹತ್ಯೆಗೈದ ಬಳಿಕ ಉಭಯ ರಾಷ್ಟ್ರಗಳಲ್ಲಿ ಯುದ್ಧಭೀತಿ ನಿರ್ಮಾಣಗೊಂಡಿದೆ. ಇಷ್ಟಲ್ಲದೆ ಮಧ್ಯಪ್ರಾಚ್ಯದಲ್ಲಿ ಕಚ್ಛಾ ತೈಲ ಬೆಲೆ ಮೇಲೆ ಪರಿಣಾಮ ಬೀರಿದ್ದು, ಪೆಟ್ರೋಲ್-ಡೀಸೆಲ್, ಚಿನ್ನ-ಬೆಳ್ಳಿ ದರ ಏರಿಕೆಯಾಗಿದ್ದು, ಡಾಲರ್ ಎದುರು ರುಪಾಯಿ ಮೌಲ್ಯವು ಕುಸಿದಿದೆ.

 

ಡಾಲರ್ ಎದುರು ರುಪಾಯಿ 24 ಪೈಸೆ ಕುಸಿತ

ಡಾಲರ್ ಎದುರು ರುಪಾಯಿ 24 ಪೈಸೆ ಕುಸಿತ

ಡಾಲರ್ ಎದುರು ರುಪಾಯಿ ಬೆಲೆಯು ಸೋಮವಾರ 24 ಪೈಸೆ ಕುಸಿತ ಕಂಡಿದೆ. ಮಧ್ಯಪ್ರಾಚ್ಯದಲ್ಲಿ ತಲೆದೂರಿರುವ ಯುದ್ಧಭೀತಿಯಿಂದಾಗಿ ಕಚ್ಛಾ ತೈಲ ಬೆಲೆಯ ಏರಿಕೆಯ ಹಿನ್ನೆಲೆಯಲ್ಲಿ ಡಾಲರ್ ಎದುರು ರುಪಾಯಿ 24 ಪೈಸೆ ನಷ್ಟ ಕಂಡು ಪ್ರತಿ ಡಾಲರ್‌ಗೆ 72.04 ರುಪಾಯಿಗೆ ತಲುಪಿದೆ. ಡಾಲರ್ ಬೆಲೆಯಲ್ಲಿ ಶುಕ್ರವಾರ 21 ಪೈಸೆ ನಷ್ಟವಾಗಿ ಪ್ರತಿ ಡಾಲರ್‌ಗೆ 71.80 ರುಪಾಯಿಗೆ ತಲುಪಿತ್ತು.

ಸೆನ್ಸೆಕ್ಸ್ 650 ಅಂಶಗಳು ಕುಸಿತ

ಸೆನ್ಸೆಕ್ಸ್ 650 ಅಂಶಗಳು ಕುಸಿತ

ಸೋಮವಾರ ಷೇರುಪೇಟೆಯು ಭಾರೀ ಕುಸಿತ ಕಂಡಿದೆ. ಮುಂಬೈ ಷೇರು ಮಾರುಕಟ್ಟೆ (ಬಿಎಸ್ಐ) 650 ಅಂಶಗಳ ಕುಸಿತ ಕಂಡಿದ್ದು, 40,814.94 ಅಂಶಗಳಿಗೆ ಮುಟ್ಟಿದೆ. ಇನ್ನು ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಕೂಡ 1.6 ಪರ್ಸೆಂಟ್ ಇಳಿಕೆ ಕಂಡಿದ್ದು, 195.20 ಅಂಶಗಳು ಇಳಿಕೆ ದಾಖಲಿಸಿದೆ. 12,031.50 ಅಂಶಗಳಿಗೆ ತಲುಪಿದೆ.

ಸೋಮವಾರ ಬೆಳಗ್ಗೆ ಸೆನ್ಸೆಕ್ಸ್‌ನಲ್ಲಿ ಬಜಾಜ್ ಫೈನಾನ್ಸ್, ಎಸ್‌ಬಿಐ, ಮಾರುತಿ ಸುಜುಕಿ, ಇಂಡಸ್‌ಲ್ಯಾಂಡ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಅತಿ ಹೆಚ್ಚು ನಷ್ಟಕ್ಕೊಳಗಾದ ಷೇರುಗಳಾಗಿವೆ. ಇನ್ನು ನಿಫ್ಟಿಯಲ್ಲಿ ಬಜಾಜ್ ಫೈನಾನ್ಸ್, ಕೋಲ್ ಇಂಡಿಯಾ, ಎಸ್‌ಬಿಐ, ಜೀ ಎಂಟರ್‌ಟೈನ್‌ಮೆಂಟ್, ಯೆಸ್‌ ಬ್ಯಾಂಕ್ ಷೇರುಗಳು ಕುಸಿದಿವೆ.

