For Quick Alerts
ALLOW NOTIFICATIONS  
For Daily Alerts

ಜೆಫ್ ಬೆಜೋಸ್ ಆಸ್ತಿ 15 ಲಕ್ಷ ಕೋಟಿ ಸಮೀಪ: ಹೊಸ ದಾಖಲೆ ಬರೆದ ಸಾಹುಕಾರ

|

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ವ್ಯಾಪಾರ- ವ್ಯವಹಾರಗಳಿಗೆ ಪೆಟ್ಟು ಬಿದ್ದಿದೆ ಅನ್ನೋ ಮಾತನ್ನು ಅದೆಷ್ಟು ಸಲ ಪ್ರಸ್ತಾಪಿಸಲಾಗಿದೆಯೋ! ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಈ ಶ್ರೀಮಂತ ಆಸ್ತಿ ಸಂಪಾದನೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಆಗಸ್ಟ್ 26ನೇ ತಾರೀಕಿನ ಬುಧವಾರ ಜೆಫ್ ಬೆಜೋಸ್ ಆಸ್ತಿ ಮೌಲ್ಯ 200 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿತು.

ವೈಯಕ್ತಿಕ ಇಷ್ಟು ಮೊತ್ತದ ಆಸ್ತಿಯನ್ನು ಮೊದಲ ವ್ಯಕ್ತಿ ಬೆಜೋಸ್ ಎಂಬ ದಾಖಲೆ ಬರೆದರು. ಕೊರೊನಾದ ಹೊಡೆತಕ್ಕೆ ಸಿಲುಕಿ ಯುನೈಟೆಡ್ ಸ್ಟೇಟ್ಸ್ ಆರ್ಥಿಕತೆಯತೆಯೇ ಗಡ ಗಡ ಅಲುಗಾಡುತ್ತಿದ್ದರೂ ಇ ಕಾಮರ್ಸ್ ಕಂಪೆನಿಯಾದ ಅಮೆಜಾನ್ ಷೇರು ಮೌಲ್ಯ ಎತ್ತರೆತ್ತರಕ್ಕೆ ಏರುತ್ತಲೇ ಇದೆ.

ಆಗಸ್ಟ್ 26ನೇ ತಾರೀಕಿನಂದು ಅಮೆಜಾನ್ ಷೇರು 2.3% ಹೆಚ್ಚಳವಾಗಿ, ಪ್ರತಿ ಷೇರಿಗೆ $ 3,423 ತಲುಪಿತು. ಆ ಕಂಪೆನಿಯ ಒಂದೇ ಒಂದು ಷೇರು ಖರೀದಿ ಮಾಡಬೇಕು ಅಂತ ಅಂದರೆ ಭಾರತದ ರುಪಾಯಿಗಳು 2,54,102.98 ಪಾವತಿಸಬೇಕು. ಹೌದು, 2.54 ಲಕ್ಷ ರುಪಾಯಿ ಆಗುತ್ತದೆ. ಈ ರೀತಿ ಅಮೆಜಾನ್ ಷೇರಿನ ಬೆಲೆ ಏರಿಕೆಯಾಗಿದ್ದರಿಂದ ಬೆಜೋಸ್ ಆಸ್ತಿ ಮೌಲ್ಯ 20 ಸಾವಿರ ಕೋಟಿ ಅಮೆರಿಕನ್ ಡಾಲರ್ ಆಯಿತು. ಭಾರತದ ರುಪಾಯಿ ಲೆಕ್ಕದಲ್ಲಿ 15 ಲಕ್ಷ ಕೋಟಿ ಸಮೀಪಕ್ಕೆ ಬಂದಿತು.

ಜೆಫ್ ಬೆಜೋಸ್ ಒಟ್ಟು ಆಸ್ತಿ ಮೌಲ್ಯ $ 204.6 ಬಿಲಿಯನ್

ಜೆಫ್ ಬೆಜೋಸ್ ಒಟ್ಟು ಆಸ್ತಿ ಮೌಲ್ಯ $ 204.6 ಬಿಲಿಯನ್

ನೈಕ್, ಮೆಕ್ ಡೊನಾಲ್ಡ್ ಹಾಗೂ ಪೆಪ್ಸಿ- ಈ ಮೂರು ಕಂಪೆನಿಗಳ ಮೌಲ್ಯ 139ರಿಂದ 191 ಬಿಲಿಯನ್ ಡಾಲರ್ ಆಗುತ್ತದೆ. ಆದರೆ ಬೆಜೋಸ್ ಆಸ್ತಿ ಅವುಗಳನ್ನೂ ಮೀರಿದೆ. ಆಗಸ್ಟ್ 27ನೇ ತಾರೀಕಿಗೆ ಅಮೆಜಾನ್ ಸಿಇಒ- ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಜೆಫ್ ಬೆಜೋಸ್ ಬಳಿ $ 204.6 ಬಿಲಿಯನ್ ಆಸ್ತಿ ಇದೆ. ವಿಶ್ವದ ಎರಡನೇ ಅತ್ಯಂತ ಶ್ರೀಮಂತ ಬಿಲ್ ಗೇಟ್ಸ್ ಆಸ್ತಿ ಮೌಲ್ಯ $ 116.1 ಬಿಲಿಯನ್. ಮೊದಲ ಹಾಗೂ ಎರಡನೇ ಸ್ಥಾನದ ಮಧ್ಯೆ $ 90 ಬಿಲಿಯನ್ ವ್ಯತ್ಯಾಸ ಇದೆ.

