For Quick Alerts
ALLOW NOTIFICATIONS  
For Daily Alerts

ತೆರಿಗೆದಾರರ ಸಹಾಯಕ್ಕಾಗಿ ಇ-ಕ್ಯಾಲೆಂಡರ್ ವಿನ್ಯಾಸಗೊಳಿಸಿದ ಐಟಿ

|

ಆದಾಯ ತೆರಿಗೆ ಇಲಾಖೆಯು ಐಟಿಆರ್ ಫೈಲಿಂಗ್‌ಗೆ ಸಂಬಂಧಪಟ್ಟಂತೆ 2020ಕ್ಕೆ ಹೊಸ ಕ್ಯಾಲೆಂಡರ್ ಸಾಧನವನ್ನು ವಿನ್ಯಾಸಗೊಳಿಸಿದೆ. ಇದರಲ್ಲಿ ತೆರಿಗೆಗೆ ಸಂಬಂಧಪಟ್ಟ ಎಲ್ಲಾ ಗಡುವುಗಳನ್ನು ಪಟ್ಟಿ ಮಾಡಿದ್ದು, ತೆರಿಗೆದಾರರು ತಮ್ಮ ಆದಾಯ ತೆರಿಗೆಯನ್ನು ಸುಲಭವಾಗಿ ಪಾವತಿಸಲು ಸಹಾಯ ಮಾಡುತ್ತದೆ.

''ನಿಮಗಾಗಿ ಪ್ರಮುಖ ದಿನಾಂಕಗಳನ್ನು ಹೊಂದಿರುವ ಕ್ಯಾಲೆಂಡರ್ ಇಲ್ಲಿದೆ, ಇದರಿಂದ ನೀವು ಕಳೆದುಕೊಳ್ಳಬೇಕಾಗಿರುವುದು ಏನು ಇಲ್ಲ. ಇದು ನಿಮ್ಮ ಫೈಲಿಂಗ್ ಜರ್ನಿಯನ್ನು ಸುಲಭಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ'' ಎಂದು ತೆರಿಗೆದಾರರಿಗೆ ಕಳುಹಿಸಿದ ಇ-ಮೇಲ್‌ನಲ್ಲಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ತೆರಿಗೆದಾರರ ಸಹಾಯಕ್ಕಾಗಿ ಇ-ಕ್ಯಾಲೆಂಡರ್ ವಿನ್ಯಾಸಗೊಳಿಸಿದ ಐಟಿ

'ಫಿಲ್ ಇಟ್ ಯುವರ್‌ಸೆಲ್ಫ್' ಹೆಸರಿನಲ್ಲಿ ಕ್ಯಾಲೆಂಡರ್ ವಿನ್ಯಾಸಗೊಳಿಸಲಾಗಿದ್ದು, ಇ-ಕ್ಯಾಲೆಂಡರ್ ನಿಮ್ಮ ಐಟಿಆರ್ ಫೈಲಿಂಗ್ ಜರ್ನಿಯನ್ನು ನಕ್ಷೆ ಮಾಡುತ್ತದೆ. ಅಲ್ಲದೆ ವಿವಿಧ ಸೇವೆಗಳ ಕುರಿತು ತೆರಿಗೆದಾರರಿಗೆ ಮಾಹಿತಿ ನೀಡುತ್ತದೆ.

2020-21ನೇ ಸಾಲಿನ ಮುಂಗಡ ತೆರಿಗೆಯ ನಾಲ್ಕನೇ ಹಾಗೂ ಕೊನೆಯ ಕಂತು ಪಾವತಿಸಲು ಮಾರ್ಚ್‌ 15 ಕೊನೆಯ ದಿನಾಂಕವಾಗಿದೆ. ತಡವಾಗಿ ಅಥವಾ ಪರಿಷ್ಕೃತ ಆದಾಯವನ್ನು ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಹಾಗೆಯೇ 2019-20ರ ಹಣಕಾಸು ವರ್ಷದ ಕ್ಯೂ 4ಗಾಗಿ ಟಿಸಿಎಸ್ ಹೇಳಿಕೆಯನ್ನು ಸಲ್ಲಿಸಲು ಮೇ 15 ಕೊನೆಯ ದಿನಾಂಕವಾಗಿದೆ.

English summary

IT Department Issues New 2020 Calender For Taxpayers

Income tax department's 2020 calendar is designed as an ITR filing tool
Story first published: Saturday, January 4, 2020, 19:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X