 

41,000 ಗಡಿ ದಾಟಿದ ಚಿನ್ನದ ಬೆಲೆ
 

41,000 ಗಡಿ ದಾಟಿದ ಚಿನ್ನದ ಬೆಲೆ

ಇರಾನ್ ಅಮೆರಿಕಾ ನಡುವಿನ ಸಂಘರ್ಷವು ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆಯು ಕಳೆದ 2 ದಿನದಲ್ಲಿ 1,700 ರುಪಾಯಿ ಹೆಚ್ಚಾಗಿದೆ. ಶುಕ್ರವಾರ 10 ಗ್ರಾಂ ಚಿನ್ನದ ಬೆಲೆಯು 850 ರುಪಾಯಿ ಏರಿಕೆ ಕಂಡಿದ್ದು, ಇಂದು 918 ರುಪಾಯಿ ಏರಿದೆ. ಮಾರುಕಟ್ಟೆಯ ದರದಂತೆ 24 ಕ್ಯಾರೆಟ್ ಚಿನ್ನವು 10 ಗ್ರಾಂಗೆ 41,780 ರುಪಾಯಿ ಮುಟ್ಟಿದೆ. ಬೆಳ್ಳಿಯ ಬೆಲೆ ಕೂಡ ಹೆಚ್ಚಿದೆ. ಒಂದು ಕಿಲೋ ಬೆಳ್ಳಿ ಈಗ 51,000 ರೂಪಾಯಿ ಬೆಲೆಗೆ ಏರಿದೆ.

ಕಳೆದ 6 ವರ್ಷಗಳಲ್ಲಿ ಇದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಆತಂಕ ಮೂಡಿಸಿದೆ.

 

ಕಚ್ಚಾ ತೈಲದಲ್ಲಿ ಏರಿಕೆ, ಪೆಟ್ರೋಲ್ ಬ್ಯಾರೆಲ್‌ಗೆ 70 ಡಾಲರ್

ಕಚ್ಚಾ ತೈಲದಲ್ಲಿ ಏರಿಕೆ, ಪೆಟ್ರೋಲ್ ಬ್ಯಾರೆಲ್‌ಗೆ 70 ಡಾಲರ್

ಇರಾನ್‌ -ಅಮೆರಿಕ ಮೇಲೆ ದಾಳಿ ನಡೆದ ಒಂದೇ ದಿನ ಕಚ್ಚಾತೈಲ ಬೆಲೆ 4 ಪರ್ಸೆಂಟ್ ಏರಿಕೆ ಕಂಡಿತ್ತು. ಅಂದಿನಿಂದ ಪೆಟ್ರೋಲ್ ಬೆಲೆ ಏರುಮುಖವಾಗಿ ಮುಂದುವರಿದಿದೆ. ಪ್ರಸ್ತುತ ಬ್ಯಾರೆಲ್‌ ತೈಲ ದರ ಬ್ಯಾರೆಲ್‌ಗೆ 70 ಡಾಲರ್‌ಗೆ ತಲುಪಿದೆ. ಇಂದು ಪೆಟ್ರೋಲ್ ದರವು 78 ರುಪಾಯಿ ದಾಟಿ ಹೋಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 78.22 ರುಪಾಯಿ, ಡೀಸೆಲ್ ದರವು ಪ್ರತಿ ಲೀಟರ್‌ಗೆ 70.97 ರುಪಾಯಿ ಯಷ್ಟಿದೆ.

ಸತತ 5ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆಸತತ 5ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ

English summary

Iran America War Effect, Petrol, Gold Price high

Gold and crude oil prices continue to trend higher hitting multi months high amid increased geo political tensions in Middle East
Story first published: Monday, January 6, 2020, 13:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X