ಈ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಸಂಬಳ, ಯಾವ್ದು ಕಂಪನಿ?
ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದೆನಿಸಿರುವ ಐಟಿಸಿ ತನ್ನ ವಾರ್ಷಿಕ ವರದಿ ಪ್ರಕಟಿಸಿದೆ. ಈ ವರದಿ ಪ್ರಕಾರ ಸಂಸ್ಥೆಯ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಗೂ ಅಧಿಕ ಸಂಬಳ, ಭತ್ಯೆ ಲಭಿಸಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ 2021-22ಕ್ಕೆ ಹೋಲಿಸಿದರೆ 1 ಕೋಟಿ ವಾರ್ಷಿಕ ಸಂಬಳ ಪಡೆದವರ ಪಟ್ಟಿ ಪ್ರಕಟವಾಗಿದೆ.
2020-21ರಲ್ಲಿ ಐಟಿಸಿ ಉದ್ಯೋಗಿಗಳ ಒಟ್ಟು ಸಂಖ್ಯೆಯು ತಿಂಗಳಿಗೆ 8.5 ಲಕ್ಷ ರೂಪಾಯಿ ಅಥವಾ ವರ್ಷಕ್ಕೆ ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಸಂಬಳವನ್ನು 220ಗೂ ಅಧಿಕ ಮಂದಿ ಪಡೆದಿದ್ದಾರೆ. 153ಕ್ಕೂ ಅಧಿಕ ಮಂದಿ ಈ ಹಿಂದಿನ ವರ್ಷ ಪಡೆದಿದ್ದರು ಎಂದು ಐಟಿಸಿಯ ಇತ್ತೀಚಿನ ವಾರ್ಷಿಕ ವರದಿ ತಿಳಿಸಿದೆ.
"ಮಾರ್ಚ್ 31, 2022 ಕ್ಕೆ ಕೊನೆಗೊಂಡಂತೆ ನೀಡಿದ ವರದಿಯಲ್ಲಿರುವಂತೆ 220 ಉದ್ಯೋಗಿಗಳು ವರ್ಷವಿಡಿ ಉದ್ಯೋಗದಲ್ಲಿದ್ದರು ಮತ್ತು ಒಟ್ಟು ರೂ 102 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಿದ್ದರು ಅಥವಾ ವರ್ಷದ ಒಂದು ಭಾಗಕ್ಕೆ ಉದ್ಯೋಗದಲ್ಲಿದ್ದರು ಮತ್ತು ಆರ್ಥಿಕ ವರ್ಷದಲ್ಲಿ ತಿಂಗಳಿಗೆ ರೂ 8.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಿದ್ದರು. " ಎಂದು ತಿಳಿಸಲಾಗಿದೆ.

2022ರ ಆರ್ಥಿಕ ವರ್ಷದಲ್ಲಿ ಐಟಿಸಿ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಂಜೀವ್ ಪುರಿ ಅವರು ಪಡೆದ ಒಟ್ಟು ಸಂಭಾವನೆಯು 2.64 ಕೋಟಿ ರೂ.ಗಳ ಸಂಯೋಜಿತ(consolidated) ಸಂಬಳ, ರೂ. 49.63 ಲಕ್ಷಗಳ ಭತ್ಯೆಗಳು/ಇತರ ಪ್ರಯೋಜನಗಳು ಮತ್ತು 7.52 ಕೋಟಿ ರು ಪರ್ಫಾರ್ಮೆನ್ಸ್ ಬೋನಸ್ ಸೇರಿದಂತೆ 5.35% ಏರಿಕೆ ಕಂಡು12.59 ಕೋಟಿ ರು ಗಳಿಗೆ ಏರಿಕೆಯಾಗಿದೆ. ಪುರಿಯ ವೇತನವು ಎಲ್ಲಾ ಉದ್ಯೋಗಿಗಳ ಸಂಭಾವನೆ ಮತ್ತು ಸರಾಸರಿ ಸಂಭಾವನೆ ಅನುಪಾತದ 224:1 ಆಗಿದೆ ಎಂದು ವಾರ್ಷಿಕ ವರದಿ ಹೇಳಿದೆ.
ಐಟಿಸಿ Q4 ನಿವ್ವಳ ಲಾಭ ಹೆಚ್ಚಳ ಬಳಿಕ ಷೇರುಗಳು ಏರಿಕೆ
FY21 ರಲ್ಲಿ, ಪುರಿಯ ಒಟ್ಟು ಸಂಭಾವನೆ 11.95 ಕೋಟಿ ರೂ ಇತ್ತು. ಐಟಿಸಿ ಕಾರ್ಯನಿರ್ವಾಹಕ ನಿರ್ದೇಶಕ ಬಿ ಸುಮಂತ್ ಮತ್ತು ಆರ್ ಟಂಡನ್ ಅವರು 2022ರ ಆರ್ಥಿಕ ವರ್ಷದಲ್ಲಿ 5.76 ಕೋಟಿ ರೂ ಮತ್ತು 5.60 ಕೋಟಿ ರೂ ಒಟ್ಟು ಸಂಭಾವನೆ ಪಡೆದರು.
ಮಾರ್ಚ್ 31, 2022 ರ ಹೊತ್ತಿಗೆ ಒಟ್ಟು ಐಟಿಸಿ ಉದ್ಯೋಗಿಗಳ ಸಂಖ್ಯೆ 23,829 ರಷ್ಟಿದೆ, ಇದು ಕಳೆದ ಆರ್ಥಿಕ ವರ್ಷಕ್ಕಿಂತ 8.4 ಶೇಕಡಾ ಕಡಿಮೆಯಾಗಿದೆ. ಇದರಲ್ಲಿ 21,568 ಪುರುಷ ಮತ್ತು 2,261 ಮಹಿಳಾ ಉದ್ಯೋಗಿಗಳು ಸೇರಿದ್ದಾರೆ. ಇದಲ್ಲದೆ, ಇದು ಕಾಯಂ ವರ್ಗವನ್ನು ಹೊರತುಪಡಿಸಿ 25,513 ಉದ್ಯೋಗಿಗಳನ್ನು ಹೊಂದಿತ್ತು.
ಐಟಿಸಿ ನೂತನ ಅಧ್ಯಕ್ಷರಾಗಿ ಸಂಜೀವ್ ಪುರಿ ಆಯ್ಕೆ
ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳ (ಕೆಎಂಪಿ) ಸರಾಸರಿ ಸಂಭಾವನೆಯು ಶೇಕಡಾ 8 ರಷ್ಟು ಹೆಚ್ಚಾಗಿದೆ. ಮಾರ್ಚ್ 31, 2022 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ITC ಯ ಒಟ್ಟು ಆದಾಯವು ಒಂದು ವರ್ಷದ ಹಿಂದಿನ 48,151.24 ಕೋಟಿ ರೂ.ಗಳಿಂದ 59,101 ಕೋಟಿ ರೂಗೆ ಏರಿಕೆ ಕಂಡಿದೆ.