ಈ ವರ್ಷದ ಆರಂಭದಿಂದ ಷೇರಿನ ಮೌಲ್ಯ 80% ಹೆಚ್ಚಳ

ಈ ವರ್ಷದ ಆರಂಭದಿಂದ ಷೇರಿನ ಮೌಲ್ಯ 80% ಹೆಚ್ಚಳ

ಈ ವರ್ಷದ ಆರಂಭದಿಂದ ಈಚೆಗೆ ಅಮೆಜಾನ್ ಷೇರಿನ ಬೆಲೆಯಲ್ಲಿ 80% ಹೆಚ್ಚಳ ಆಗಿದೆ. ಈ ಕಂಪೆನಿಯಲ್ಲಿ ಬೆಜೋಸ್ ಪಾಲು 11% ಇದ್ದು, ಒಟ್ಟಾರೆ ಆಸ್ತಿಯಲ್ಲಿ 90%ಗೂ ಹೆಚ್ಚು ಷೇರಿನ ಮೂಲಕವೂ ಹೆಚ್ಚಾಗಿದೆ. ಅಮೆರಿನ್ ವೃತ್ತಪತ್ರಿಕೆ ವಾಷಿಂಗ್ಟನ್ ಪೋಸ್ಟ್ ಹಾಗೂ ಏರೋಸ್ಪೇಸ್ ಕಂಪೆನಿ ಬ್ಲ್ಯೂ ಆರಿಜಿನ್ ಕೂಡ ಬೆಜೋಸ್ ಗೆ ಸೇರಿದ್ದು. ಇದರ ಹೊರತಾಗಿಯೂ ಕೆಲವು ಹೂಡಿಕೆ ಮಾಡಿದ್ದಾರೆ.

ವಿಶ್ವದ ಅತಿ ದುಬಾರಿ ವಿಚ್ಛೇದನದ ಸೆಟ್ಲ್ ಮೆಂಟ್

ವಿಶ್ವದ ಅತಿ ದುಬಾರಿ ವಿಚ್ಛೇದನದ ಸೆಟ್ಲ್ ಮೆಂಟ್

ಈ ತಿಂಗಳಲ್ಲೇ ಹತ್ತು ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ ಬೆಜೋಸ್. ಅದು ಈ ಹಿಂದೆಯೇ ಘೋಷಿಸಿದಂತೆ ಇದ್ದ ವ್ಯವಹಾರದ ಯೋಜನೆ ಭಾಗವಾಗಿ ಹೀಗೆ ಮಾಡಿದ್ದಾರೆ. ಇನ್ನೊಂದು ವಿಚಾರ ಏನೆಂದರೆ, ಜೆಫ್ ಬೆಜೋಸ್ ಆಸ್ತಿ ಮೌಲ್ಯ 200 ಬಿಲಿಯನ್ ಮೌಲ್ಯ ಈ ಹಿಂದೆಯೇ ತಲುಪಬೇಕಿತ್ತು. ಆದರೆ 2019ರಲ್ಲಿ ವಿಶ್ವದ ಅತಿ ದುಬಾರಿ ವಿಚ್ಛೇದನದ ಸೆಟ್ಲ್ ಮೆಂಟ್ ಮಾಡಿಕೊಂಡರು ಬೆಜೋಸ್.

3800 ಕೋಟಿ ಅಮೆರಿಕನ್ ಡಾಲರ್ ಪರಿಹಾರ ಪಾವತಿ

3800 ಕೋಟಿ ಅಮೆರಿಕನ್ ಡಾಲರ್ ಪರಿಹಾರ ಪಾವತಿ

ಕಳೆದ ವರ್ಷ ಜುಲೈ 5ನೇ ತಾರೀಕಿನಂದು ತಮ್ಮ ಪತ್ನಿ ಮೆಕ್ ಕೆಂಜಿ ಸ್ಕಾಟ್ ಗೆ ವಿಚ್ಛೇದನ ಪರಿಹಾರವಾಗಿ 3800 ಕೋಟಿ ಅಮೆರಿಕನ್ ಡಾಲರ್ ಪಾವತಿಸಿದರು. ಇದರಿಂದ ಬೆಜೋಸ್ ಆಸ್ತಿ ಮೌಲ್ಯದಲ್ಲಿ ಕಡಿಮೆ ಆಯಿತು. ಟೀವಿ ನಿರೂಪಕಿಯೊಂದಿಗೆ ಬೆಜೋಸ್ ಗೆ ಸಂಬಂಧ ಇದೆ ಎಂಬ ಕಾರಣಕ್ಕೆ ಇಪ್ಪತ್ತೈದು ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದರು ಮೆಕ್ ಕೆಂಜಿ. ಈ ದಾಂಪತ್ಯಕ್ಕೆ ನಾಲ್ಕು ಮಕ್ಕಳಿದ್ದಾರೆ.

English summary

Jeff Bezos becomes the first person in the world to hit a net worth of $200 billion

Jeff Bezos, Amazon CEO and world's richest become the first person to reach 200 billion USD net worth.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X