For Quick Alerts
ALLOW NOTIFICATIONS  
For Daily Alerts

ಜೆಫ್ ಬೆಜೋಸ್ ಮತ್ತೆ ವಿಶ್ವದ ನಂಬರ್ 1 ಶ್ರೀಮಂತ: ಸುದ್ದಿ ಆಗಿರೋದು ನಂಬರ್ 22

|

ಕೊರೊನಾದಿಂದ ಇಡಿ ವಿಶ್ವವೇ ತಲ್ಲಣಿಸುತ್ತಿರುವಾಗಲೂ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಗೆ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಕ್ಕೇನೂ ಕಡಿಮೆ ಆಗಿಲ್ಲ. 113 ಬಿಲಿಯನ್ ಯು.ಎಸ್. ಡಾಲರ್ ಆಸ್ತಿ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಎಂಬ ಕಿರೀಟ ಸತತ ಮೂರನೇ ವರ್ಷ ಬೆಜೋಸ್ ಪಾಲಾಗಿದೆ. ಫೋರ್ಬ್ಸ್ ನಿಂದ ಬಿಲಿಯನೇರ್ ಗಳ 34ನೇ ವಾರ್ಷಿಕ ಪಟ್ಟಿ ಬಿಡುಗಡೆ ಆಗಿದೆ.

ಅದರಲ್ಲಿ 98 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿದ್ದರೆ, ಬರ್ನಾರ್ಡ್ ಅರ್ನಾಲ್ಟ್ ಗೆ ಮೂರನೇ ಸ್ಥಾನ. ಪಟ್ಟಿಯಲ್ಲಿ ನಾಲ್ಕನೆಯವರಾಗಿ ವಾರೆನ್ ಬಫೆಟ್ ಇದ್ದಾರೆ. ಇವರಿಬ್ಬರ ಆಸ್ತಿ ಕ್ರಮವಾಗಿ 76 ಹಾಗೂ 67.5 ಬಿಲಿಯನ್ ಡಾಲರ್ ಇದೆ. ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಅಚ್ಚರಿಯ ಹೆಸರು ಜೆಫ್ ಬೆಜೋಸ್ ರ ಮಾಜಿ ಪತ್ನಿ ಮೆಕ್ ಕೆಂಜಿ ಅವರದು.

36 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಆಕೆ 22ನೇ ಸ್ಥಾನದಲ್ಲಿ ಇದ್ದಾರೆ. ಒರಾಕಲ್ ಸ್ಥಾಪಕ ಲ್ಯಾರಿ ಎಲಿಸನ್ 59 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 5ನೇ ಸ್ಥಾನದಲ್ಲಿ ಇದ್ದಾರೆ. ಈ ಶತಕೋಟ್ಯಧಿಪತಿಗಳ ಒಟ್ಟು ಆಸ್ತಿ ಮೌಲ್ಯ $ 8 ಟ್ರಿಲಿಯನ್ ಇದೆ. 2020ನೇ ಇಸವಿಯಲ್ಲಿ 8.7 ಟ್ರಿಲಿಯನ್ ಡಾಲರ್ ನಿಂದ ಈ ಮೊತ್ತಕ್ಕೆ ಇಳಿದಿದೆ.

ಜೆಫ್ ಬೆಜೋಸ್ ವಿಶ್ವದ ನಂಬರ್ 1 ಶ್ರೀಮಂತ: ಸುದ್ದಿ ಆಗಿರೋದು ನಂಬರ್ 22

ಈ ವರ್ಷದ ಪಟ್ಟಿಯಲ್ಲಿ 267 ಮಂದಿಯನ್ನು ಕೈ ಬಿಡಲಾಗಿದೆ. 1062 ಮಂದಿಯ ಆಸ್ತಿ ಕುಸಿದುಹೋಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿವ್ವಳ ಆಸ್ತಿ ಮೌಲ್ಯವು ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 1 ಬಿಲಿಯನ್ USD ಕರಗಿಹೋಗಿದೆ ಎಂದು ವರದಿ ಆಗಿದೆ.

English summary

Jeff Bezos Again World's Number 1 Rich According To Forbes List

According to Forbes billionaires list Jeff Bezos become number 1 rich in the world. Here is the interesting details.
Story first published: Thursday, April 9, 2020, 17:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X