For Quick Alerts
ALLOW NOTIFICATIONS  
For Daily Alerts

ಕೋಲ್ಕತ್ತಾ ಮೂಲದ ಸನ್ ರೈಸ್ ಫುಡ್ಸ್ ಖರೀದಿಸಲಿದೆ ಐಟಿಸಿ

|

ಕೋಲ್ಕತ್ತಾ ಮೂಲದ ಸಂಬಾರ ಪದಾರ್ಥಗಳನ್ನು ತಯಾರಿಸುವ ಸನ್ ರೈಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (SFPL) ಖರೀದಿ ಮಾಡುತ್ತಿರುವುದಾಗಿ ಐಟಿಸಿ ಭಾನುವಾರ ತಿಳಿಸಿದೆ. ಈ ವ್ಯವಹಾರದ ಮೂಲಕ ಐಟಿಸಿ ಕಂಪೆನಿಯು ದೇಶದ ಎಫ್ ಎಂಸಿಜಿ ಮಾರ್ಕೆಟ್ ನಲ್ಲಿ ಇನ್ನಷ್ಟು ಗಟ್ಟಿಯಾಗಿ ಕಾಲೂರಲು ಸಾಧ್ಯವಾಗುತ್ತದೆ ಎಂದು ತಿಳಿಸಲಾಗಿದೆ.

SFPLನಲ್ಲಿ ಶೇಕಡಾ ನೂರರಷ್ಟು ಈಕ್ವಿಟಿ ಬಂಡವಾಳ ಖರೀದಿ ಮಾಡುವುದಕ್ಕೆ ಮೇ 23, 2020ರಂದು ಐಟಿಸಿ ಒಪ್ಪಂದ ಮಾಡಿಕೊಂಡಿದೆ. SFPL ಮೂಲತಃ ಸಂಬಾರ ಪದಾರ್ಥಗಳ ವ್ಯಾಪಾರ ಮಾಡುತ್ತದೆ. 'ಸನ್ ರೈಸ್' ಟ್ರೇಡ್ ಮಾರ್ಕ್ ಅಡಿಯಲ್ಲಿ ವಹಿವಾಟು ನಡೆಸುತ್ತದೆ ಎಂದು ಐಟಿಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಹಾರ್ಲಿಕ್ಸ್, ಬೂಸ್ಟ್ ಇನ್ಮುಂದೆ ಹಿಂದೂಸ್ತಾನ್ ಯುನಿಲಿವರ್ ಪಾಲುಹಾರ್ಲಿಕ್ಸ್, ಬೂಸ್ಟ್ ಇನ್ಮುಂದೆ ಹಿಂದೂಸ್ತಾನ್ ಯುನಿಲಿವರ್ ಪಾಲು

ಈಗಾಗಲೇ ಐಟಿಸಿತ್ಯು ಆಶೀರ್ವಾದ್ ಬ್ರ್ಯಾಂಡ್ ಅಡಿಯಲ್ಲಿ ಸಂಬಾರ ಪದಾರ್ಥಗಳನ್ನು ಆಂಧ್ರಪ್ರದೇಶ, ತೆಲಂಗಾಣದಂಥ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಿದೆ. SFPLಗೆ ಇರುವ ವಿತರಣೆ ಸಾಮರ್ಥ್ಯ, ಗ್ರಾಹಕರ ನಂಟು ಇವುಗಳಿಂದ ಬೆಳವಣಿಗೆಗೆ ಇನ್ನಷ್ಟು ಪೂರಕವಾಗುತ್ತದೆ ಎನ್ನಲಾಗಿದೆ.

ಕೋಲ್ಕತ್ತಾ ಮೂಲದ ಸನ್ ರೈಸ್ ಫುಡ್ಸ್ ಖರೀದಿಸಲಿದೆ ಐಟಿಸಿ

ಎಫ್ ಎಂಸಿಜಿ ಸೆಗ್ಮೆಂಟ್ ನಿಂದಲೇ 2030ರ ಹೊತ್ತಿಗೆ 1 ಲಕ್ಷ ಕೋಟಿ ರುಪಾಯಿ ವಹಿವಾಟು ನಡೆಸುವ ಗುರಿಯನ್ನು ಐಟಿಸಿ ಹೊಂದಿದೆ. ಆ ಮೂಲಕ ಸಿಗರೇಟ್ ವ್ಯವಹಾರದಲ್ಲೇ ದೊಡ್ಡ ಆದಾಯ ಬರುತ್ತದೆ ಎಂಬುದರ ಆಚೆಗೂ ಮಾರ್ಕೆಟ್ ವಿಸ್ತರಣೆ ಕಡೆಗೆ ಐಟಿಸಿ ದೃಷ್ಟಿ ನೆಟ್ಟಿದೆ.

ಸನ್ ರೈಸ್ ಫುಡ್ಸ್ ಅನ್ನು ಕೋಲ್ಕತ್ತಾ ಮೂಲದ ಶರ್ಮಾ ಕುಟುಂಬ ನಡೆಸುತ್ತದೆ. ಈ ಸಂಬಾರ ಪದಾರ್ಥಗಳ ವ್ಯವಹಾರಲ್ಲಿ ನೂರು ವರ್ಷಕ್ಕೂ ಹೆಚ್ಚು ಸಮಯದಿಂದ ಇದ್ದಾರೆ. ಮಾರ್ಚ್ 31, 2018ಕ್ಕೆ ಕಂಪೆನಿಯು 400 ಕೋಟಿ ರುಪಾಯಿಗಳ ವಹಿವಾಟು ನಡೆಸಿದ್ದು, 41 ಕೋಟಿ ಲಾಭ ಪಡೆದಿದೆ.

English summary

ITC Set To Acquire 100 Percent Equity Capital In Sunrise Foods

ITC is all set to acquire 100% equity capital in spice manufacturer, Kolkata based Sunrise Foods.
Story first published: Monday, May 25, 2020, 9:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X