For Quick Alerts
ALLOW NOTIFICATIONS  
For Daily Alerts

2026ರ ವೇಳೆಗೆ ಜೆಫ್ ಬೇಜೋಸ್ ಸಂಪತ್ತು 75 ಲಕ್ಷ ಕೋಟಿಗೂ ಹೆಚ್ಚು : ಫೋರ್ಬ್ಸ್‌

|

ವಿಶ್ವದ ಶ್ರೀಮಂತ ವ್ಯಕ್ತಿ ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್ 2026ರ ವೇಳೆಗೆ ವಿಶ್ವದ ಮೊದಲ ಟ್ರಿಲಿಯನೇರ್ ಆಗಬಹುದು ಎಂದು ಫೋರ್ಬ್ಸ್‌ ಅಂದಾಜಿಸಿದೆ.

ಫೋರ್ಬ್ಸ್‌ ನಿಯತಕಾಲಿಕೆ ಪ್ರಕಾರ ಪ್ರಸ್ತುತ 143 ಬಿಲಿಯನ್ ಡಾಲರ್ ಮೌಲ್ಯದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅಮೆಜಾನ್ ಟಾಪ್ ಬಾಸ್ ಜೆಫ್ ಬೆಜೋಸ್ 2026ಕ್ಕೆ ಈ ಅತ್ಯುನ್ನತ ಸಾಧನೆ ಮಾಡಲಿದ್ದಾರೆ ಎಂದು ಅಂದಾಜಿಸಿದೆ.

2026ರ ವೇಳೆಗೆ ಜೆಫ್ ಸಂಪತ್ತು 1000 ಬಿಲಿಯನ್ ಡಾಲರ್

2026ರ ವೇಳೆಗೆ ಜೆಫ್ ಸಂಪತ್ತು 1000 ಬಿಲಿಯನ್ ಡಾಲರ್

ವಿಶ್ವದ ಅಗ್ರ ಶ್ರೀಮಂತ, ಕುಬೇರನಾಗಿರುವ ಜೆಫ್ ಬೇಜೋಸ್ ಸದ್ಯ 143 ಬಿಲಿಯನ್ ಅಮೆರಿಕನ್ ಡಾಲರ್ ಸಂಪತ್ತನ್ನು ಹೊಂದಿ್ದಾರೆ. ಈಗ 56 ವರ್ಷ ವಯಸ್ಸಿನ ಬೆಜೋಸ್ ಅವರು 62 ವರ್ಷ ವಯಸ್ಸಿಗೆ ತಲುಪಿದಾಗ ಅಂದರೆ 2026 ರ ವೇಳೆಗೆ ಟ್ರಿಲಿಯನೇರ್ (ನಿವ್ವಳ ಮೌಲ್ಯ 1,000 ಬಿಲಿಯನ್ ಡಾಲರ್) ಆಗುತ್ತಾರೆ ಎಂದು ಫೋರ್ಬ್ಸ್‌ ಉಲ್ಲೇಖಿಸಿದೆ. ಪ್ರಸ್ತುತ ಭಾರತದ ರುಪಾಯಿಗಳಲ್ಲಿ ಅಂದಾಜು 75 ಲಕ್ಷ ಕೋಟಿಗೂ ಹೆಚ್ಚು.

ಮುಖೇಶ್ ಅಂಬಾನಿ 2033 ರ ವೇಳೆಗೆ ಟ್ರಿಲಿಯನೇರ್ ?

ಮುಖೇಶ್ ಅಂಬಾನಿ 2033 ರ ವೇಳೆಗೆ ಟ್ರಿಲಿಯನೇರ್ ?

ಜೆಫ್ ಬೇಜೋಸ್ 2026 ರ ವೇಳೆಗೆ ಟ್ರಿಲಿಯನೇರ್ ಆದ ವಿಶ್ವದ ಮೊದಲ ವ್ಯಕ್ತಿ ಆಗಬಹುದು ಎಂದು ಹೇಳಲಾದರೆ, ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ 2033 ರ ವೇಳೆಗೆ ಟ್ರಿಲಿಯನೇರ್ ಆಗಬಹುದು ಎಂದು ಅಂದಾಜಿಸಲಾಗಿದೆ. ಹಾಗೂ ಈ ಸಾಧನೆ ಮಾಡಿದ ವಿಶ್ವದ ಐದನೇ ವ್ಯಕ್ತಿ ಆಗಲಿದ್ದಾರೆ ಎಂದು ಹೇಳಿದೆ.

ಎನ್ವೈಎಸ್ಇಯ ಅತ್ಯಂತ ಮೌಲ್ಯಯುತ ಸಂಸ್ಥೆಗಳ ಮಾರುಕಟ್ಟೆ ಮೌಲ್ಯಗಳ ಹೋಲಿಕೆ ಮೂಲಕ ಫೋರ್ಬ್ಸ್ ಅಗ್ರ 25 ಶ್ರೀಮಂತ ವ್ಯಕ್ತಿಗಳನ್ನು ವಿಶ್ಲೇಷಿಸಿದೆ. ಸಂಶೋಧನಾ ವೇದಿಕೆಯು ಕಳೆದ ಐದು ವರ್ಷಗಳಲ್ಲಿ ದಾಖಲಾದ ವಾರ್ಷಿಕ ವಿಸ್ತರಣೆಯ ಸರಾಸರಿ ಶೇಕಡಾವಾರು ಆಧಾರದ ಮೇಲೆ ಈ ಅಂದಾಜು ಮಾಡಿದೆ.

ಈತ ವಿಶ್ವದ ಎರಡನೇ ಟ್ರಿಲಿಯನೇರ್ ಆಗಬಹುದು!

ಈತ ವಿಶ್ವದ ಎರಡನೇ ಟ್ರಿಲಿಯನೇರ್ ಆಗಬಹುದು!

ಫೋರ್ಬ್ಸ್ ಅಧ್ಯಯನದ ಪ್ರಕಾರ, ಚೀನಾದ ರಿಯಲ್ ಎಸ್ಟೇಟ್ ಉದ್ಯಮಿ ಕ್ಸು ಜಿಯಾಯಿನ್ ವಿಶ್ವದ ಎರಡನೇ ಟ್ರಿಲಿಯನೇರ್ ಆಗಬಹುದು.

 

 

ಐದು ವರ್ಷಗಳಲ್ಲಿ ಅಮೆಜಾನ್ ಬೆಳವಣಿಗೆ ಹೆಚ್ಚು

ಐದು ವರ್ಷಗಳಲ್ಲಿ ಅಮೆಜಾನ್ ಬೆಳವಣಿಗೆ ಹೆಚ್ಚು

ಅಧ್ಯಯನದ ಪ್ರಕಾರ, ವಿಶ್ವದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ವ್ಯಾಪಾರಿ ಅಮೆಜಾನ್ ಸಂಸ್ಥಾಪಕರ ನಿವ್ವಳ ಮೌಲ್ಯವು ಕಳೆದ ಐದು ವರ್ಷಗಳಲ್ಲಿ 34 ಪರ್ಸೆಂಟ್‌ನಷ್ಟು ಸಿಎಜಿಆರ್‌ನಲ್ಲಿ ಪ್ರಸ್ತುತ ಅಂಕಿಅಂಶ 143 ಬಿಲಿಯನ್‌ ಡಾಲರ್‌ಗೆ ಬೆಳೆದಿದೆ.

ಕೋವಿಡ್ -19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನ ಪ್ರಾರಂಭದೊಂದಿಗೆ ಮನೆ ವಿತರಣೆಗಳ ಬೇಡಿಕೆ ಹೆಚ್ಚಾದ ಕಾರಣ, ಮುಂಬರುವ ವರ್ಷಗಳಲ್ಲಿ ಅಮೆಜಾನ್‌ನ ವ್ಯವಹಾರವು ಸಂಭಾವ್ಯವಾಗಿ ಏರಿಕೆಯಾಗಬಹುದು. ಇಲ್ಲಿ ಉಲ್ಲೇಖಿಸಬೇಕಾದ ಸಂಗತಿಯೆಂದರೆ, ಪ್ರಸಕ್ತ ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಅಮೆಜಾನ್ 75 ಬಿಲಿಯನ್ ಡಾಲರ್ ಮಾರಾಟವನ್ನು ದಾಖಲಿಸಿದೆ, ಇದು ಹಿಂದಿನ ವರ್ಷದ ಅವಧಿಯಲ್ಲಿ 60 ಬಿಲಿಯನ್ ಡಾಲರ್ ಆಗಿತ್ತು.

ಕೊರೊನಾವೈರಸ್ ಎರಡನೇ ಸುತ್ತಿನಲ್ಲಿ ಹರಡುವ ಎಚ್ಚರಿಕೆಗಳು ಮತ್ತು ಹೆಚ್ಚಿನ ಲಾಕ್‌ಡೌನ್‌ಗಳಿಂದಾಗಿ ಬೇಡಿಕೆ ಹೆಚ್ಚು ಉಳಿಯುವ ನಿರೀಕ್ಷೆಯಿದೆ. ಹೀಗಾಗಿ ಅಮೆಜಾನ್ ವಹಿವಾಟು ಹೆಚ್ಚಾಗಲಿದೆ. ಪ್ರಸ್ತುತ ಜಾಗತಿಕ ಬಿಕ್ಕಟ್ಟಿಗೆ ಮುಂಚೆಯೇ, ಅಮೆಜಾನ್ 2019 ರಲ್ಲಿ 281 ಬಿಲಿಯನ್ ಡಾಲರ್ ಆದಾಯವನ್ನು ವರದಿ ಮಾಡಿದೆ.

 

English summary

Jeff Bezos May Become First Trillionaire By 2026

Amazon top boss Jeff Bezos, who is at present the world's richest person may become the first trillionaire in the world by 2026 According to Forbes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X